ಅಂದು ೨೦ ಅಕ್ಟೋಬರ್೨೦೧೫ ,ಸಮಯ ಸುಮಾರು ೧೧ ಗಂಟೆ ,ಹೀಗೆ ಮದುವೆ ಬಗ್ಗೆ ಯೋಚಿಸುಥ ಕೂತೆ .. ನನ್ನ ಫೋನ್ ಗೆ ಒಂದು ಕರೆ ಬಂತು .. ನಾನು ಯಾರಪ್ಪ ಫೋನ್ ಮಾಡಿರೋದು ಅನ್ಕೊಂಡು ಫೋನ್ ಎತ್ತಿಕೊಂಡು ಹಲೋ ಯಾರು? ಅಂದೇ ಆಕಡೆ ಇಂದ ದೊಡ್ಡ ಧ್ವನಿ ಯಲ್ಲಿ ಹುಡ್ಗನ ಅಪ್ಪ ,ನನ್ನ ಮಗ ನಿಗೆ ಮದುವೆ ಗೆ ಹುಡುಗಿ ನೋಡ್ತಾ ಎದಿವಿ , ಇದ್ರು ಬಗ್ಗೆ ದೊಡ್ಡವರ ಜೊತೆ ಮಾತಾಡಬೇಕಿತ್ತು ಅಂದಾಗ ನಾನು ಧೈರ್ಯ ಇಂದ ಏನ್ ಮಾತಾಡೋ ಹಾಗಿದ್ರೂ ನನ್ನ ಬಳಿ ತಿಳಿಸಿ ಅಂದೆ ಅಗಾ ಹುಡ್ಗ ನ ಅಪ್ಪ ನಿನ್ ಮ್ಯಾರೇಜ್ ಪ್ರೊಫೈಲ್ ಮತ್ತು ಫೋಟೋ ನ ಸೋಶಿಯಲ್ ನೆಟ್ವರ್ಕ್ ಲಿ ನೋಡಿ ಇಷ್ಟ ಆಗಿದೆ ಅಂತ ತಿಳ್ಸಿದ್ರು .
ಸಂತೋಷಗೊಂಡ ನಾನು ನಿಮ್ ಮಗ ಏನ್ ಮಾಡ್ಕೊಂಡಿರೋದು ಮ್ಯಾರೇಜ್ ಪ್ರೊಫೈಲ್ ಕಳ್ಸಿ ಅಂಕಲ್ ನೋಡ್ತೀನಿ ಅಂದೇ , ಅವಾಗ ಹುಡ್ಗನ ಅಪ್ಪ , ನಾವು ಮೂಲತಃ ಬ್ಯಾಂಗಲೋರ್ ನವರು ಸ್ವಂತ ಮನೆ ಇದೆ ಬಾಡಿಗೆ ಬರುತ್ತೆ , ಹುಡ್ಗ ಇಂಜಿನಿಯರ್ , ಒಬ್ನೇ ಮಗ ಅಂದಾಗ ನನ್ನ ಮನಸಿಗೆ ಎಲ್ಲೊ ಒಂದ್ ಕಡೆ ನಾನು ಬಯಸುವಂತೆ ಇದೆ ಅನಸಿತು .ಸರೀ ಅಂಕಲ್ ಹುಡ್ಗ ನ ಪ್ರೊಫೈಲ್ ನೋಡಿ ನಿಮಗೆ ಮರು ಉತ್ತರ ನಿಡ್ತೀನಿ ಅಂದು ಫೋನ್ ಕಟ್ ಮಾಡ್ದೆ.
ಹಾಗೆ ಪ್ರೊಫೈಲ್ ಗಾಗಿ ಕಾದು ಕುಳಿತೆ , ಮನಸಿನಲ್ಲಿ ನೂರೆಂಟು ಯೋಚನೆಗಳು , ಹುಡ್ಗ ನೋಡೋಕೆ ಚೆನ್ನಾಗಿದ್ರೆ ಒಪ್ಕೋ ಬಿಡಣ ಎಂದು ಅನ್ಕೊಳ್ಥ ಇದ್ದಹಾಗೆ , ವಾಟ್ಸ್ಆಪ್ ಲಿ ಹುಡ್ಗ ನ ಪ್ರೊಫೈಲ್ ಬಂದೆ ಬಿಡ್ತು .೨ಜೀ ನೆಟ್ವರ್ಕ್ ಇಂದ ಡೌನ್ಲೋಡ್ ಆಗದ ಹುಡ್ಗ ನ ಫೋಟೋ .. ಮನಸಿನ ತಳಮಳ ಹೆಚ್ಚು ತಿದಂತೆ , ಫೋಟೋ ಡೌನ್ಲೋಡ್ ಆಯಿತು .. ಹುಡುಗ ನ ಫೋಟೋ ನೋಡಿ ಒಂದ್ ಕ್ಷಣ ಏನು ತೋಚ ದಂತೆ ಆದೆ . ತಕ್ಷಣ ಆಕಡೆ ಇಂದ ಹುಡ್ಗ " I Am Quite Impressed ", ನಿಮ್ಮ ಅಭಿಪ್ರಾಯ ತಿಳ್ಸಿ ಎಂದು ಮೆಸೇಜ್ ಕಳ್ಸಿದರು . ನಂಗೆ ಏನು ಉತ್ತರ ನೀಡಬೇಕೆಂದು ತಿಳಿಯದೆ ಮೌನಳಾದೆ.
2 Comments
nice story.. plz complete it ...
ReplyDeleteInteresting... Waiting for the complete story.... please post rest of it soon.
ReplyDeleteComment is awaiting for approval