ಖ್ಯಾತ ಹಿನ್ನೆಲೆ ಗಾಯಕರಾದ ಪಿ. ಜಯಚಂದ್ರನ್ ನಿಧನರಾದರು | Legendary Playback Singer P. Jayachandran Passes Away
ಮಲಯಾಳಂ. ತಮಿಳು, ತೆಲುಗು, ಕನ್ನಡ, ಮತ್ತು ಹಿಂದಿ ಸೇರಿದಂತೆ ಸುಮಾರು 16,000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಗಾಯಕ ಪಿ. ಜಯಚಂದ್ರನ್ ಅವರು ಅವರು ಜಿ. ದೇವರಾಜನ್, ಎಂ. ಎಸ್. ಬಾಬುರಾಜ್, ಇಳಯರಾಜ, ಎ.ಆರ್. ರೆಹಮಾನ್ ಮತ್ತು ಕೀರವಾಣಿಯಂತಹ ಸಂಗೀತ ಸಂಯೋಜಕರೊಂದಿಗೆ ಕೆಲಸ ಮಾಡಿದ್ದಾರೆ.
ಅವರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು ಐದು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗಳಿಸಿದ್ದಾರೆ. 1986 ರಲ್ಲಿ ಅವರು ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕನಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗಳಿಸಿದರು. 2020 ರಲ್ಲಿ ಮಲಯಾಳಂ ಚಿತ್ರರಂಗಕ್ಕೆ ನೀಡಿದ ಕೊಡುಗೆಗಳಿಗಾಗಿ ಜೆ.ಸಿ. ಡೇನಿಯಲ್ ಪ್ರಶಸ್ತಿಯನ್ನು ಪಡೆದರು.
ಪಿ. ಜಯಚಂದ್ರನ್ ಅವರು ಹಾಡಿರುವ ಕೆಲವು ಜನಪ್ರಿಯ ಗೀತೆಗಳು
೧. ಹಿಂದುಸ್ಥಾನವು ಎಂದು ಮರೆಯದ - ಅಮೃತ ಘಳಿಗೆ
೨. ಒಲವಿನ ಉಡುಗೊರೆ ಕೊಡಲೇನು - ಒಲವಿನ ಉಡುಗೊರೆ
೩. ಮಂದಾರ ಪುಷ್ಪವು ನೀನು - ರಂಗನಾಯಕಿ
೪. ಚಂದಾ ಚಂದಾ - ಮಾನಸ ಸರೋವರ
೫. ಜೀವನ ಸಂಜೀವನ - ಹಂತಕನ ಸಂಚು
೬. ಕಮಲಾ ನಯನ ಕಮಲಾ ವದನ - ಭಕ್ತ ಪ್ರಹ್ಲಾಧ
೭. ಭೂಮಿ ತಾಯಾಣೆ ನೀ ಇಷ್ಟ ಕಣೆ - ಪ್ರಾಯ ಪ್ರಾಯ ಪ್ರಾಯ
೮. ಕನ್ನಡ ನಾಡಿನ ಕರಾವಳಿ - ಮಸಣದ ಹೂವು
೯. ಕಾಲ ಮತ್ತೊಮ್ಮೆ ನಮಗಾಗಿ - ಕಿಲಾಡಿಗಳು
೧೦. ಕಾಲ್ಗೆಜ್ಜೆ ತಾಳಕೆ - ಮುನಿಯನ ಮಾದರಿ
0 Comments
Comment is awaiting for approval