ನಾಯಂಡಹಳ್ಳಿ - ಬೈಯಪ್ಪನಹಳ್ಳಿ ಮೆಟ್ರೋ ಸುರಂಗ ಮಾರ್ಗ [Nayandahalli to Bypanahalli Metro Rail] : ದಕ್ಷಿಣ ಭಾರತದ ಮೊಟ್ಟ ಮೊದಲ ಮೆಟ್ರೋ ಸುರಂಗ ಮಾರ್ಗ ತಿಂಗಳಾಂತ್ಯಕ್ಕೆ ಸಂಚಾರಕ್ಕೆ ಮುಕ್ತಗೊಳ್ಳುತ್ತಿದ್ದು, ನಾಯಂಡಹಳ್ಳಿಯಿಂದ ಬೈಯಪ್ಪನಹಳ್ಳಿವರೆಗಿನ ಮೆಟ್ರೋ ಸಂಚಾರಕ್ಕೆ ಇದ್ದ ಎಲ್ಲ ಅಡೆತಡೆಗಳು ನಿವಾರಣೆಗೊಂಡಿದ್ದು, ತಿಂಗಳಾಂತ್ಯಕ್ಕೆ ಸುರಂಗ ಮಾರ್ಗದ ಮೂಲಕ ಮೆಟ್ರೋ ರೈಲು ಸಂಚರಿಸಲು ಸಿದ್ದತೆಗಳು ನಡೆದಿವೆ.
18 ಕಿ.ಮೀ. ದೂರದ ಬೈಯಪ್ಪನಹಳ್ಳಿಗೆ ನಾಯಂಡಹಳ್ಳಿಯಿಂದ ಸುರಂಗ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರಕ್ಕೆ ಎಲ್ಲ ಪೂರ್ವಾನುಮತಿ ದೊರೆತಿದೆ. ಈಗಾಗಲೇ ರೈಲ್ವೆ ಸುರಕ್ಷತಾ ಆಯುಕ್ತರು ಸುರಂಗ ಮಾರ್ಗದ ಮೆಟ್ರೋ ಸಂಚಾರಕ್ಕೆ ಅನುಮತಿ ನೀಡಿದ್ದಾರೆ. ನಾಯಂಡಹಳ್ಳಿಯಿಂದ ಬಸ್ ಇಲ್ಲವೇ ಸ್ವಂತ ವಾಹನದ ಮೂಲಕ ಬೈಯಪ್ಪನಹಳ್ಳಿ ತಲುಪಬೇಕಾದರೆ ಮೂರ‍್ನಾಲ್ಕು ತಾಸು ಬೇಕಾಗುತ್ತದೆ.
ನಾಯಂಡಹಳ್ಳಿಯಿಂದ ಬೈಯಪ್ಪನಹಳ್ಳಿವರೆಗಿನ ಮೆಟ್ರೋ ರೈಲು ಸಂಚಾರ ಆರಂಭವಾದರೆ ಬಹಳಷ್ಟು ಸಮಯವನ್ನು ಉಳಿಸಬಹುದು. ವಾಹನ ದಟ್ಟಣೆ ಸಹ ತಕ್ಕ ಮಟ್ಟಿಗೆ ಕಡಿಮೆಯಾಗುವ ಸಾಧ್ಯತೆಯಿದೆ.

ನಾಯಂಡಹಳ್ಳಿ - ಬೈಯಪ್ಪನಹಳ್ಳಿ ಸುರಂಗ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರಕ್ಕೆ ಸಾರ್ವಜನಿಕರು ಇನ್ನು ೧೫ ದಿನಗಳ ಕಾಲ ಕಾಯಬೇಕಾಗಿದೆ . ಎಷ್ಟರ ಮಟ್ಟಿಗೆ ಈ ರೈಲು ಸಂಚಾರ ಉಪಯೋಗವಾಗಲಿದೆ ಹಾಗು ಸಾರ್ವಜನಿಕರು ಎಷ್ಟರ ಮಟ್ಟಿಗೆ ಇದನ್ನು ಬಳಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
0 Comments
Comment is awaiting for approval