ಕನ್ನಡದ ಖ್ಯಾತ ಸಾಹಿತಿ ಡಾ.ದೇ.ಜವರೇಗೌಡ [De Javare Gowda] ಅವರು ಇಂದು ಇಹ ಲೋಕವನ್ನು ತ್ಯಜಿಸಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮೈಸೂರಿನ ಜಯದೇವ ಆಸ್ಪತ್ರೆಯಲ್ಲಿ ಸೋಮವಾರ ಸಂಜೆ 6.30ಕ್ಕೆ
ನಿಧನ ಹೊಂದಿದರು.
ಡಾ.ದೇ.ಜವರೇಗೌಡ ಅವರು ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಚಕ್ಕರೆಯಲ್ಲಿ
ಜುಲೈ 6ರಂದು ಜನಿಸಿದ ಅವರ ಹುಟ್ಟು ವರುಷದ ಬಗ್ಗೆ ಬಿನ್ನವಾದ ಮಾಹಿತಿಗಲಿವೆ. 1915, 1917 , ಶಾಲಾ ದಾಖಲಾತಿ ಪ್ರಕಾರ 1918 ಹೀಗೆ ವಿವಿದ ವರುಷಗಳನ್ನು ಹೇಳಲಾಗುತ್ತಿದೆ.
ಬಡ ಕುಟುಂಬದಲ್ಲಿ ಹುಟ್ಟಿದ ಗೌಡರು, ಚಿಕ್ಕಂದಿನಲ್ಲಿ ಶಾಲೆಗೆ ಹೋಗಲಾರದೆ ಕುರಿ ಕಾಯಬೇಕಾಯಿತು. ಆದರೆ ಅವರ ಶಾಲಾ ಗುರುಗಳು ಅವರಿಗೆ ಸಹಾಯ ಮಾಡಿದರು. ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದರು.
ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಎಂ.ಎ ಪದವಿ ಪಡೆದರು.ಅವರಲ್ಲಿ ತುಡಿಯುತ್ತಿದ್ದ ಓದಿನ ಆಸಕ್ತಿ ಅವರನ್ನು ಬೆಂಗಳೂರಿಗೆ ಕರೆ ತಂದಿತು. ಬೆಂಗಳೂರಿನಲ್ಲಿ ಇಂಟರ್ ಮೀಡಿಯೇಟ್ ಮುಗಿಸಿದರು. ಇದೇ ವೇಳೆ, ರಾಷ್ಟ್ರಕವಿ ಕುವೆಂಪು ಅವರ ವಿಚಾರಧಾರೆಗಳಿಂದ ಪ್ರಭಾವಿತರಾಗಿ
ಮೈಸೂರು ವಿವಿಯಲ್ಲಿ ಕನ್ನಡದಲ್ಲಿ ಬಿ.ಎ ಹಾಗು ಎಂ.ಎ ಪದವಿ ಪಡೆದರು.
ಬಳಿಕ, ಮೈಸೂರು
ವಿಶ್ವವಿದ್ಯಾಲಯದಲ್ಲೇ ಅಧ್ಯಾಪಕ, ಸಹಾಯಕ ಪ್ರಾಧ್ಯಾಪಕರಾಗಿ, ಮೈಸೂರು ವಿ.ವಿ ಪರೀಕ್ಷಾಧಿಕಾರಿಯಾಗಿ, ಶಿವಮೊಗ್ಗದ
ಸಹ್ಯಾದ್ರಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿದರು. ನಂತರ ಮೈಸೂರು
ವಿ.ವಿ ಕನ್ನಡ ಅಧ್ಯಯನ ಸಂಸ್ಥೆಯ ಮೊದಲ ನಿರ್ದೇಶಕರಾದರು. ಮೈಸೂರು ವಿ.ವಿ ಸಿಂಡಿಕೇಟ್
ಸದಸ್ಯರಾಗಿದ್ದ ಅವರು, 1969ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ
ತಮ್ಮ ಕನ್ನಡಪರವಾದ ರಚನಾತ್ಮಕ ಚಟುವಟಿಕೆಗಳನ್ನು ಆರು ವರ್ಷಗಳ ಕಾಲ ಮುಂದುವರಿಸಿದರು.
