Ticker

6/recent/ticker-posts

ಯಾರು ಏನು ತಿಳಿದರೇನು ತಂದೆ ಅಯ್ಯಪ್ಪನೇ | ಅಯ್ಯಪ್ಪ ಸ್ವಾಮಿ ಭಕ್ತಿ ಗೀತೆಗಳು

ಯಾರು ಏನು ತಿಳಿದರೇನು ತಂದೆ ಅಯ್ಯಪ್ಪನೇ | ಅಯ್ಯಪ್ಪ ಸ್ವಾಮಿ ಭಕ್ತಿ ಗೀತೆಗಳು [Yaaru Enu Thilidarenu Song With Lyrics in Kannada]


ಯಾರು ಏನು ತಿಳಿದರೇನು ತಂದೆ ಅಯ್ಯಪ್ಪನೇ

ಸಾಹಿತ್ಯ: ಹಂಸಲೇಖ

ಸಂಗೀತ: ಹಂಸಲೇಖ

ಗಾಯನ: ರಾಜಕುಮಾರ್



ಯಾರು ಏನು ತಿಳಿದರೇನು ತಂದೆ ಅಯ್ಯಪ್ಪನೇ

ನೀನು ಯಾರು ಎನ್ನುವ ಮೂಲ ಕಂಡೆ ಅಯ್ಯಪ್ಪನೇ

ತಂದೆ ಅಯ್ಯಪ್ಪನೇ ನಿನ್ನ ಕಂಡೆ ಅಯ್ಯಪ್ಪನೇ

ನನ್ನ ಒಳಗಡೆ ನಿನ್ನ ಕಂಡೆ ಅಯ್ಯಪ್ಪನೇ


ಯಾರು ಏನು ತಿಳಿದರೇನು ತಂದೆ ಅಯ್ಯಪ್ಪನೇ

ನೀನು ಯಾರು ಎನ್ನುವ ಮೂಲ ಕಂಡೆ ಅಯ್ಯಪ್ಪನೇ


ಪ್ರಶ್ನೆ ಕೇಳಿಸುವೆ ನೀನೇ ಉತ್ತರ ಹೇಳಿಸುವೆ

ಪ್ರಶ್ನೆ ಕೇಳಿಸುವೆ ನೀನೇ ಉತ್ತರ ಹೇಳಿಸುವೆ

ನಮ್ಮ ಪಾಪಗಳಿಗೆ ಸ್ವಾಮಿ ನೀನೇ ಕನ್ನಡಿಯು

ಮನಸ ಕಡಲ ಕಡೆವುದಯ್ಯ ನಿನ್ನ ಸನ್ನಿಧಿಯೂ


ತಂದೆ ಅಯ್ಯಪ್ಪನೇ ನಿನ್ನ ಕಂಡೆ ಅಯ್ಯಪ್ಪನೇ

ನನ್ನ ಒಳಗಡೆ ನಿನ್ನ ಕಂಡೆ ಅಯ್ಯಪ್ಪನೇ

ನೀನು ಯಾರು ಎನ್ನುವ ಮೂಲ ಕಂಡೆ ಅಯ್ಯಪ್ಪನೇ


ತಂದನ.. ತಂದಾನ.. ತಂದಾನಾ..

ತಂದನ.. ತಂದಾನ.. ತಂದಾನಾ..


ನಿನ್ನ ಕಾಡಿನಲೋ ಕಡು ಪ್ರಾಣಿಗಳೋ..

ನಮ್ಮ ಬಾಳಿನಲೋ ಭಯ ಭೀತಿಗಳೋ..

ಭಯ ತೊರೆದರೆ ನೀ ಕಾಣುವ ಗಿರಿ ಕಾಣುವುದೋ..


ನಿನ್ನ ದಾರಿಯಲೋ ಕಲ್ಲು ಮುಳ್ಳುಗಳೋ..

ನಮ್ಮ ಬಾಳಿನಲೋ ಕಡುಪಾಪಗಳೋ...

ನಿನ್ನ ನೆನೆಯುತ ಕಾಲಿಡುತಿರೆ ಮರುಕಳಿಸುವುದೋ...


ಪ್ರಶ್ನೆ ಕೇಳಿಸುವೆ ನೀನೇ ಉತ್ತರ ಹೇಳಿಸುವೆ

ಭೀತಿ ಮೂಡಿಸುವೆ ನಿನ್ನ ಪ್ರೀತಿ ತೋರಿಸುವೆ..

ನಮ್ಮ ಪಾಪಗಳಿಗೆ ಸ್ವಾಮಿ ನೀನೇ ಕನ್ನಡಿಯು..


ಮನಸ ಕಡಲ ಕಡೆವುದಯ್ಯ ನಿನ್ನ ಸನ್ನಿಧಿಯೂ...

ತಂದೆ ಅಯ್ಯಪ್ಪನೇ ನಿನ್ನ ಕಂಡೆ ಅಯ್ಯಪ್ಪನೇ..

ನನ್ನ ಒಳಗಡೆ ನಿನ್ನ ಕಂಡೆ ಅಯ್ಯಪ್ಪನೇ...

ನೀನು ಯಾರು ಎನ್ನುವ ಮೂಲ ಕಂಡೆ ಅಯ್ಯಪ್ಪನೇ..


ಉರಿ ಬಿಸಿಲಿನಲಿ ನಿನ್ನ ಜಪಿಸುತಲಿ..

ಕಾರಿರುಳಿನಲಿ ನಿನ್ನ ಹರಸುತಲಿ..

ತಾನು ಮರೆಯುವ ಮಲೆ ಏರುವ ನವ ಯೋಗವಿದೋ..


ತಿಳಿ ಗಾಳಿಯಲೀ ನದಿ ತೀರದಲೀ..

ಹರಿ ನೀರಿನಲೀ ಮೈ ಮೀಯುತಲೀ..

ಹದಿನೆಂಟರ ಪಡಿ ಏರುವ ಶುಭಯೋಗವಿದೋ..


ದೂರ ಎನಿಸುವೆ ಬಂದರೆ ಹತ್ತಿರವೇ ಇರುವೆ..

ಅಯ್ಯೋ ಎನ್ನಿಸುವೆ ಆನಂದ ಕಣ್ಣೀರ ತರಿಸುವೆ..

ನಮ್ಮ ಪಾಪಗಳಿಗೆ ಸ್ವಾಮಿ ನೀನೇ ಕನ್ನಡಿಯು..


ಮನಸ ಕಡಲ ಕಡೆವುದಯ್ಯ ನಿನ್ನ ಸನ್ನಿಧಿಯೂ...

ತಂದೆ ಅಯ್ಯಪ್ಪನೇ ನಿನ್ನ ಕಂಡೆ ಅಯ್ಯಪ್ಪನೇ..

ನನ್ನ ಒಳಗಡೆ ನಿನ್ನ ಕಂಡೆ ಅಯ್ಯಪ್ಪನೇ...

ನೀನು ಯಾರು ಎನ್ನುವ ಮೂಲ ಕಂಡೆ ಅಯ್ಯಪ್ಪನೇ..

Post a Comment

0 Comments