Ticker

6/recent/ticker-posts

ಸೋನಿಯ ಹೊಸ ಗ್ಯಾಜೆಟ್ - ಶರ್ಟ್ ಒಳಗೆ ಮಿನಿ ಎಸಿ

ಸೋನಿಯ ಹೊಸ ಗ್ಯಾಜೆಟ್ - ಶರ್ಟ್ ಒಳಗೆ ಮಿನಿ ಎಸಿ [Reon Pocket - Wearable Air Conditioner By Sony] : ಬೇಸಿಗೆ ಕಾಲದಲ್ಲಿ ಬಿಸಿಲಲ್ಲಿ ಬಳಲುವಾಗ, ನಮ್ಮ ಬಟ್ಟೆಯಲ್ಲೇ ಒಂದು ಎಸಿ ಇದ್ದರೆ ಎಷ್ಟು ಚೆನ್ನಾಗಿರುತಿತ್ತು ಎಂದು ನಮ್ಮಲ್ಲಿ ಹಲವರಿಗೆ ಅನಿಸುದ್ದುಂಟು . ಈಗ ಸೋನಿ ಕಂಪನಿ ಅoತಹ ಒಂದು ಎಸಿ ಯನ್ನು ತಯಾರಿಸಿದೆ .

'ರಿಯಾನ್ ಪ್ಯಾಕೆಟ್' [Reon Pocket] ಎಂದು ಕರೆಯಲ್ಪಡುವ ಈ ಸಾಧನವನ್ನು, ನಮ್ಮ  ಬಟ್ಟೆಯ ಸಣ್ಣ ಪಾಕೆಟ್  ನಲ್ಲಿ ಅಳವಡಿಸಿಕೊಳ್ಳಬಹುದು . ಇದಕ್ಕಾಗಿ ರಚಿಸಿರುವ ವಿಶೇಷವಾದ ಬಟ್ಟೆ ಎಸ್, ಎಂ, ಎಲ್ [S, M, L] ಎಂಬ ಮೂರು ಗಾತ್ರಗಳಲ್ಲಿ ಲಭ್ಯವಿದೆ. ಇದನ್ನು 13 ಡಿಗ್ರಿ ಸೆಲ್ಸಿಯಸ್ ತಂಪು  ಮತ್ತು 8 ಡಿಗ್ರಿ ಸೆಲ್ಸಿಯಸ್ ವರೆಗೆ ಬಿಸಿಯನ್ನು ತರುವ ಈ ಸಾಧನವನ್ನು ಬ್ಲೂಟೂತ್ ಮೂಲಕ ನಿಯಂತ್ರಿಸಬಹುದು.


ರೀಚಾರ್ಜಬಲ್ ಬ್ಯಾಟರಿಯೊಂದಿಗೆ ಬರುವ ಈ ಸಾಧನವನ್ನು ಎರಡೂವರೆ ಗಂಟೆಗಳವರೆಗೆ ಚಾರ್ಜ್ ಮಾಡಿದರೆ ಎರಡೂವರೆ ಗಂಟೆಗಳವರೆಗೆ ಬಳಸಬಹುದು. ಸಾಧನವು 85 ಗ್ರಾಂ ತೂಗುತ್ತದೆ ಮತ್ತು ಎರಡು ರೂಪಾಂತರಗಳಲ್ಲಿ ಬರುತ್ತದೆ. ರಿಯಾನ್ ಪಾಕೆಟ್ ಸ್ಟ್ಯಾಂಡರ್ಡ್ ಬೆಲೆ ಸುಮಾರು 9,000 ರೂ. ಮತ್ತೊಂದು ರೂಪಾಂತರವಾದ ರಿಯಾನ್ ಪಾಕೆಟ್ ಲೈಟ್ ಸುಮಾರು 12,000 ರೂ. ಈ ಪ್ಯಾಕೆಟ್ ಎಸಿ 2020 ರ ವೇಳೆಗೆ ಮಾರಾಟಕ್ಕೆ ಬರಲಿದೆ. ಮೊದಲ ಹಂತದಲ್ಲಿ ಜಪಾನ್ ದೇಶದಲ್ಲಿ ಮಾತ್ರ ಈ ಸಾಧನ ದೊರೆಯಲಿದೆ . 



Post a Comment

0 Comments