ಗುಡುಗು ಬಡಿಯಿತು ಮೋಡ ಮುಸುಕಿತು
ಕತ್ತಲಾಯಿತು ಸುತ್ತಲು
ಗಿಡವು ಕಿತ್ತಿತು ಮರವು ಬಾಗಿತು
ಸೋಗೆ ಜಾರಿತು ಎತ್ತಲು
ಕತ್ತಲಾಯಿತು ಸುತ್ತಲು
ಗಿಡವು ಕಿತ್ತಿತು ಮರವು ಬಾಗಿತು
ಸೋಗೆ ಜಾರಿತು ಎತ್ತಲು
ಗಾಳಿ ಎಳೆಯಿತು ಕೊಡೆಯು ತಪ್ಪಿತು
ಕಡ್ಡಿ ಕೆಲವದೊ ಮುರಿಯಿತು
ಧೂಳು ಮುಸುಕಿತು ಎಲೆಗಳುದುರಿತು
ದನಗಳೋಟವು ಕಂಡಿತು
ಕಡ್ಡಿ ಕೆಲವದೊ ಮುರಿಯಿತು
ಧೂಳು ಮುಸುಕಿತು ಎಲೆಗಳುದುರಿತು
ದನಗಳೋಟವು ಕಂಡಿತು
ಸಿಡಿಲ ಬಡಿತಕೆ ಉರಿದು ಹೋಯಿತು
ಎಷ್ಟೋ ತೆಂಗಿನ ಮರಗಳು
ಕಡಿದ ತೆರದೊಳು ಮುರಿಯಿತೆಷ್ಟೋ
ಅಡಿಕೆ ತೋಟದ ಗಿಡಗಳು
ಎಷ್ಟೋ ತೆಂಗಿನ ಮರಗಳು
ಕಡಿದ ತೆರದೊಳು ಮುರಿಯಿತೆಷ್ಟೋ
ಅಡಿಕೆ ತೋಟದ ಗಿಡಗಳು
ಏನು ಅಬ್ಬರ! ಏನು ಕಂಪನ!
ಏನು ಗಾಳಿಯ ಶಕ್ತಿಯೋ!
ಏನು ಎಲ್ಲವ ಮುತ್ತುವಂತಿದೆ
ಯಾವುದಿವುಗಳ ಧ್ಯೇಯವೋ!
ಏನು ಗಾಳಿಯ ಶಕ್ತಿಯೋ!
ಏನು ಎಲ್ಲವ ಮುತ್ತುವಂತಿದೆ
ಯಾವುದಿವುಗಳ ಧ್ಯೇಯವೋ!
ಕತ್ತಲೋಡಿತು ಬೆಳಕು ಹರಿಯಿತು
ಮುಗಿಲ ಮಲ್ಲಿಗೆ ಅರಳಿತು
ಮತ್ತೆ ತಂಪಿನ ಗಾಳಿ ಬೀಸಲು
ನೀರು ಧರೆಯನು ಸೇರಿತು
ಮುಗಿಲ ಮಲ್ಲಿಗೆ ಅರಳಿತು
ಮತ್ತೆ ತಂಪಿನ ಗಾಳಿ ಬೀಸಲು
ನೀರು ಧರೆಯನು ಸೇರಿತು
– ಅಬ್ದುಲ್ ರೆಹಮಾನ್
0 Comments
Comment is awaiting for approval