ಡಾ.ದೇ.ಜವರೇಗೌಡ ಅವರು ಪ್ರಾಧ್ಯಾಪಕರಾಗಿ, ಸಾಹಿತಿಯಾಗಿ , ಪರಿಸರವಾದಿಯಾಗಿ ವಿವಿದ್ದ ಸ್ತರಗಳಲ್ಲಿ ಕೆಲಸ ಮಾಡಿದ್ದಾರೆ. ದೇ.ಜವರೇಗೌಡ ಅವರು ವಿವಿಧ ಪ್ರಕಾರಗಳಲ್ಲಿ 135ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ.
ಪತ್ರಿಕೆಗಳು ಮತ್ತು ನಿಯತಕಾಲಿಕಗಳಲ್ಲಿ ನೂರಾರು ಲೇಖನಗಳನ್ನು ಪ್ರಕಟಿಸಿದ್ದಾರೆ. ಟಾಲ್
ಸ್ಟಾಯ್ ಅವರ 'ವಾರ್ ಅಂಡ್ ಪೀಸ್' ಕೃತಿಯನ್ನು 'ಯುದ್ದ ಮತ್ತು ಶಾಂತಿ' ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಡಾ.ದೇ.ಜವರೇಗೌಡ ಅವರು 1970ರಲ್ಲಿ ಬೆಂಗಳೂರಿನಲ್ಲಿ ನಡೆದ 47ನೇ ಕನ್ನಡ
ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ದೇಜಗೌ ತಮ್ಮ ಮಟ್ಟದ ಸಾಹಿತಿಯಲ್ಲ,
ವಿಜ್ಞಾನಿಯಲ್ಲ, ಪರಿಸರವಾದಿಯಲ್ಲ ಎಂದು ಕೆಲವು ಕೀಳರಿಮೆಯ ಪ್ರಾಧ್ಯಾಪಕರುಗಳು
ಮಾತಾಡಿಕೊಳ್ಳುತ್ತಿದ್ದುದುಂಟು. ಇವರು ಕುಲಪತಿಯಾಗಿದ್ದಾಗ ಇವರ ಬಗ್ಗೆ
ಹೊಟ್ಟೆಕಿಚ್ಚಿದ್ದ ಅನೇಕರಿಗೆ ಅವರನ್ನು ಟೀಕಿಸುವುದೇ ಒಂದು ಹವ್ಯಾಸವಿತ್ತು. ಇವರು
ಮರಗಿಡಗಳನ್ನು ಸ್ವತಃ ತಂದು ನೆಡಿಸುತ್ತಿದ್ದ ರೀತಿ ನೀತಿಗಳನ್ನು ಕಂಡು ಇವರನ್ನು ತೋಟದ
ಮಾಲಿ ಎಂದೂ ಲೇವಡಿ ಮಾಡಿದ್ದಾರೆ. ‘ಶ್ರೀಮಾಲಿ( ಹಿಂದಿನ ಒಬ್ಬ ಕುಲಪತಿ) ಹೋದ ಈ ಮಾಲಿ
ಬಂದ ನೋಡಿ’ ಎಂದೂ ಹೇಳುತ್ತಿದ್ದುಂಟು.
ಇವರು ವಿಶ್ವವಿದ್ಯಾಲಯದ ಹಿತದೃಷ್ಟಿಯಿಂದ
ತೋಟಗಾರಿಕೆ ಇಲಾಖೆಯ ಸರ್ವತೋಮುಖ ಬೆಳವಣಿಗೆಗಾಗಿ ಬಹಳ ಸಮಯ ಕಳೆಯುತ್ತಿದ್ದುದುಂಟು.
