Ticker

6/recent/ticker-posts

ಮೊದಲ ಬಾರಿಗೆ  ಕನ್ನಡದಲ್ಲಿ,  ನನ್ನ್ ಈ ಬ್ಲಾಗ್ನಲ್ಲಿ ಬರಯುತಿದ್ದೇನೆ. ಇಲ್ಲಿಯವರೆಗೂ ನನ್ನ ಎಲ್ಲಾ ಪೋಸ್ಟುಗಳು ಇಂಗ್ಲಿಷ್ನಲ್ಲೇ ಪ್ರಕಟವಾಗಿವೆ. ನಾನು ಇಂಗ್ಲಿಷ್ನಲ್ಲಿ ಬರೆಯಲು ಕಾರಣ, ಆ ಭಾಷೆಯ ಮೇಲೆ ಹಿಡಿತ ಸಾಧಿಸ ಬೇಕು ಎಂಬುದು  ಹಾಗು ನಾನು ಬ್ಲಾಗ್ ಶುರು ಮಾಡಿದಾಗ ಕನ್ನಡದಲ್ಲಿ ಬರೆಯಬಹುದೆಂದು ನನಗೆ ತಿಳಿಯದೆ ಇದ್ಡದು ಮತ್ತೊಂದು ಕಾರಣ.

ಇನ್ನು ಮುಂದೆ ಇಂಗ್ಲೀಷ್, ಕನ್ನಡ ಹಾಗು ಸಾಧ್ಯವಾದರೆ ತಮಿಳಿನಲ್ಲೂ ಬರೆಯುವ ಆಸೆಯಿದೆ.
 ನಾನು ಬರೆಯುದನ್ನು ಒಂದಿಬ್ಬರು ಗೆಳಯರನ್ನು ಬಿಟ್ಟು  ಬೇರೆ ಯಾರು ಓದುವುದಿಲ್ಲ ಎಂದು ನನಗೆ ತಿಳಿದಿದ್ದರು, ನಾನು ಏಕೇ ಬರೆಯುತ್ತೇನೆ ಎಂದರೆ, ಹಲವು  ವಿಷಯಗಳ ಬಗೆಗಿನ ನನ್ನ ಅನಿಸಿಕೆಗಳನ್ನು ದಾಕಲಿಸಲು ಈ ಬ್ಲಾಗ್ ಒಂದು ಒಳ್ಳೆಯ ಮಾಧ್ಯಮವಾಗಿದೆ .  

ಇದರಿಂದ ಏನಾದರು ಪ್ರಯೊಜನವಿದೆಯೇ ? ಸುಮ್ಮನೆ ಕಾಲಹರಣವಾಗುವುದಿಲ್ಲವೇ? ಎಂದು ನನ್ನನ್ನು ಯಾರಾದರು ಕೇಳಿದರೆ ನನ್ನಲ್ಲಿ ಅದಕ್ಕೆ ಸರಿಯಾದ ಉತ್ತರವಿಲ್ಲದಿದ್ದರೂ , ನಾ ಹೇಳ ಬಯಸುವುದೇನೆಂದರೆ, ಹಲವು ವಿಷಯಗಳ ಬಗೆಗಿನ ನನ್ನ ಅನಿಸಿಕೆಗಳನ್ನು ಹೇಳಿಕೊಳ್ಳಲು ನನಗೆ ಸರಿಯಾದ ವ್ಯಕ್ತಿ ದೊರೆಯದಿರುವುದು ಹಾಗು ಬೇರೆ ಅನಗತ್ಯವಾದ ಕಾಲಹರಣಗಳಲ್ಲಿ ತೊಡಗುವದಕಿಂತ ಇಲ್ಲಿ ಕಳೆಯುವ ಸಮಯ ಅಷ್ಟೇನು ಅಪ್ರಯೋಜಕವಲ್ಲ .

ಯಾರೇ ಓದಲಿ, ಓದದೆ ಇರಲಿ, ನನ್ನ  ಅಭಿಪ್ರಾಯಗಳನ್ನು ಮುಂದಿಡುವುದನ್ನು ಈ ಬ್ಲಾಗ್ನ ಮೂಲಕ ಮುಂದುವರಿಸಲು ಪ್ರಯತ್ನಿಸುತ್ತೇನೆ .

