ಇಂದು ಡಾ ರಾಜಕುಮಾರ್ ಅವರ ಜನ್ಮ ದಿನ. ಈ ಸಂಧರ್ಭದಲ್ಲಿ ಅವರ ಚಿತ್ರಗಳ
ನೆನಪಿನೊಂದಿಗೆ, ಅವರ ಹಲವು ಉತ್ತಮ ಹಾಡುಗಳು ನೆನಪಿಗೆ ಬರುತ್ತಿದೆ. ಅತ್ಯತ್ತಮ
ಸಾಹಿತ್ಯವನ್ನೋಳಗೊಂಡ ಈ ಹಾಡುಗಳು ಸದಾ ಕನ್ನಡಿಗರ ಮನದಲ್ಲಿ ಉಳಿದಿರುತ್ತದೆ. ಅಂತಹ ಒಂದು
ಹಾಡು ಕಸ್ತೂರಿ ನಿವಾಸ ಚಿತ್ರದ ಆಡಿಸಿ ನೋಡು ಬೀಳಿಸಿ ನೋಡು. ಚಿ.ಉದಯಶಂಕರ್ ಅವರ ಅತ್ಯುತ್ತಮ ಸಾಹಿತ್ಯ, ಜಿ.ಕೆ.ವೆಂಕಟೇಶ್ ಅವರ ಸಂಗೀತದಲ್ಲಿ ಪಿ.ಬಿ ಶ್ರೀನಿವಾಸ್ ಅವರು ಹಾಡಿದ ಈ ಹಾಡು
ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು,
ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು
ಏನೇ ಬರಲಿ ಯಾರಿಗೂ ಎಂದು ತಲೆಯ ಬಾಗದು,
ಎಂದಿಗೂ ನಾನು ಹೀಗೆ ಇರುವೆ ಎಂದು ನಗುವುದು,ಹೀಗೆ ನಗುತಲಿರುವುದು
ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು,
ಗುಡಿಸಲೇ ಆಗಲಿ,ಅರಮನೆ ಆಗಲಿ,ಆಟ ನಿಲ್ಲದು,
ಹಿರಿಯರೇ ಇರಲಿ,ಕಿರಿಯರೆ ಬರಲಿ,ಭೇದ ತೋರದು
ಗುಡಿಸಲೇ ಆಗಲಿ,ಅರಮನೆ ಆಗಲಿ,ಆಟ ನಿಲ್ಲದು,
ಹಿರಿಯರೇ ಇರಲಿ,ಕಿರಿಯರೆ ಬರಲಿ,ಭೇದ ತೋರದು,
ಕಷ್ಟವೋ,ಸುಖವೋ ಅಳುಕದೆ ಆಡಿ,ತೂಗುತಿರುವುದು,ತೂಗುತಿರುವುದು
ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು,
ಮೈಯನೆ ಹಿಂಡಿ ನೊಂದರು ಕಬ್ಬುಸಿಹಿಯ ಕೊಡುವುದು,
ತೇಯುತಲಿದ್ದರು ಗಂಧದ ಪರಿಮಳ ತುಂಬಿ ಬರುವುದು
ಮೈಯನೆ ಹಿಂಡಿ ನೊಂದರು ಕಬ್ಬುಸಿಹಿಯ ಕೊಡುವುದು,
ತೇಯುತಲಿದ್ದರು ಗಂಧದ ಪರಿಮಳ ತುಂಬಿ ಬರುವುದು,
ತಾನೇ ಉರಿದರು ದೀಪವು ಮನೆಗೆ ಬೆಳಕ ತರುವುದು,ದೀಪ ಬೆಳಕ ತರುವುದು
ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು,
ಆಡಿಸುವಾತನ ಕೈ ಚಳಕದಲಿ ಎಲ್ಲಾ ಅಡಗಿದೆ,
ಆತನ ಕರುಣೆಯ ಜೀವವ ತುಂಬಿ ಕುಣಿಸಿ ನಲಿಸಿದೆ
ಆಡಿಸುವಾತನ ಕೈ ಚಳಕದಲಿ ಎಲ್ಲಾ ಅಡಗಿದೆ,
ಆತನ ಕರುಣೆಯ ಜೀವವ ತುಂಬಿ ಕುಣಿಸಿ ನಲಿಸಿದೆ,
ಆ ಕೈ ಸೋತರೆ ಬೊಂಬೆಯ ಕಥೆಯು ಕೊನೆಯಾಗುವುದೇ ,ಕೊನೆಯಾಗುವುದೇ.
ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು,
ಏನೇ ಬರಲಿ ಯಾರಿಗೂ ಎಂದು ತಲೆಯ ಬಾಗದು,
ಎಂದಿಗೂ ನಾನು ಹೀಗೆ ಇರುವೆ ಎಂದು ನಗುವುದು,ಹೀಗೆ ನಗುತಲಿರುವುದು
ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು
Want to write a unique article for SEO ?
Click here to start automatically spinning your articles by using the latest Spin Rewriter 5.0 Technology.
Dr Raj Kumar in Kasturi Nivasa |
Want to write a unique article for SEO ?
Click here to start automatically spinning your articles by using the latest Spin Rewriter 5.0 Technology.
1 Comments
Meaningful song with great lyrics and Music. P B Srinivas's immaculate rendering with Dr Raj Kumar's screen presence makes this song an unforgettable evergreen song
ReplyDeleteComment is awaiting for approval