ಅದಕ್ಕಾಗಿ ಈ ಬಿರುದು. ಅಂತೆಯೇ ಇವರ ಕಾಲದಲ್ಲಿ ಇಂದು ಮಾನಸಗಂಗೋತ್ರಿ ಆವರಣದಲ್ಲಿರುವ
ಬಹುಪಾಲು ವಿಭಾಗೀಯ ಕಟ್ಟಡಗಳೆಲ್ಲಾ ಕಟ್ಟಲ್ಪಟ್ಟವು. ಅವುಗಳನ್ನು ಕಟ್ಟುವ ಎಲ್ಲ
ಹಂತಗಳಲ್ಲೂ ಇವರು ಹಾಜರಿರುತ್ತಿದ್ದರು. ಸಿಮೆಂಟ್ ವಗೈರೆ ಸರಿಯಾಗಿ ಮಿಶ್ರ ಮಾಡಿದ್ದಾರಾ,
ಮರಳು ಜಾಸ್ತಿ ಹಾಕಿ ಸಿಮೆಂಟ್ ಕಡಿಮೆ ಮಾಡಿದ್ದಾರಾ ಇವೆಲ್ಲವನ್ನೂ ಇವರು
ಪರಿಶೀಲಿಸುತ್ತಿದ್ದರು ಮತ್ತು ಪ್ರಾಮಾಣಿಕ ಕಂಟ್ರಾಟುದಾರರು ಹಾಗೂ ಎಂಜಿನಿಯರ್‌ಗಳನ್ನು
ಪ್ರೋತ್ಸಾಹಿಸಿ ಅವರಿಂದ ಉತ್ತಮ ಕೆಲಸ ಮಾಡಿಸುತ್ತಿದ್ದರು. ಹೀಗಾಗಿ ಇವರು ‘ಮೇಸಿ’
‘ಬಸವಯ್ಯ’ ಎಂಬ ಹೆಸರಿನಿಂದಲೂ ಪರಿಚಿತರಾಗಿದ್ದರು.
ಮಾನಸಗಂಗೋತ್ರಿಯ ಗಿಡಮರಗಳು, ಉತ್ತಮ ಕಟ್ಟಡಗಳು
ಗೌಡರ ಪ್ರಾಮಾಣಿಕತೆಗೆ ಮೂಕಸಾಕ್ಷಿಗಳಾಗಿ ನಿಂತಿವೆ. ಇವರ ಬರವಣಿಗೆಗಳು (ಉದಾ: ಕುವೆಂಪು
ಸಾಹಿತ್ಯದಲ್ಲಿ ನಿಸರ್ಗ, ಪ್ರಾಣಿಗಳ ಭಾವಜೀವನ, ಹಾವುಗಳ ಬದುಕು, ಹೊಸಗನ್ನಡ
ಸಾಹಿತ್ಯದಲ್ಲಿ ಋತುವರ್ಣನೆ, ರಾಷ್ಟ್ರೀಯ ಉದ್ಯಾನದ ಮಹಾಶಿಲ್ಪಿ), ಇವರ ಮುನ್ನುಡಿಗಳು
(ಪ್ರಾಣಿ ಪಕ್ಷಿ, ಜೀವ ಶಾಸ ಹೈಮಾಚಲದ ಸಾನ್ನಿಧ್ಯದಲ್ಲಿ, ಪರಿಸರ ಮಾನವ ಸಸ್ಯಶಾಸ ಪರಿಚಯ,
ಕರ್ನಾಟಕದ ಅರಣ್ಯ ವೃಕ್ಷಗಳು- ಮುಂತಾದವುಗಳಲ್ಲಿ) ಹಾಗೂ ಇವರು ಕುಲಪತಿಯಾಗಿದ್ದಾಗಿನ
ಭಾಷಣಗಳು (ಆಯುರ್ವೇದದ ಬಗೆಗಳಿಂದ ಹಿಡಿದು ನಿತ್ಯ ಹರಿದ್ವರ್ಣ ಕಾಡುಗಳವರೆಗೆ ಇವರು
ಕೊಟ್ಟಿರುವ ವೈಜ್ಞಾನಿಕ ವಿವರಣೆಗಳು, ಕನ್ನಡ ನಾಡಿನಲ್ಲಿ ಅದರಲ್ಲೂ ಮಲೆನಾಡಿನಲ್ಲಿ
ಮೇಲಿಂದ ಮೇಲೆ ಜನ್ಮ ತಳೆಯಬೇಕೆಂಬ ಇವರ ಬಯಕೆ, ಕೊಡಗಿನ ಪ್ರಕೃತಿ ಸೌಂದರ್ಯದ ಬಗ್ಗೆ ಇವರ
ಮನೋಜ್ಞ ವಿವರಣೆ, ಶಾರದಾದೇವಿ ಕಾಂತಾರಮಣೀಯತೆಗೆ ಮರುಳಾಗಿ ಮುಂದಡಿ ಇಡದೇ ಇಲ್ಲೇ ನಿಂತಳು
ಎಂಬ ಇವರ ಮನೋಹರ ವಿವರಣೆ ಇಂಥವೆಲ್ಲಾ ದೇಜಗೌರವರನ್ನು ಒಬ್ಬ ಉತ್ತಮ ಪರಿಸರವಾದಿಯೆಂದು
ಕರೆಯುವಂತೆ ಮಾಡಿದೆ.
