ನನ್ನಯ ಬುಗುರಿ ಬಣ್ಣದ ಬುಗುರಿ - ಮಕ್ಕಳ ಗೀತೆಗಳು [Nanneya Buguri Chinnada Buguri Lyrics - Kannada Rhymes]
ನನ್ನಯ ಬುಗುರಿ ಬಣ್ಣದ ಬುಗುರಿ - ಮಕ್ಕಳ ಗೀತೆಗಳು [Nanneya Buguri Chinnada Buguri Lyrics - Kannada Rhymes]
ನನ್ನಯ ಬುಗುರಿ ಬಣ್ಣದ ಬುಗುರಿ
'ಗುರು ಗುರು' ಸದ್ದನು ಮಾಡುವ ಬುಗುರಿ
'ಗುರು ಗುರು' ಸದ್ದನು ಮಾಡುವ ಬುಗುರಿ
ಜಾಳಿಗೆ ಸುತ್ತಿ ಕೈಯನು ಎತ್ತಿ
ಬೀಸಲು ಭರದಿ ಸುತ್ತುವ ಬುಗುರಿ
ಬೀಸಲು ಭರದಿ ಸುತ್ತುವ ಬುಗುರಿ
ಹೊಡೆತಕೆ ಅಂಜದೆ ಕೆಚ್ಚೆದೆಯಿಂದಲಿ
'ಗಿರಿ ಗಿರಿ' ತಿರುಗುವ ಮೆಚ್ಚಿನ ಬುಗುರಿ
'ಗಿರಿ ಗಿರಿ' ತಿರುಗುವ ಮೆಚ್ಚಿನ ಬುಗುರಿ
ಅಂಗೈ ಮೇಲೆ ಆಡುವ ಬುಗುರಿ
ಕಚಗುಳಿಯಿಕ್ಕುವ ಮೋಜಿನ ಬುಗುರಿ
ಕಚಗುಳಿಯಿಕ್ಕುವ ಮೋಜಿನ ಬುಗುರಿ
ಕಾಮನ ಬಿಲ್ಲನು ಭೂಮಿಗೆ ಇಳಿಸಿ
'ಗರ ಗರ' ಸುತ್ತುವ ಬಣ್ಣದ ಬುಗುರಿ
'ಗರ ಗರ' ಸುತ್ತುವ ಬಣ್ಣದ ಬುಗುರಿ
0 Comments
Comment is awaiting for approval