Ticker

6/recent/ticker-posts

ಜೇಮ್ಸ್ ಹಾರ್ನರ್ ನಿಧನ

ಹಾಲಿವುಡ್ ನ ಶ್ರೇಷ್ಟ ಸಂಗೀತ ಸಂಯೋಜಕರಲ್ಲಿ ಒಬ್ಬರಾದ ಜೇಮ್ಸ್ ಹಾರ್ನರ್ ವಿಮಾನ ಅಪಘಾತದಲ್ಲಿ ಮರಣ ಹೊಂದಿದ್ದಾರೆ.

ಹಾಲಿವುಡ್ ನ ಉತ್ತಮ ಚಿತ್ರಗಳಾದ ಟೈಟಾನಿಕ್, ಅವತಾರ್, ಎ ಬ್ಯೂಟಿಫುಲ್ ಮೈಂಡ್ , ಬ್ರೇವ್ ಹಾರ್ಟ್ ನಂತಹ ಅದ್ಭುತ ಚಿತ್ರಗಳಿಗೆ ತನ್ನ ಸಂಗೀತದ ಮೂಲಕ ಜೀವ ತುಂಬಿದ ಕೀರ್ತಿ ಜೇಮ್ಸ್ ಹಾರ್ನರ್ ಅವರದು.

ಜೇಮ್ಸ್ ಹಾರ್ನರ್ ವಿಮಾನ ಹಾರಾಟದಲ್ಲಿ ತರಬೇತಿ ಪಡೆದವರು. ಸೋಮವಾರ ಕ್ಯಾಲಿಪೋರ್ನಿಯಾದ ಸಂತ ಬಾರ್ಬರಾ ಬಲಿ ಒಂದು ಪುಟ್ಟ ವಿಮಾನ  ಅಪಘಾತಕ್ಕೆ ಒಳಗಾಗಿತ್ತು. ಆ ವಿಮಾನದಲ್ಲಿದ್ದ ವಿಮಾನಿ ಜೇಮ್ಸ್ ಹಾರ್ನರ್ ಎಂದು ಪತ್ತೆ ಮಾಡಲಾಗಿದೆ.

ಜೇಮ್ಸ್ ಕ್ಯಾಮರೂನ್ , ಸ್ಟೀವನ್ ಸ್ಪೀಲ್ ಬರ್ಗ್ , ಜಾರ್ಜ್ ಲೂಕಾಸ್ , ರಾನ್ ಹೊವರ್ಡ್ , ಆಲಿವರ್ ಸ್ಟೋನ್ ರಂತಹ ಹಾಲಿವುಡ್ ನ ಶ್ರೇಷ್ಟ ನಿರ್ದೇಶಕರೊಂದಿಗೆ ಕೆಲಸ ಮಾಡಿದ ಜೇಮ್ಸ್ ಕ್ಯಾಮರೂನ್, ಟೈಟಾನಿಕ್ ಚಿತ್ರಕ್ಕಾಗಿ ೨ ಆಸ್ಕರ್ ಪ್ರಶಸ್ತಿ ಪಡೆದಿದ್ದರು.

ಜೇಮ್ಸ್ ಕ್ಯಾಮರೂನ್ ಅವರ ಮರಣ, ಹಾಲಿವುಡ್ ಚಿತ್ರ ಜಗತ್ತಿಗೆ ತುಂಬಲಾಗದ ನಷ್ಟ. ದೈಹಿಕವಾಗಿ ಕ್ಯಾಮರೂನ್ ನಮ್ಮನ್ನು ಅಗಲಿದರು, ಅವರ ಸಂಗೀತದ ಮೂಲಕ ಸದಾ ನಮ್ಮೊಂದಿಗೆ ಬಾಳುತ್ತಿರುತ್ತಾರೆ.

ಇದನ್ನು ಬರೆಯುತ್ತಿರುವ ಈ ಕ್ಷಣದಲ್ಲಿ ನನ್ನ ಮನದಲ್ಲಿ 'ಎ ಬ್ಯೂಟಿಫುಲ್ ಮೈಂಡ್' ನ ಸಂಗೀತ ಮೂಡುತ್ತಿದೆ. ಅದು ಜೇಮ್ಸ್ ಕ್ಯಾಮರೂನ್ ಗೆ ವಂದಿಸುತ್ತಿದೆ.


Want to write a unique article ?
Click here to start automatically spinning your articles by using the latest Spin Rewriter 5.0 Technology.







Post a Comment

0 Comments