ಎದ್ದೇಳು ಮಂಜುನಾಥ ಏಳು ಬೆಳಗಾಯಿತು - ಪಿ. ಬಿ. ಶ್ರೀನಿವಾಸ್ | ಕನ್ನಡ ಭಕ್ತಿ ಗೀತೆಗಳು [Eddelu Manjunatha Devotional Song Lyrics In Kannada] : ಶ್ರೀ ಮಂಜುನಾಥ ಸ್ವಾಮಿ ಭಕ್ತಿ ಗೀತೆಗಳು
ಎದ್ದೇಳು
ಎದ್ದೇಳು
ಮಂಜುನಾಥ ಏಳು ಬೆಳಗಾಯಿತು
ಎದ್ದೇಳು
ಎದ್ದೇಳು
ಮಂಜುನಾಥ ಏಳು ಬೆಳಗಾಯಿತು
ಧರ್ಮ ದೇವತೆಗಳು ನಿನ್ನ ದರುಶನಕೆ ಕಾದಿಹರು
ಧರ್ಮ ದೇವತೆಗಳು ನಿನ್ನ ದರುಶನಕೆ ಕಾದಿಹರು
ಅಣ್ಣಪ್ಪ
ಸ್ವಾಮಿಯೂ ನಿನ್ನ ಆಜ್ಞೆಗೆ ನಿಂತಿಹನು
ಎದ್ದೇಳು
ಮಂಜುನಾಥ ಏಳು ಬೆಳಗಾಯಿತು
ಎದ್ದೇಳು..
ಮುನಿಗಣಂಗಳು
ಸ್ತೋತ್ರ ಮಾಡುತಿಹರು
ಮುನಿಗಣಂಗಳು
ಸ್ತೋತ್ರ ಮಾಡುತಿಹರು
ದೇವಾದಿದೇವತೆಗಳೂ
ನಿನ್ನ ದರುಶನಕೇ ಕಾದಿಹರು
ಎದ್ದೇಳು
ಮಂಜುನಾಥ ಎದ್ದೇಳು..
ಮೃಗರಾಜನೂ
ನಿನ್ನ ದರುಶನಕೇ ಬಂದಿಹನು…
ಮೃಗರಾಜನೂ
ನಿನ್ನ ದರುಶನಕೇ ಬಂದಿಹನು…
ಗಜರಾಜನು
ನಿನಗೇ.. ಚಾಮರವ ಬೀಸುತಿಹನು
ಗಜರಾಜನು
ನಿನಗೇ ಚಾಮರವ ಬೀಸುತಿಹನು
ನಿನ್ನ ಆಭರಣಗಳಿಗಾಗಿ ಆದಿಶೇಷನೂ..
ನಿನ್ನ ಆಭರಣಗಳಿಗಾಗಿ ಆದಿಶೇಷನೂ..
ನಿನ್ನ ಸೇರಲೂ ಕಾತರಿಸುತಿಹನು
ಎದ್ದೇಳು
ಮಂಜುನಾಥ ಏಳು ಬೆಳಗಾಯಿತು
ಎದ್ದೇಳು..
ಕೋಗಿಲೆಗಳೂ..
ಕೋಗಿಲೆಗಳೂ..
ಸುಸ್ವರದಿ ಗಾನಮೊಳಗುತಿಹವೂ
ಸರಿಗಪದ…
ಸದಪಗಪ… ದಪಗಸರಿ… ಗರಿಸದಸ…
ಕೋಗಿಲೆಗಳು
ಸುಸ್ವರದಿ ಗಾನ ಮೊಳಗುತಿಹವು
ಸವಿ ಮಾತಿನ
ಅರಗಿಳಿಯೂ ನಿನ್ನ ಧ್ಯಾನದಲಿಹುದೂ
ಪಾರಿವಾಳಗಳು
ನಿನ್ನ ದರುಶನಕೆ ಕಾದಿಹವೂ
ಹೆಗ್ಗಡೆಯ
ದಂಪತಿಗಳು ನಿನ್ನಯ ಸೇವೆಗೆ ಕಾತರಿಸುತಿಹರು
ತಡವು ಏತಕೆ ಪ್ರಭುವೇ
ತಡವು ಏತಕೆ ಪ್ರಭುವೇ ದರುಶನವ
ನೀಡೇಳು
ಎದ್ದೇಳು
ಮಂಜುನಾಥ ಎದ್ದೇಳು ..
ನೇತ್ರಾವತಿಯಲ್ಲಿ
ಮಿಂದು ಜನರೂ.
ವಿಧವಿಧದೀ
ಸೇವೆಗಳ ಗೈಯುತಿಹರೂ
ನೇತ್ರಾವತಿಯಲ್ಲಿ
ಮಿಂದು ಜನರೂ..
ವಿಧವಿಧದೀ ಸೇವೆಗಳ ಗೈಯುತಿಹರೂ
ಸರ್ವರಕ್ಷಕ…
ಸರ್ವರಕ್ಷಕನು ನೀನು ದರುಶನವಾ ನೀಡೇಳೂ
..
ವಿಪ್ರರೆಲ್ಲರೂ
ಕೂಡಿ ವೇದಘೋಷಿಸುತಿಹರೂ ..
ವಿಪ್ರರೆಲ್ಲರೂ
ಕೂಡಿ ವೇದಘೋಷಿಸುತಿಹರೂ ..
ಮೋಕ್ಷವನು
ನೀಡೇಳು ..
ರವಿಯ ಕಿರಣವೂ ನಿನ್ನ ಮಹಾದ್ವಾರವನು
ಬೆಳಗುತಿಹುದೂ…
ದರುಶನವ
ನೀಡೇಳೂ… ಏಳೂ ಬೆಳಗಾಯಿತು …. ಏಳು
ಬೆಳಗಾಯಿತು …….
ಎದ್ದೇಳು
ಮಂಜುನಾಥಾ ಎದ್ದೇಳು.. ಎದ್ದೇಳು ..
0 Comments
Comment is awaiting for approval