ಸಾಹಿತ್ಯ
ನಯಸೇನನ ‘ಧರ್ಮಾಮೃತ ಸಂಗ್ರಹ’, 1957
ಲಕ್ಷ್ಮೀಶನ ‘ಜೈಮಿನೀ ಭಾರತ’, 1959
ಕನಕದಾಸರ ‘ನಳಚರಿತ್ರೆ’, 1965
ಆಂಡಯ್ಯನ ‘ಕಬ್ಬಿಗರ ಕಾವ’, 1964
ಚಿಕ್ಕುಪಾಧ್ಯಾಯನ ‘ರುಕ್ಮಾಂಗದ ಚರಿತ್ರೆ’, 1982
ನೇಮಿಚಂದ್ರನ ‘ಲೀಲಾವತೀ ಪ್ರಬಂಧ’, (ಕೆ.ವೆಂಕಟರಾಮಪ್ಪನವರೊಂದಿಗೆ)
ಜಾನಪದ:
‘ಜಾನಪದ ಅಧ್ಯಯನ’, 1976
‘ಜಾನಪದ ಸೌಂದರ್ಯ’, 1977
‘ಜಾನಪದ ವಾಹಿನಿ’, 1983
‘ಜನಪದ ಗೀತಾಂಜಲಿ’, 1978, (ಸಂಪಾದಿತ ಕೃತಿ)
ಭಾಷಾಂತರಗಳು
‘ಹಮ್ಮು ಮತ್ತು ಬಿಮ್ಮು,’ (ಜೇನ್ ಆಸ್ಟಿನ್ ಅವರ ಪ್ರೈಡ್ ಅಂಡ್ ಪ್ರಿಜುಡೀಸ್)
‘ನೆನಪು ಕಹಿಯಲ್ಲ’, (ಕೃಷ್ಣಾ ಹಥೀಸಿಂಗ್ ಅವರ ವಿತ್ ನೋ ರಿಗ್ರೆಟ್ಸ್)
‘ಆನಾ ಕೆರಿನಿನಾ’ (ಲಿಯೋ ಟಾಲ್ ಸ್ಟಾಯ್ ಅವರ ಕಾದಂಬರಿ)
‘ಯುದ್ಧ ಮತ್ತು ಶಾಂತಿ’, (ಲಿಯೋ ಟಾಲ್ ಸ್ಟಾಯ್ ಅವರ ವಾರ್ ಅಂಡ್ ಪೀಸ್)
‘ಪುನರುತ್ಥಾನ’ (ಲಿಯೋ ಟಾಲ್ ಸ್ಟಾಯ್ ಅವರ ರಿಸರೆಕ್ಷನ್)
ಸಾಹಿತಿಗಳ ಸಂಗದಲ್ಲಿ
ಹೋರಾಟದ ಬದುಕು (ಆತ್ಮಕಥೆ)
ಮೋತಿಲಾಲ್ ನೆಹರೂ
ರಾಷ್ಟ್ರಕವಿ ಕುವೆಂಪು
ತೀನಂಶ್ರೀ
ರಾಮಾಯಣ ದರ್ಶನಂ ವಚನ ಚಂದ್ರಿಕೆ
ಕುವೆಂಪು ಸಾಹಿತ್ಯದ ಮೇಲೆ ಹೆಚ್ಚು ಲೇಖನಗಳನ್ನು, ಕೃತಿಗಳನ್ನು ಬರೆದಿದ್ದಾರೆ.
