Ticker

6/recent/ticker-posts

ಗುಪ್ತಗಾಮಿನಿ ನನ್ನ ಶಾಲ್ಮಲ - ಚಂದ್ರಶೇಕರ್ ಪಾಟೀಲ್

ಗುಪ್ತಗಾಮಿನಿ ನನ್ನ ಶಾಲ್ಮಲ - ಚಂದ್ರಶೇಕರ್ ಪಾಟೀಲ್ [Guptagamini Serial Title Song Lyrics in Kannada]


ಎಲ್ಲೋ ಹುಟ್ಟಿ ಎಲ್ಲೋ ಬೆಳೆದು 
ಒಳಗೊಳಗೆ ಹರಿಯುವವಳು
ಜೀವ ಹಿಂಡಿ ಹಿಪ್ಪೆ ಮಾಡಿ 
ಒಳಗೊಳಗೆ ಕೊರೆಯುವವಳು

ಎಲ್ಲೋ ಹುಟ್ಟಿ ಎಲ್ಲೋ ಬೆಳೆದು 
ಒಳಗೊಳಗೆ ಹರಿಯುವವಳು
ಜೀವ ಹಿಂಡಿ ಹಿಪ್ಪೆ ಮಾಡಿ 
ಒಳಗೊಳಗೆ ಕೊರೆಯುವವಳು
ಸದಾ.. ಗುಪ್ತಗಾಮಿನಿ 
ನನ್ನ ಶಾಲ್ಮಲ
ಸದಾ.. ಗುಪ್ತ ಗಾಮಿನಿ 
ನನ್ನ ಶಾಲ್ಮಲ

ಹಸಿರು ಮುರಿವ ಎಲೆಗಳಲ್ಲಿ 
ಬಸಿರ ಬಯಕೆ ಒಸರುವವಳು
ತುಟಿ ಬಿರಿಯುವ ಹೂಗಳಲ್ಲಿ 
ಬೆಂಕಿ ಹಾಡು ಉಸುರುವವಳು

ಹಸಿರು ಮುರಿವ ಎಲೆಗಳಲ್ಲಿ 
ಬಸಿರ ಬಯಕೆ ಒಸರುವವಳು
ತುಟಿ ಬಿರಿಯುವ ಹೂಗಳಲ್ಲಿ 
ಬೆಂಕಿ ಹಾಡು ಉಸುರುವವಳು
ಸದಾ.. ತಪ್ತ ಕಾಮಿನಿ 
ನನ್ನ ಶಾಲ್ಮಲ
ಸದಾ.. ತಪ್ತ ಕಾಮಿನಿ 
ನನ್ನ ಶಾಲ್ಮಲ

ಭೂಗರ್ಭದ ಮೌನದಲ್ಲಿ 
ಧುಮ್ಮೆನುತ ಬಳುಕುವವಳು
ಅರಿವಿಲ್ಲದೆ ಮೈಯ ತುಂಬಿ 
ಕನಸಿನಲ್ಲಿ ತುಳುಕುವವಳು

ಭೂಗರ್ಭದ ಮೌನದಲ್ಲಿ 
ಧುಮ್ಮೆನುತ ಬಳುಕುವವಳು
ಅರಿವಿಲ್ಲದೆ ಮೈಯ ತುಂಬಿ 
ಕನಸಿನಲ್ಲಿ ತುಳುಕುವವಳು
ಸದಾ.. ಸುಪ್ತ ಮೋಹಿನಿ 
ನನ್ನ ಶಾಲ್ಮಲ
ಸದಾ.. ಸುಪ್ತ ಮೋಹಿನಿ 
ನನ್ನ ಶಾಲ್ಮಲ

ನನ್ನ ಬದುಕ ಭುವನೇಶ್ವರಿ 
ನನ್ನ ಶಾಲ್ಮಲ
ನನ್ನ ಹೃದಯ ರಾಜೇಶ್ವರಿ 
ನನ್ನ ಶಾಲ್ಮಲ
ನನ್ನ ಬದುಕ ಭುವನೇಶ್ವರಿ 
ನನ್ನ ಶಾಲ್ಮಲ
ನನ್ನ ಹೃದಯ ರಾಜೇಶ್ವರಿ 
ನನ್ನ ಶಾಲ್ಮಲ..
ಸದಾ.. ಗುಪ್ತಗಾಮಿನಿ 
ನನ್ನ ಶಾಲ್ಮಲ
ಸದಾ.. ಗುಪ್ತಗಾಮಿನಿ 
ನನ್ನ ಶಾಲ್ಮಲ..
ನನ್ನ ಶಾಲ್ಮಲ..

Post a Comment

0 Comments