ಆಮೆಯೊಂದು ಕೆರೆಯ ದಡದಿ - ಮಕ್ಕಳ ಗೀತೆಗಳು | Aameyondu Kereya Dadai Lyrics in Kannada
ಆಮೆಯೊಂದು ಕೆರೆಯ ದಡದಿ - ಮಕ್ಕಳ ಗೀತೆಗಳು | Aameyondu Kereya Dadai Lyrics in Kannada
ಆಮೆಯೊಂದು ಕೆರೆಯ ದಡದಿ
ಮನೆಯ ಮಾಡಿತು
ಹಕ್ಕಿಯಂತೆ ಹಾರಬೇಕು
ಎಂದು ಬಯಸಿತು
ಮನೆಯ ಮಾಡಿತು
ಹಕ್ಕಿಯಂತೆ ಹಾರಬೇಕು
ಎಂದು ಬಯಸಿತು
ಗೆಳೆಯ ಹಕ್ಕಿಗಳನು
ಕಂಡು ಆಸೆ ತಿಳಿಸಿತು
ಹಕ್ಕಿಯೆರಡು ಆಮೆ
ಮಾತ ಒಪ್ಪಿಕೊಂಡವು
ಕಂಡು ಆಸೆ ತಿಳಿಸಿತು
ಹಕ್ಕಿಯೆರಡು ಆಮೆ
ಮಾತ ಒಪ್ಪಿಕೊಂಡವು
ಅತ್ತ ಇತ್ತ ಹಕ್ಕಿಯೆರಡು
ಬಾಡಿಗೆ ಹಿಡಿದವು
ಆಮೆ ಅದಕೆ ಜೋತು ಬೀಳೆ
ಹಾರಿಹೋದವು
ಬಾಡಿಗೆ ಹಿಡಿದವು
ಆಮೆ ಅದಕೆ ಜೋತು ಬೀಳೆ
ಹಾರಿಹೋದವು
ದಾರಿಯಲ್ಲಿ ಇದನು ಕಂಡ
ಜನರು ನಕ್ಕರು
ಮಾನ ಹೋಯಿತೆಂದು ಆಮೆ
ಮನದಿ ಕುದಿಯಿತು
ಜನರು ನಕ್ಕರು
ಮಾನ ಹೋಯಿತೆಂದು ಆಮೆ
ಮನದಿ ಕುದಿಯಿತು
ನಕ್ಕ ಜನರ ಬೈಯ್ಯಲೆಂದು
ಬಾಯಿ ತೆರೆಯಿತು
ಮೇಲಿನಿಂದ ಕೆಳಗೆ ಬಿದ್ದು
ಸತ್ತು ಹೋಯಿತು !
ಬಾಯಿ ತೆರೆಯಿತು
ಮೇಲಿನಿಂದ ಕೆಳಗೆ ಬಿದ್ದು
ಸತ್ತು ಹೋಯಿತು !
0 Comments
Comment is awaiting for approval