ಜಾನಪದ ಅಧ್ಯಯನ
ಶ್ರೀ ಬಸವೇಶ್ವರರು
ಪ್ರಶಸ್ತಿ/ಪುರಸ್ಕಾರಗಳು
ದೇ. ಜ. ಗೌ. ಅವರು ಸರ್ಕಾರ ಮತ್ತು ಸಾರ್ವಜನಿಕರಿಂದ ಅನೇಕ ಪ್ರಶಸ್ತಿಗಳನ್ನೂ ಸನ್ಮಾನಗಳನ್ನೂ ಪಡೆದಿದ್ದಾರೆ.
ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್,
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ,
ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ,
ತಿರುವನಂತಪುರದ ‘ದ್ರವಿಡಿಯನ್ ಲಿಂಗ್ವಿಸ್ಟಿಕ್ಸ್ ಅಸೋಷಿಯೇಶನ್’ನ ಸೀನಿಯರ್ ಫೆಲೋ ಪ್ರಶಸ್ತಿ,
ಕರ್ನಾಟಕ ಸರ್ಕಾರದ ಪಂಪ ಪ್ರಶಸ್ತಿ
ಕನ್ನಡ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ
ಕನ್ನಡ ಸಾಹಿತ್ಯ ಪರಿಷತ್ತಿನ ನೃಪತುಂಗ ಪ್ರಶಸ್ತಿ
೨೦೦೮ರ ಕರ್ನಾಟಕ ರತ್ನ ಪ್ರಶಸ್ತಿಯನ್ನು ಸರ್ಕಾರ ೨೦೧೦ರಲ್ಲಿ ಘೋಷಿಸಿದೆ.
ಅವರು 1970ರಲ್ಲಿ ಬೆಂಗಳೂರಿನಲ್ಲಿ ನಡೆದ 47ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
‘ಅಂತಃಕರಣ’, ‘ರಸಷಷ್ಠಿ’, ‘ದೇಜಗೌ-ವ್ಯಕ್ತಿ ಮತ್ತು ಸಾಹಿತ್ಯ’, ‘ಅಪೂರ್ವ’ ಮತ್ತು ‘ನಮ್ಮ ನಾಡೋಜ’ಗಳು ಅವರಿಗೆ ಸಂದಿರುವ ಅಭಿನಂದನ ಗ್ರಂಥಗಳು.
ಕರ್ನಾಟಕ ವಿಶ್ವವಿದ್ಯಾನಿಲಯ ೧೯೭೫ ರಲ್ಲಿ ಗೌರವ ಡಾಕ್ಟರೇಟ್ ಪುರಸ್ಕಾರ ನೀಡಿ ಗೌರವಿಸಿತು.
ಕರ್ನಾಟಕ ಸರ್ಕಾರ ೨೦೧೦ ರಲ್ಲಿ ೨೦೦೮ನೇ ಸಾಲಿನ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.
ಡಾ.ದೇ.ಜವರೇಗೌಡ ಅವರ ಜೀವನ ನಮಗೂ ಹಾಗು ಮುಂದಿನ ಪೀಳಿಗೆಗೂ ಆದರ್ಶವಾಗಲಿ. ಕನ್ನಡ ನಾಡು ಅವರನ್ನು ಸ್ಮರಿಸಲಿ.
ಮಾಹಿತಿ : ಅಂತರ್ಜಾಲ
0 Comments
Comment is awaiting for approval