ನನ್ನ ಒಂದೆರಡು ಲೇಖನಗಳನ್ನು ಓದಿ ತಮ್ಮ ಅಭಿಪ್ರಾಯವನ್ನು ತಿಳಿಸಿದ ಗೆಳಯರಾದ ಉಮೇಶ್ ಹಾಗು ಸುನಿಲ್ , ಇವರಿಗೆ ನನ್ನ ವಂದನೆಗಳು .

-------------------------------------------------------------------------------------------------------------

ಯಶ್ ಜೀ - ಕೊನೆಯ ನಮನ 

ಹಿಂದಿ ಚಿತ್ರ ರಂಗದ ಹೆಸರಾಂತ ನಿರ್ದೇಶಕ, ನಿರ್ಮಾಪಕ ಯಶ್ ಚೋಪ್ರ ಅವರು ನಿನ್ನೆ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ನಿಧನರಾದ ಸುದ್ದಿ ತಿಳಿದು ಬೇಸರವಾಯಿತು.

1932 ಸೆಪ್ಟೆಂಬರ್ 27 ರಂದು ಲಾಹೋರಿನ, ಪಂಜಾಬಿ ಕುಟುಂಬದಲ್ಲಿ ಜನಿಸಿದ ಯಶ್ ಚೋಪ್ರ, ಹಿಂದಿ ಚಿತ್ರರಂಗದಲ್ಲಿ ತಮ್ಮದೇಯಾದ ಛಾಪು ಮೂಡಿಸಿದ ಕಲಾವಿದ .

ವಕ್ತ್ , ದೀವಾರ್ ,ತ್ರಿಶೂಲ್ ,ಸಿಲ್ಸಿಲ,ಡರ್ ,ದಿಲ್ ತೋ  ಪಾಗಲ್ ಹೈ ಹಾಗು ವೀರ್ ಜಾರ ಮುಂತಾದ ಯಶಸ್ವಿ ಚಿತ್ರಗಳ ಮೂಲಕ ತಾನೊಬ್ಬ ಉತ್ತಮ ನಿರ್ದೇಶಕ ಎಂಬುದನ್ನು ಸಾಬಿತುಪಡಿಸಿದ ಯಶ್ ಜೀ ಹಲವಾರು ಯಶಸ್ವಿ ಚಿತ್ರಗಳನ್ನು ನಿರ್ಮಿಸಿದ ಉತ್ತಮ ನಿರ್ಮಾಪಕರು ಕೂಡ.

ತೆರೆಗೆ ಬರಲು ಸಿದ್ದವಾಗಿರುವ, ಯಶ್ ಜೀ ನಿರ್ದೇಶಿಸಿದ ಕೊನೆಯ ಚಿತ್ರ ಶಾರುಕ್ ಅಭಿನಯದ ಜಬ್  ತಕ್ ಹೇ ಜಾನ್ . ಏ ಆರ್ ರೆಹಮಾನ್ ರವರ ಸಂಗೀತದ ಹಾಡುಗಳು ಈಗಾಗಲೇ ಜನಪ್ರಿಯವಾಗಿವೆ . ಈ ಚಿತ್ರ ಯಶಸ್ವಿಯಾಗಲೆಂದು ಹರಸುತ್ತಾ , ಯಶ್ ಚೋಪ್ರ ಅವರಿಗೆ ನನ್ನ ನಮನಗಳು .

ಧೈಹಿಕವಾಗಿ  ಮರೆಯಾದರು , ಕಲಾವಿದನು ತನ್ನ ಕಲೆಯ ಮೂಲಕ ಚಿರಂಜೀವಿಯಾಗಿ ಉಳಿಯುತ್ತಾನೆ . ಯಶ್ ಜೀ ಅವರು ತಮ್ಮ ಚಿತ್ರಗಳ ಮೂಲಕ ಚಿತ್ರ ರಸಿಕರ ಮನದಲ್ಲಿ ಸದಾ ಬಾಳುತಿರುತ್ತಾರೆ .

------------------------------------------------------------------------------------------------------------

ಎಲ್ಲರಿಗೂ ದಸರಾ ಹಬ್ಬದ ಶುಭಾಷಯಗಳು  








Post a Comment

0 Comments