Ticker

6/recent/ticker-posts

ಬಾನಿಗೊಂದು ಎಲ್ಲೇ ಎಲ್ಲಿದೆ - ಪ್ರೇಮದ ಕಾಣಿಕೆ

ಇಂದು ಡಾ ರಾಜಕುಮಾರ್  ಅವರ ಜನ್ಮ ದಿನ.  ಈ ಸಂಧರ್ಭದಲ್ಲಿ ಅವರ ಚಿತ್ರಗಳ ನೆನಪಿನೊಂದಿಗೆ, ಅವರ ಹಲವು ಉತ್ತಮ ಹಾಡುಗಳು ನೆನಪಿಗೆ ಬರುತ್ತಿದೆ.  ಅತ್ಯತ್ತಮ ಸಾಹಿತ್ಯವನ್ನೋಳಗೊಂಡ ಈ ಹಾಡುಗಳು ಸದಾ ಕನ್ನಡಿಗರ ಮನದಲ್ಲಿ ಉಳಿದಿರುತ್ತದೆ. ಅಂತಹ ಒಂದು ಹಾಡು ಪ್ರೇಮದ ಕಾಣಿಕೆ ಚಿತ್ರದ ಬಾನಿಗೊಂದು ಎಲ್ಲೇ ಎಲ್ಲಿದೆ

ಬಾನಿಗೊಂದು ಎಲ್ಲೇ ಎಲ್ಲಿದೆ,ನಿನ್ನಾಸೆಗೆಲ್ಲಿ ಕೊನೆ ಇದೆ,
ಏಕೆ ಕನಸು ಕಾಣುವೆ,ನಿಧಾನಿಸು ನಿಧಾನಿಸು
 ಬಾನಿಗೊಂದು ಎಲ್ಲೇ ಎಲ್ಲಿದೆ,ನಿನ್ನಾಸೆಗೆಲ್ಲಿ ಕೊನೆ ಇದೆ,
ಏಕೆ ಕನಸು ಕಾಣುವೆ,ನಿಧಾನಿಸು ನಿಧಾನಿಸು...

ಆಸೆಯೆಂಬ ಬಿಸಿಲು ಕುದುರೆ ಏಕೆ ಏರುವೇ,
ಮರಳುಗಾಡಿನಲ್ಲಿ ಸುಮ್ಮನೇಕೆ ಆಲೆಯುವೆ,
ಅವನ ನಿಯಮ ಮೀರಿ ಇಲ್ಲಿ ಏನು ಸಾಗದು,
ನಾವು ನೆನಸಿದಂತೆ ಬಾಳಲೇನು ನಡೆಯದು
ವಿಷಾದವಾಗಲಿ,ವಿನೋದವಾಗಲಿ,ಅದೇನೇ ಆಗಲಿ ಅವನೇ ಕಾರಣ.

ಬಾನಿಗೊಂದು ಎಲ್ಲೇ ಎಲ್ಲಿದೆ

ಹುಟ್ಟು ಸಾವು ಬಾಳಿನಲ್ಲಿ ಎರಡು ಕೊನೆಗಳು,
ಬಯಸಿದಾಗ ಕಾಣದಿರುವ ಎರಡು ಮುಖಗಳು.
ಹರುಷವೊಂದೇ ಯಾರಿಗುಂಟು ಹೇಳು ಜಗದಲಿ

ಹೂವು ಮುಳ್ಳು ಎರಡು ಉಂಟು ಬಾಳ ಲತೆಯಲಿ 
ದುರಾಸೆ ಏತಕೆ,ನಿರಾಸೆ ಏತಕೆ,ಅದೇನೇ ಬಂದರು ಅವನ ಕಾಣಿಕೆ

ಬಾನಿಗೊಂದು ಎಲ್ಲೇ ಎಲ್ಲಿದೆ,ನಿನ್ನಾಸೆಗೆಲ್ಲಿ ಕೊನೆ ಇದೆ,
ಏಕೆ ಕನಸು ಕಾಣುವೆ,ನಿಧಾನಿಸು ನಿಧಾನಿಸು...
ನಿಧಾನಿಸು ನಿಧಾನಿಸು...


Want to write a unique article ?
Click here to start automatically spinning your articles by using the latest Spin Rewriter 5.0 Technology.

Post a Comment

0 Comments