Ticker

6/recent/ticker-posts

ನಿನ್ನ ದರ್ಶನಕೆ ಸ್ವಾಮೀ ನಿನ್ನ ದರ್ಶನಕೆ - ಭಕ್ತಿ ಗೀತೆಗಳು

ನಿನ್ನ ದರ್ಶನಕೆ ಸ್ವಾಮೀ ನಿನ್ನ ದರ್ಶನಕೆ - ಭಕ್ತಿ ಗೀತೆಗಳು | Ninna Darushanake Swami Ninna Darushanake Lyrics


ನಿನ್ನ ದರುಶನಕೆ ಸ್ವಾಮೀ ನಿನ್ನ ದರುಶನಕೆ
ಸ್ವರ್ಣಕ್ಷೇತ್ರ ಗುಡಿಯಲ್ಲಿರುವ ನಿನ್ನ ದರುಶನಕೆ
ಹಳ್ಳ ದಿಣ್ಣೆಗಳ ಕಾಡು ಕಳ್ಳುಮುಳ್ಳುಗಳ
ದಾಟಿ ಉಲ್ಲಾಸದಿ ಇಂದು
ನಾವು ಬರುವೆವಯ್ಯಪ್ಪ 

ನಿನ್ನ ದರ್ಶನಕೆ ಸ್ವಾಮೀ ನಿನ್ನ ದರ್ಶನಕೆ
ಸ್ವರ್ಣಕ್ಷೇತ್ರ ಗುಡಿಯಲ್ಲಿರುವ ನಿನ್ನ ದರ್ಶನಕೆ

ಮಂಡಲ ವ್ರತಮಾಡಿ ಮಾಲೆ ಹಾಕಿ ಕೊಂಡೆವು
ಇರುಮುಡಿ ಕಟ್ಟಿ ನಾವು ತಲೆಮೇಲಿಟ್ಟೆವು
ಪಂಪೆಯಲಿ ಮಿಂದು ನಾವು ಪೂಜೆ ಮಾಡಿದೆವು
ಪಂಪಾಮೇಳ ಹಾಡಿ ಕೊಂಡು ಬರುವೆವಯ್ಯಪ್ಪ
ಏರುವುದು ಕಷ್ಟ ಮೇಲೆ ಏರುವುದು ಕಷ್ಟ
ನಿನ್ನ ಕೈಯ ನೀಡಿ ಮಲೆಗಳ ಮೇಲೆ
ಸೇರಿಸು ನನ್ನಯ್ಯ

ನಿನ್ನ ದರ್ಶನಕೆ ಸ್ವಾಮೀ ನಿನ್ನ ದರ್ಶನಕೆ
ಸ್ವರ್ಣಕ್ಷೇತ್ರ ಗುಡಿಯಲ್ಲಿರುವ ನಿನ್ನ ದರ್ಶನಕೆ

ಹಂತ ಹಂತಕೆ ಕೈಯ ನಾವು ಮುಗಿಯುವೆವಯ್ಯಪ್ಪ
ತೆಂಗಿನಕಾಯಿ ಅಡಿಗಡಿಗೆ ಹೊಡೆವೆವಯ್ಯಪ್ಪ
ಹಂತ ಹದಿನೆಂಟನ್ನು ಮುಟ್ಟಿ ಬರುವೆವಯ್ಯಪ್ಪ
ನಿನ್ನ ಮುಂದೆ ನಿಂತು ನಾವು ಬೇಡುವೆವಯ್ಯಪ್ಪ
ದೋಷ ತೀರಿಸು ಸ್ವಾಮಿ ಮೋಕ್ಷ ಕರುಣಿಸು
ಸ್ವಾಮಿ ಕಂಗಳ ತೆರೆದು ನಮ್ಮ ದುಃಖ ಹೋಗಲಾಡಿಸು

ನಿನ್ನ ದರ್ಶನಕೆ ಸ್ವಾಮೀ ನಿನ್ನ ದರ್ಶನಕೆ
ಸ್ವರ್ಣಕ್ಷೇತ್ರ ಗುಡಿಯಲ್ಲಿರುವ ನಿನ್ನ ದರ್ಶನಕೆ

ಸ್ವಾಮಿಯೇ ಶರಣು ಅಯ್ಯಪ್ಪ
ಹರಿಹರಸುತನೇ ಶರಣು ಅಯ್ಯಪ್ಪ
ಹರಿಹರಸುತನ್ ಆನಂದಚಿತ್ತನಯ್ಯನಯ್ಯಪ್ಪ
ಸ್ವಾಮಿಯೇ ಶರಣು ಅಯ್ಯಪ್ಪ

Post a Comment

0 Comments