Ticker

6/recent/ticker-posts

ಓ ಮನವೇ

ಓ ಮನವೇ, ಮರುಗದಿರು
ಅಂಜಿ, ಅಂಜಿ, ಕೊರಗದಿರು
ಯಾವುದಕ್ಕೂ , ಸೊರಗದಿರು
ನೀ ಧೈರ್ಯವಂತ ,ಮರೆಯದಿರು

ತೆಗಳಿಕೆಗೆ, ಕುಗ್ಗದಿರು
ಹೊಗಳಿಕೆಗೆ, ಹಿಗ್ಗದಿರು
ಗೆಲುವಿನಲಿ, ಹಾರದಿರು
ಸೋಲಿನಲಿ, ಬೀಳದಿರು

ಅಪಮಾನಗಳನ್ನು, ಹಿಂದೆ ಇಡು
ಗುರಿಯೆಡೆಗೆ ಹೆಜ್ಜೆಗಳನ್ನು, ಮುಂದೆ ಇಡು
ನಕಾರಾತ್ಮಕ ಚಿಂತೆಗಳನ್ನು, ಸುಟ್ಟುಬಿಡು
ಸಕಾರತ್ಮಕ ಭಾವನೆಗೆ, ಕಟ್ಟುಪಡು

ಅವನೆಂದ, ಇವನೆಂದನೆಂದು
ಕೀಳರಿಮೆಯಲಿ ನೀ ಬೆಂದು
ಸಾಕು, ಈ ಬಾಳೆಂದು ನೊಂದು
ಭರವಸೆಯ ಬಿಡಬೇಡ ಎಂದೆಂದು

ಬಾಳೆಂಬ ಪಯಣದಲಿ
ನೂರು ಅಡ್ಡಿ ಆತಂಕಗಳು
ಅಂಜದಿರು, ಅಳುಕದಿರು
ನೀ ಧೈರ್ಯವಂತ ,ಮರೆಯದಿರು

ದುಃಖ, ದುಮ್ಮಾನಗಳು, ಎಷ್ಟೇ ಇರಲಿ
ಕಷ್ಟ ಬರಲಿ, ಅನಿಷ್ಠ ಬರಲಿ
ನೋವೆ ಇರಲಿ, ಸಾವೇ ಬರಲಿ
ಓ ಮನವೇ , ಧೈರ್ಯ ಸದಾ
                  ನಿನ್ನೊಡನೆ ಇರಲಿ.

                   - ಸೆಂದಿಲ್

Post a Comment

0 Comments