Ticker

6/recent/ticker-posts

ಇನ್ನೂ ಕಾಡಿನಲ್ಲೇ

ಕೆಲವು ದಿನಗಳಿಂದ ತುಂಬಾ ಚರ್ಚೆಗೊಳಗಾಗಿರುವ ವಿಷಯ ದೆಹಲಿಯ ಬಸ್ ಒಂದರಲ್ಲಿ ಓರ್ವ ಯುವತಿ ಹಾಗು ಅವಳ ಗೆಳೆಯನ ಮೇಲೆ ನಡೆದ ಅತ್ಯಾಚಾರ ಮತ್ತು ಹಲ್ಲೆ. ಈ ಘಟನೆ ಎಲ್ಲರ ಮನಸ್ಸನ್ನು ಕಲಕಿದೆ.

ಮಹಿಳೆಯರ ಮೇಲಿನ ಅತ್ಯಾಚಾರ, ಚಿಕ್ಕ ಹುಡುಗಿಯರಿಗೆ ಲೈಂಗಿಕ ಕಿರುಕುಳ ಮುಂತಾದ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತಿರುವುದು, ನಾವು ಎಂತಹ ಧರಿದ್ರ ಸಮಾಜದಲ್ಲಿ ಬದುಕುತಿದ್ದೇವೆ ಎಂಬುದನ್ನು ತೋರಿಸುತ್ತದೆ.

ಮಾನವ ನಾಗರೀಕತೆ ಎಂದು ಹೇಳಿಕೊಂಡು ಹಲವಾರು ಕ್ಷೇತ್ರಗಳಲ್ಲಿ ಪ್ರಗತಿ ಸಾದಿಸಿದರೂ, ಅವನ ಮನಸ್ಸು ಮಾತ್ರ ಇನ್ನೂ ಕಾಡಿನಲ್ಲೇ ಅಲೆದಾಡುತ್ತಿರುವುದು ವಿಪರ್ಯಾಸ. ಇಂತಹ ಹೀನ ಕಾರ್ಯಗಳಲ್ಲಿ ತೊಡಗುವವರು ಮನುಜ ಕುಲಕ್ಕೆ ಸೇರಿದವರು ಎಂಬುದನ್ನು ನೆನೆಸಿಕೊಂಡಾಗ , ನಾನು ಸಹ ಆ ವರ್ಗಕ್ಕೆ ಸೇರಿದವನು ಎಂದು ಹೇಳಿಕೊಳ್ಳಲು ನಾಚಿಕೆಯಾಗುತ್ತದೆ.

ಇಂತಹ ಹೀನ ಕಾರ್ಯಗಳಲ್ಲಿ ತೊಡಗುವ ಕಾಮುಕರಿಗೆ ಕಠಿಣ ಶಿಕ್ಷೆಯಾಗಬೇಕು. ಇಂತಹ ಪ್ರಕರಣಗಳು ನಡೆಯದಂತೆ ತಡೆಯಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಇವೆಲ್ಲಾ  ಒಂದು ಕಡೆ ಇರಲಿ. ಮೊದಲು ಮನುಷ್ಯನ ಮನಸ್ಸು ತನ್ನ ಮೃಗೀಯ ಗುಣಗಳನ್ನು ಕಾಡಿನಲ್ಲಿ ಬಿಟ್ಟು, ಹೊರಬಂದು, ತಾನು ಮನುಜನೆಂಬುದನ್ನು ಅರಿತು ನಡೆದು, ನಿಜವಾದ ನಾಗರೀಕತೆಯನ್ನು ಮೈಗೂಡಿಸಿಕೊಂಡು ಬಾಳಿದರೆ ಮಾತ್ರ ಇಂತಹ ದೌರ್ಜನ್ಯಗಳು ಕಡಿಮೆಯಾಗುತ್ತದೆ.

ಅತ್ಯಾಚಾರಕ್ಕೆ ಒಳಗಾದ ಯುವತಿ ಗುಣವಾಗಲಿ ಎಂಬ ಹಾರೈಕೆಯೊಂದಿಗೆ,

-  ಸೆಂದಿಲ್ 


Post a Comment

0 Comments