ಊರಿಗೆ ಬರುವುದರ ಬಗ್ಗೆ ಯೋಚನೆ ಮಾಡಿ ತಿಳಿಸುವದಾಗಿ ಹೇಳಿದರು. ನಾನು ಅವರ ಬರುವಿಕೆಯನ್ನು ನಿರೀಕ್ಷಿಸುತ್ತಾ ದಿನಗಳನ್ನು ಮುಂದೂಡುತಿದ್ದೆ.
ಹೀಗೆ ದಿನಗಳು ಉರಿಳಿದವು , ಸುಮಾರು ಒಂದು ತಿಂಗಳ ನಂತರ, ಹುಡ್ಗನ ಫೋಟೋ ನೋಡಿ ಉತ್ತರ ಕೊಡದೆ ಮೌನಳಾಗಿದ್ದ ನನ್ನ ಮೌನದ ಹಿಂದಿನ ಮಾತುನ್ನು ಕೇಳುವ ಸಲುವಾಗಿ ಆ ಹುಡುಗ ಮತ್ತೆ ಮೆಸೇಜ್ ಕಳುಹಿಸಿದರು. ಅವರಿಗೆ ಉತ್ತರ ನೀಡದೆ ಮೌನಳಾಗಿದ್ದ ನಾನು ಮಾತಾಡಲೇ ಬೇಕಾಯಿತು. ದಪ್ಪಗಿದ್ದ ಕಾರಣ ನಾನು ಅವರನ್ನು ಒಪ್ಪಿಕೊಳ್ಳಲಿಲ್ಲ. ಇದನ್ನು ಅವರಿಗೆ ಡೈರೆಕ್ಟ್ ಆಗಿ ಹೇಳಿದ್ರೆ ಬೇಸರ ಆಗಬಹುದು ಎಂದು ಯೋಚಿಸಿ ಬಲು ಜಾಣ್ಮೆಯಿಂದ ನಾನು ತುಂಬ ಸಣ್ಣ ಇರುವದಾಗಿ ಹಾಗು ಅವರಿಗೆ suitable pair ಆಗದಿರುವ ಬಗ್ಗೆ ಹೇಳಿದ್ದೆ .
ಇದನ್ನು ಕೇಳಿಸಿಕೊಂಡು ಸುಮ್ಮನಾಗದ ಅವರು "ನಾನು ಸಣ್ಣ ಆದ್ರೆ, ನನಗೊಂದು ಚಾನ್ಸ್ ಕೊಡ್ತೀರ? "ಎಂದಾಗ ಏನು ತೋಚದ ನಾನು.. ಒಮ್ಮೆ ಬೇಟಿ ಆಗುವದಾಗಿ ತಿಳ್ಸಿದೆ. ಒಪ್ಪಿಕೊಂಡ ಅವರು ಮಾತ್ ಮಾತಿಗೂ "I was quite impressed on u", "plz marry me" ಎನ್ನುತ್ತಿದರು . ಅವರ ಮಾತಿಗೆ ತಲೆ ಕೆಡಿಸಿಕೊಳ್ಳದ ನಾನು ನೋಡಣ ನೋಡಣ ಎನುತ್ತಾ ದಿನಗಳನ್ನೂ ತಳ್ಳುತ್ತಿದ್ದೆ.
ಹೀಗೆ ಮೆಸೇಜ್ ಮಾಡುತ್ತ ನನ್ನ ಆಸೆ ಕನಸುಗಳನ್ನ ಅವರ ಬಳಿ ಹಂಚಿಕೊಂಡೆ. ಆಗಲೇ ಗೊತ್ತಾಗಿದ್ದು ನನ್ನ ಆಸೆ ಕನಸ್ಸುಗಳು ಅವರ ಆಸೆ ಕನಸ್ಸುಗಳು ಕೆಲವಂದು ವಿಚಾರದಲ್ಲಿ ಒಂದೇ ಆಗಿದ್ದವು ಹಾಗು ನನ್ನ ಕನಸುಗಳನ್ನ ಈಡೇರಿಸುವದಾಗಿ ಮತ್ತು ನನ್ನನ್ನು ರಾಣಿ ಹಾಗೆ, ಪ್ರೀತಿಯಿಂದ ನೋಡಿಕೊಳ್ಳುವ ಭರವಸೆ ಕೊಟ್ಟರು. ಇಷ್ಟೆಲ್ಲಾ ಹೇಳುತ್ತಿದ್ದ ಅವರನ್ನು ಬೇಟಿ ಆಗಲೇ ಬೇಕೆಂದು ನನ್ನ ಮನಸ್ಸು ನಿರ್ಧರಿಸಿದರು, ನಮ್ಮ ಬೇಟಿಗೆ ದಿನಗಳೇ ಸಿಗಲಿಲ್ಲ. ಬೇಟಿ ಆಗುವ ವಿಚಾರ ಬಂದಾಗೆಲ್ಲ ಕಾರಣಗಳನ್ನೇ ಕೊಡುತ್ತಿದ್ದರೆ ಹೊರೆತು ಬೇಟಿ ಮಾತ್ರ ಆಗಲಿಲ್ಲ.
ಈ ಹುಡುಗನ ಬೇಟಿ... ಆ ಹುಡುಗನ ಬರುವಿಕೆ.. ಇವರಿಬ್ಬರ ಮಧ್ಯ ನನ್ನ ಮನಸ್ಸು ಯಾರನ್ನ ಒಪ್ಪಿಕೊಳುತ್ತೆ?
ಮುಂದುವರಿಯುದು . . . . . . . . . . . . . . . . . . . .
ಅಧ್ಯಾಯಗಳು
ಏನೆಂದು ನಾ ಹೇಳಲಿ.. ಈ ನಿನ್ನ ಹುಚ್ಚು ಪ್ರೀತಿಗೆ : ಅ 1
ಏನೆಂದು ನಾ ಹೇಳಲಿ.. ಈ ನಿನ್ನ ಹುಚ್ಚು ಪ್ರೀತಿಗೆ : ಅ 2
ಅಧ್ಯಾಯಗಳು
ಏನೆಂದು ನಾ ಹೇಳಲಿ.. ಈ ನಿನ್ನ ಹುಚ್ಚು ಪ್ರೀತಿಗೆ : ಅ 1
ಏನೆಂದು ನಾ ಹೇಳಲಿ.. ಈ ನಿನ್ನ ಹುಚ್ಚು ಪ್ರೀತಿಗೆ : ಅ 2
1 Comments
Yaranna oppikolluthe??? Waiting to know
ReplyDeleteComment is awaiting for approval