ತಿರುಪತಿ ಲಡ್ಡು: 4 ದಿನದಲ್ಲಿ 14 ಲಕ್ಷ ಲಡ್ಡುಗಳು ಮಾರಾಟ | Tirupti Laddu Issue
ಕಳೆದ ಒಂದು ವಾರದಿಂದ ತಿರುಪತಿ ಲಡ್ಡು ವಿಚಾರ ಚರ್ಚೆಯ ವಿಷಯವಾಗಿತ್ತು. ಜಗನ್ಮೋಹನ್ ರೆಡ್ಡಿ ಆಡಳಿತದಲ್ಲಿ ತಿರುಪತಿ ದೇವಸ್ಥಾನದ ಲಡ್ಡುಗಳ ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬಿನೊಂದಿಗೆ, ಮೀನಿನ ಎಣ್ಣೆ, ಹಸು ಮತ್ತು ಹಂದಿಯ ಕೊಬ್ಬನ್ನು ಬಳಸಲಾಗಿತ್ತು ಎಂದು ರಾಷ್ಟ್ರೀಯ ಡೈರಿ ಅಭಿವೃದ್ಧಿ ನಿಗಮದ ಪರೀಕ್ಷೆಯ ಫಲಿತಾಂಶಗಳು ಬಹಿರಂಗಪಡಿಸಿವೆ ಎಂದು ಚಂದ್ರಬಾಬು ನಾಯ್ಡು ಅವರು ಆರೋಪಮಾಡಿದ್ದರು.
ಇದೀಗ ಅದು ರಾಜಕೀಯವಾಗಿ ಭುಗಿಲೆದ್ದಿದ್ದು, ದೇವಸ್ಥಾನದ ಲಡ್ಡುಗಳನ್ನು ತಯಾರಿಸುವ ಪಾವಿತ್ರ್ಯತೆ ಕಾಪಾಡಲು ದೇವಸ್ಥಾನದ ಪಾವಿತ್ರ್ಯತೆ ಕಾಪಾಡಲು ದೇವಸ್ತಾನ ಮಂಡಳಿ ನಿನ್ನೆ ಮಹಾಶಾಂತಿ ಯಾಗ ನಡೆಸಿದೆ.
ಇಂತಹ ವಾತಾವರಣದ ನಡುವೆ ಭಕ್ತರ ಆಗಮನ, ಲಡ್ಡು ವಿತರಣೆ ಎಂದಿನಂತೆ ನಡೆಯುತ್ತಿದೆ ಎನ್ನುತ್ತಾರೆ ದೇವಸ್ಥಾನದ ಆಡಳಿತ ಮಂಡಳಿ. ದೇವಸ್ಥಾನದ ಆಡಳಿತ ಮಂಡಳಿ ಪ್ರಕಾರ ಸೆ.19ರಿಂದ 23ರವರೆಗೆ ನಿತ್ಯ ಮೂರೂವರೆ ಲಕ್ಷ ಲಾಡುಗಳಂತೆ 14 ಲಕ್ಷಕ್ಕೂ ಹೆಚ್ಚು ಲಡ್ಡುಗಳು ಮಾರಾಟವಾಗಿವೆ.
ಅಲ್ಲದೆ, ನಿತ್ಯ 3 ಲಕ್ಷಕ್ಕೂ ಹೆಚ್ಚು ಲಡ್ಡುಗಳನ್ನು ತಯಾರಿಸಲಾಗುತ್ತಿದ್ದು, ದಾಲ್, ಸಕ್ಕರೆ, ಗೋಡಂಬಿ, ಒಣದ್ರಾಕ್ಷಿ, ಬಾದಾಮಿ ಮುಂತಾದ ಪದಾರ್ಥಗಳ ಜತೆಗೆ ನಿತ್ಯ 15 ಸಾವಿರ ಕೆಜಿ ಹಸುವಿನ ತುಪ್ಪವನ್ನು ಬಳಸಲಾಗುತ್ತಿದೆ ಎಂದು ಹೇಳಲಾಗಿದೆ. ಈ ಹಂತದಲ್ಲಿ ಅವರ ನಂಬಿಕೆಯನ್ನು ಬುಡಮೇಲು ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ ಭಕ್ತರು. ಖಾಸಗಿ ಮಾಧ್ಯಮದವರೊಂದಿಗೆ ಮಾತನಾಡಿದ ಕೆಲವು ಭಕ್ತರು, `ನಮ್ಮ ನಂಬಿಕೆ ಅಲುಗಾಡಲಾರದಷ್ಟು ಗಟ್ಟಿಯಾಗಿದೆ. ಹಿಂದೆ ಏನಾಗಿದಿಯೋ ಅದು ಮುಗಿದು ಹೋದ ವಿಷಯ." ಎಂದು ಹೇಳಿದ್ದಾರೆ.
0 Comments
Comment is awaiting for approval