"ಗಂಧದ ಗುಡಿಯಿದು ಮೈಸೂರು ಚಿನ್ನದ ನಾಡಿದು ಮೈಸೂರು"
ಮೊಟ್ಟ ಮೊದಲ ಬಾರಿಗೆ ಗಂಧದ ಗುಡಿ [Gandhada Gudi] ಚಿತ್ರಪಟದ ಪ್ರಸ್ತಾವನೆ ಬಂದಾಗ ರಾಜಕುಮಾರ್ ಒಪ್ಪಿದರು . ಸಂಭಾವನೆ ವಿಷಯದಲ್ಲಿ ಪಾರ್ವತಮ್ಮ ರಾಜಕುಮಾರ್ ಅವರ ಒತ್ತಾಯದ ಮೇರೆಗೆ ಎ೦.ಪಿ. ಶಂಕರ್ ಅವರು ಹೆಚ್ಚಿನ ಸಂಭಾವನೆ ನೀಡಿದರು. ಏಕೆ೦ದರೆ ಆ ಚಿತ್ರಪಟದ ಮೊದಲು ರಾಜಕುಮಾರ್ ಅವರ ಹಲವು ಚಿತ್ರಪಟಗಳು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾದರೂ, ಆವರ ಸಂಭಾವನೆ ಕಡಿಮೆಯಿತ್ತು. ರಾಜಕುಮಾರ್ ಅವರು ಗಂಧದ ಗುಡಿ ಚಿತ್ರಪಟಕ್ಕೆ ಪಡೆದ ಸಂಭಾವನೆ ೬೦,೦೦೦ ರೂಪಾಯಿಗಳು.
ಗಂಧದ ಗುಡಿ ಚಿತ್ರಪಟದ ಅಂತಿಮ ಹಂತದ [Climax] ಚಿತ್ರೀಕರಣ, ವಿಷ್ಣುವರ್ಧನ್ ಅವರು ಪಿಸ್ತೂಲಿನಿ೦ದ ರಾಜಕುಮಾರ್ ಅವರಿಗೆ ಗುಂಡು ಹಾರಿಸುವ ದೃಶ್ಯ . ಈ ದೃಶ್ಯದ ಚಿತ್ರೀಕರಣದ ಮೊದಲು ಎ೦.ಪಿ. ಶಂಕರ್ ಅವರು ರೇಂಜ್ ಅಧಿಕಾರಿ ಪ್ರಭಾಕರ್ ಅವರ ಜೊತೆ ಊಟ ಮುಗಿಸಿ, ಜೀಪಿನಲ್ಲಿ ಚಿತ್ರೀಕರಣ ನಡೆಯುವ ಸ್ಥಳಕೆ ಹೋಗಬೇಕಾದರೆ, ಅಸಲಿ ಹಾಗೂ ನಕಲಿ ಪಿಸ್ತೂಲುಗಳು ಅದಲು ಬದಲಾಗಿರುವುದು ತಿಳಿಯಿತು.
ಆಗಲಿರುವ ಅನಾಹುತವನ್ನು ತಪ್ಪಿಸಲು ತಕ್ಷಣ ಚಿತ್ರೀಕರಣದ ಸ್ಥಳಕ್ಕೆ ಧಾವಿಸಿ ಪಿಸ್ತೂಲು ಅದಲು ಬದಲಾಗಿರುವ ವಿಚಾರ ತಿಳಿಸಿ, ನಿಜವಾದ ಗುಂಡುಗಳಿದ್ದ ಪಿಸ್ತೂಲು ತೆಗೆದುಕೊಂಡು ಹೋದರು ಎ೦.ಪಿ. ಶಂಕರ್.
ಆದರೆ ಈ ಘಟನೆ ಹೊರಗಡೆ ಗೊತ್ತಾಗುವಷ್ಟರಲ್ಲಿ ಬೇರೆಯೇ ರೂಪ ಪಡೆದಿತ್ತು. ಹಾಗಾಗಿ ಈ ಚಿತ್ರಪಟದ ನ೦ತರ ರಾಜಕುಮಾರ್ ಹಾಗು ವಿಷ್ಣುವರ್ಧನ್ ಮುಂದೆ ಯಾವುದೇ ಚಿತ್ರಪಟಗಳಲ್ಲಿ ಓಟ್ಟಿಗೆ ತೆರೆ ಹಂಚಿಕೊಳ್ಳಲು ಆಗಲಿಲ್ಲ ಎನ್ನುವುದು ವಿಷಾದದ ಸಂಗತಿ.
ಗಂಧದ ಗುಡಿ ಚಿತ್ರದ ಮೂಹೂರ್ಥದ ಸಂಧರ್ಭದಲ್ಲಿ ನಟರಾದ ರಾಜಕುಮಾರ್, ವಿಷ್ಣುವರ್ಧನ್, ನರಸಿಂಹರಾಜು ಹಾಗು ನಿರ್ಮಾಪಕರಾದ ಎನ್. ವೀರಾಸ್ವಾಮಿ. |
0 Comments
Comment is awaiting for approval