Ticker

6/recent/ticker-posts

ಮಾರ್ಕ್ ಜುಕರ್‌ಬರ್ಗ್ ಅವರ ೨ ಕೋಟಿ ಮೌಲ್ಯದ ವಾಚ್ : ವಿಶೇಷತೆಗಳೇನು?

ಮಾರ್ಕ್ ಜುಕರ್‌ಬರ್ಗ್ ಅವರ ೨ ಕೋಟಿ ಮೌಲ್ಯದ ವಾಚ್ : ವಿಶೇಷತೆಗಳೇನು? 

ಟೆಕ್ ಉದ್ಯಮದಲ್ಲಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರು ಮಾರ್ಕ್ ಜುಕರ್‌ಬರ್ಗ್. 40 ವರ್ಷ ವಯಸ್ಸಿನವರು ಫೇಸ್‌ಬುಕ್ ಮತ್ತು ಅದರ ಮೂಲ ಕಂಪನಿ ಮೆಟಾವನ್ನು ಹೊಸ ತಾಂತ್ರಿಕ ಗಡಿಗಳಲ್ಲಿ ಮುನ್ನಡೆಸುತ್ತಿದ್ದಾರೆ. ಇಂದು ಅವರು ವಿಶ್ವದ ಅತಿದೊಡ್ಡ ಉದ್ಯಮಿ. ಅವರ ಆಸ್ತಿ ಬಿಲ್ ಗೇಟ್ಸ್ ಗಿಂತ ಹೆಚ್ಚು. ನಿರಂತರವಾಗಿ ಆವಿಷ್ಕಾರಗಳನ್ನು ಮಾಡುವ ಮೂಲಕ ತಂತ್ರಜ್ಞಾನ ಉದ್ಯಮದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಕೆಲವೊಮ್ಮೆ ಅವರು ಬಳಸುವ ಉತ್ಪನ್ನಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತವೆ. 


ಇತ್ತೀಚೆಗೆ, ಮಾರ್ಕ್ ಜುಕರ್‌ಬರ್ಗ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು.ಆಗ ಅವರು ಧರಿಸಿದ್ದ ವಾಚ್ ಎಲ್ಲರ ಗಮನ ಸೆಳೆದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆ ಗಡಿಯಾರದ ಬಗ್ಗೆ ಗೂಗಲ್‌ನಲ್ಲಿ ಹುಡುಕಲು ಅನೇಕರು ಆರಂಭಿಸಿದ್ದಾರೆ. ಅವರು 'De Bethune DB25 Starrry Varius' ವಾಚ್ ಧರಿಸಿದ್ದಾರೆ. 

ನೀಲಿ ಬಣ್ಣದ ಡಯಲ್‌ನಲ್ಲಿ ಪ್ಲಾಟಿನಂ ಬೆಲ್ಟ್ ಹೊಂದಿರುವ ಗಡಿಯಾರವು ಸುಮಾರು USD 2,60,000 ಮೌಲ್ಯದ್ದಾಗಿದೆ ಎಂದು ಹೇಳಲಾಗಿದೆ. ಅಂದರೆ ನಮ್ಮ ಭಾರತೀಯ ಮೌಲ್ಯದಲ್ಲಿ ಸುಮಾರು 2 ಕೋಟಿ ರೂಪಾಯಿ. ಇದರಲ್ಲಿ ಅಚ್ಚರಿಯ ಸಂಗತಿ ಎಂದರೆ ಈ ವಾಚ್ ಉಲ್ಕಾಶಿಲೆಗಳಿಂದ ಮಾಡಲ್ಪಟ್ಟಿದೆ. ಕಂಪನಿಯು ವರ್ಷಕ್ಕೆ ಐದು ಕೈಗಡಿಯಾರಗಳನ್ನು ಮಾತ್ರ ಉತ್ಪಾದಿಸುತ್ತದೆ ಎಂಬುದು ಗಮನಾರ್ಹ.

Post a Comment

0 Comments