ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ. May 25, 2016 [Karnataka 2nd PUC Results]
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿಯೂ
ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಪಿಯು ಬೋರ್ಡ್‍ನಲ್ಲಿ ಶಿಕ್ಷಣ ಸಚಿವ ಕಿಮ್ಮನೆ
ರತ್ನಾಕರ್ ಸುದ್ದಿಗೋಷ್ಠಿ ನಡೆಸಿ ಫಲಿತಾಂಶವನ್ನು ಪ್ರಕಟಿಸಿದರು
ಈ ಬಾರಿ ಒಟ್ಟು ಶೇ. 57.20ಫಲಿತಾಂಶ ದಾಖಲಾಗಿದೆ. ಮೂರು ವರ್ಷದಲ್ಲಿ ತೀವ್ರ ಕಳಪೆ ಸಾಧನೆ ಇದಾಗಿದ್ದು, ಕಳೆದ ವರ್ಷ ಶೇ. 60.54 ಫಲಿತಾಂಶ ಪ್ರಕಟವಾಗಿತ್ತು.
ಒಟ್ಟು 6,36,368 ವಿದ್ಯಾರ್ಥಿಗಳು ಪರೀಕ್ಷೆ ಬರದಿದ್ದು, ಒಟ್ಟು
3,64,013 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟು 163484(ಶೇ.50.02)
ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದರೆ, 2,50,029(ಶೇ.64.79) ವಿದ್ಯಾರ್ಥಿನಿಯರು
ಉತ್ತೀರ್ಣರಾಗಿದ್ದಾರೆ.
ದಕ್ಷಿಣ ಕನ್ನಡಕ್ಕೆ ಮೊದಲ ಸ್ಥಾನ, ಉಡುಪಿ ಎರಡನೇ ಸ್ಥಾನ,ಕೊಡಗು ಮೂರನೇ
ಸ್ಥಾನ, ಯಾದಗಿರಿಗೆ ಕೊನೆ ಸ್ಥಾನ ಸಿಕ್ಕಿದೆ. ಕಲಾ ವಿಭಾಗದಲ್ಲಿ ಶೇ. 42.12, ವಾಣಿಜ್ಯ
ವಿಭಾಗ ಶೇ.64.16, ವಿಜ್ಞಾನ ವಿಭಾಗ ಶೇ. 62.25 ವಿದ್ಯಾರ್ಥಿಗಳು
ಉತ್ತೀರ್ಣರಾಗಿದ್ದಾರೆ.
ನಗರ ಪ್ರದೇಶ ಶೇ.57.36 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ,
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು 56.66 ರಷ್ಟು ವಿದ್ಯಾರ್ಥಿಗಳು
ಉತ್ತೀರ್ಣರಾಗಿದ್ದಾರೆ. 91 ಸರ್ಕಾರಿ ಕಾಲೇಜುಗಳು ಶೂನ್ಯ ಫಲಿತಾಂಶ ದಾಖಲಿಸಿದ್ದರೆ, 88
ಖಾಸಗಿ ಕಾಲೇಜುಗಳಲ್ಲಿ ಶೂನ್ಯ ಸಂಪಾದನೆ ಮಾಡಿವೆ.
ದಕ್ಷಿಣ ಕನ್ನಡ ಮೊದಲ ಸ್ಥಾನ – ಶೇ.90.48
ಉಡುಪಿ ಎರಡನೇ ಸ್ಥಾನ – ಶೇ.90.35
ಕೊಡಗು ಮೂರನೇ ಸ್ಥಾನ – ಶೇ.79.35
ಯಾದಗಿರಿಗೆ ಕೊನೆ ಸ್ಥಾನ – ಶೇ. 44.16
ಉಡುಪಿ ಎರಡನೇ ಸ್ಥಾನ – ಶೇ.90.35
ಕೊಡಗು ಮೂರನೇ ಸ್ಥಾನ – ಶೇ.79.35
ಯಾದಗಿರಿಗೆ ಕೊನೆ ಸ್ಥಾನ – ಶೇ. 44.16
ಎಷ್ಟು ಮಂದಿ ಡಿಸ್ಟಿಂಕ್ಷನ್?
41,373 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್
1,89,791 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ
78,301 ದ್ವಿತೀಯ ಶ್ರೇಣಿ
54,548 ತೃತೀಯ ಶ್ರೇಣಿ
ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಜೂ. 7ಕ್ಕೆ ಕೊನೆಯ ದಿನಾಂಕ
ಸ್ಕ್ಯಾನಿಂಗ್ ಪತ್ರಿ ಪಡೆಯಲು 400 ರೂ.
ಸ್ಕ್ಯಾನಿಂಗ್ ಪತ್ರಿಗೆ ಸಲ್ಲಿಸಲು ಮೇ 30 ಕೊನೆಯ ದಿನಾಂಕ
ಪರೀಕ್ಷಾ ಶುಲ್ಕ ಕಟ್ಟಲು ಜೂನ್ 6 ಕೊನೆಯ ದಿನಾಂಕ
ಜುಲೈ 1 ರಿಂದ 13 ರವರೆಗೆ ಸಪ್ಲಿಮೆಂಟ್ರಿ ಪರೀಕ್ಷೆ
ಪೂರಕ ಪರೀಕ್ಷೆ ಕಟ್ಟಲು ಒಂದು ವಿಷ್ಯಕ್ಕೆ 101 ರೂ.
ಮೂರು ವಿಷಯಕ್ಕೆ 301 ರೂ.
ಮಾಹಿತಿ : ಅಂತರ್ಜಾಲ
0 Comments
Comment is awaiting for approval