ಬೆಂಡೆಕಾಯಿ ತೊಂಡೆಕಾಯಿ ತೋಟದಲ್ಲಿದೆ - ಮಕ್ಕಳ ಗೀತೆಗಳು [Bendekayi Thondekayi Thotadallide Lyrics in Kannada]
ಬೆಂಡೆಕಾಯಿ ತೊಂಡೆಕಾಯಿ ತೋಟದಲ್ಲಿದೆ
ಉಂಡೆ ಉಂಡೆ ಬೆಲ್ಲ ಬೆಲ್ಲ ಡಬ್ಬದಲ್ಲಿದೆ
ಬೆಂಡೆಕಾಯಿ ತೊಂಡೆಕಾಯಿ ತೋಟದಲ್ಲಿದೆ
ಉಂಡೆ ಉಂಡೆ ಬೆಲ್ಲ ಬೆಲ್ಲ ಡಬ್ಬದಲ್ಲಿದೆ
ಕುಯ್ ಕುಯ್ ನಾಯಿಮರಿ ಎಲ್ಲಿದೆ
ಜಗಲಿಯಲ್ಲಿ ಮೂಲೆಯಲ್ಲಿ ಮಲಗಿದೆ
ಕುಯ್ ಕುಯ್ ನಾಯಿಮರಿ ಎಲ್ಲಿದೆ
ಜಗಲಿಯಲ್ಲಿ ಮೂಲೆಯಲ್ಲಿ ಮಲಗಿದೆ
ಅಡುಗೆ ಕೋಣೆಯಲ್ಲಿ ಪಾತ್ರೆ ಉರುಳಿದೆ
ಅಡುಗೆ ಕೋಣೆಯಲ್ಲಿ ಪಾತ್ರೆ ಉರುಳಿದೆ
ಮರಿಬೇಕ್ಕು ಹಾಲು ಕುಡಿದು ಓಡಿದೆ
ಬೆಂಡೆಕಾಯಿ ತೊಂಡೆಕಾಯಿ ತೋಟದಲ್ಲಿದೆ
ಉಂಡೆ ಉಂಡೆ ಬೆಲ್ಲ ಬೆಲ್ಲ ಡಬ್ಬದಲ್ಲಿದೆ
ಗಗನದಲ್ಲಿ ಮುಗಿಲಮೇಲೆ ಏನಿದೆ
ಬೆಳ್ಳಿ ಬಟ್ಟಲೊಂದು ಅಲ್ಲಿ ತೇಲಿದೆ
ಗಗನದಲ್ಲಿ ಮುಗಿಲಮೇಲೆ ಏನಿದೆ
ಬೆಳ್ಳಿ ಬಟ್ಟಲೊಂದು ಅಲ್ಲಿ ತೇಲಿದೆ
ಹಾರಿ ಬರುವ ಹಕ್ಕಿ ಈಗ ಎಲ್ಲಿದೆ
ಹಾರಿ ಬರುವ ಹಕ್ಕಿ ಈಗ ಎಲ್ಲಿದೆ
ಹಾರಿ ಹೋಗಿ ಮರದ ಮೇಲೆ ಕುಳಿತಿದೆ
ಬೆಂಡೆಕಾಯಿ ತೊಂಡೆಕಾಯಿ ತೋಟದಲ್ಲಿದೆ
ಉಂಡೆ ಉಂಡೆ ಬೆಲ್ಲ ಬೆಲ್ಲ ಡಬ್ಬದಲ್ಲಿದೆ
ಅಟ್ಟದಲ್ಲಿ ಏನೋ ಶಬ್ದ ಆಗಿದೆ
ಹೆಗ್ಗಣವು ಆಚೆ ಈಚೆ ಓಡಿದೆ
ಅಟ್ಟದಲ್ಲಿ ಏನೋ ಶಬ್ದ ಆಗಿದೆ
ಹೆಗ್ಗಣವು ಆಚೆ ಈಚೆ ಓಡಿದೆ
ಹಟ್ಟಿಯಲ್ಲಿ ದನವು ಏಕೋ ಕೂಗಿದೆ
ಹಟ್ಟಿಯಲ್ಲಿ ದನವು ಏಕೋ ಕೂಗಿದೆ
ಹಗ್ಗ ಬಿಚ್ಚಿ ಕರುವು ಎಲ್ಲೋ ಓಡಿದೆ
ಬೆಂಡೆಕಾಯಿ ತೊಂಡೆಕಾಯಿ ತೋಟದಲ್ಲಿದೆ
ಉಂಡೆ ಉಂಡೆ ಬೆಲ್ಲ ಬೆಲ್ಲ ಡಬ್ಬದಲ್ಲಿದೆ
ನನಗೆ ಏಕೋ ನಿದ್ರೆ ಈಗ ಬರುತಿದೆ
ಹೌದು ಈಗ ತುಂಬಾ ರಾತ್ರಿಯಾಗಿದೆ
ನನಗೆ ಏಕೋ ನಿದ್ರೆ ಈಗ ಬರುತಿದೆ
ಹೌದು ಈಗ ತುಂಬಾ ರಾತ್ರಿಯಾಗಿದೆ
ಸುತ್ತಲೆಲ್ಲ ಕತ್ತಲೆಯು ತುಂಬಿದೆ
ಸುತ್ತಲೆಲ್ಲ ಕತ್ತಲೆಯು ತುಂಬಿದೆ
ಲೋಕವೆಲ್ಲ ನಿದ್ರೆಯಲ್ಲಿ ಮುಳುಗಿದೆ
ಬೆಂಡೆಕಾಯಿ ತೊಂಡೆಕಾಯಿ ತೋಟದಲ್ಲಿದೆ
ಉಂಡೆ ಉಂಡೆ ಬೆಲ್ಲ ಬೆಲ್ಲ ಡಬ್ಬದಲ್ಲಿದೆ
ಬೆಂಡೆಕಾಯಿ ತೊಂಡೆಕಾಯಿ ತೋಟದಲ್ಲಿದೆ
ಉಂಡೆ ಉಂಡೆ ಬೆಲ್ಲ ಬೆಲ್ಲ ಡಬ್ಬದಲ್ಲಿದೆ
ಲಲ್ಲ ಲಾಲ ಲಲ್ಲ ಲಾಲ ಲಾಲಲಾಲಲ
ಲಲ್ಲ ಲಾಲ ಲಲ್ಲ ಲಾಲ ಲಾಲಲಾಲಲ
0 Comments
Comment is awaiting for approval