Ticker

6/recent/ticker-posts

ರತನ್ ಟಾಟಾ ಅವರ ಸಂಕ್ಷಿಪ್ತ ಜೀವನಚರಿತ್ರೆ - Ratan Tata Biography

ರತನ್ ಟಾಟಾ ಅವರ ಸಂಕ್ಷಿಪ್ತ ಜೀವನಚರಿತ್ರೆ - Ratan Tata Biography in Kannada

ರತನ್ ನೇವಲ್ ಟಾಟಾ [28 ಡಿಸೆಂಬರ್ 1937 - 9 ಅಕ್ಟೋಬರ್ 2024] ಪ್ರತಿಷ್ಠಿತ  ಭಾರತೀಯ ಕೈಗಾರಿಕೋದ್ಯಮಿ ಮತ್ತು ಲೋಕೋಪಕಾರಿ. ಅವರು ಭಾರತದಲ್ಲಿ ಟಾಟಾ ಗ್ರೂಪ್ ಸಾಮ್ರಾಜ್ಯ ಕಟ್ಟುವಲ್ಲಿ  ಪ್ರಮುಖ ಪಾತ್ರವಹಿಸಿದವರು. ಅವರು 1991 ರಿಂದ 2012 ರವರೆಗೆ ಟಾಟಾ ಗ್ರೂಪ್ ಮತ್ತು ಟಾಟಾ ಸನ್ಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು ಮತ್ತು ನಂತರ ಅಕ್ಟೋಬರ್ 2016 ರಿಂದ ಫೆಬ್ರವರಿ 2017 ರವರೆಗೆ ಹಂಗಾಮಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. 

ಅನಾರೋಗ್ಯದಿಂದ ಬಳಲುತ್ತಿದ್ದ ರತನ್ ಟಾಟಾ ಅವರನ್ನು 7 ಅಕ್ಟೋಬರ್ 2024 ರಂದು ಗಂಭೀರ ಸ್ಥಿತಿಯಲ್ಲಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಯಿತು. ತೀವ್ರ ನಿಗಾ ಘಟಕದಲ್ಲಿ ಇದ್ದ ಅವರು 9 ಅಕ್ಟೋಬರ್ 2024 ರ ರಾತ್ರಿ ತಮ್ಮ 86ನೇ ವಯಸ್ಸಿನಲ್ಲಿ ನಿಧನರಾದರು.


ರತನ್ ಟಾಟಾ ಅವರ ಜೀವನ ಪಯಣದ ಪ್ರಮುಖ ಮೈಲಿಗಲ್ಲುಗಳನ್ನು ನೋಡೋಣ...

ಡಿಸೆಂಬರ್ 28, 1937: ಮುಂಬೈನಲ್ಲಿ, ನೇವಲ್ ಟಾಟಾ ಮತ್ತು ಸುನಿ ಟಾಟಾ ದಂಪತಿಗೆ ಮಗನಾಗಿ ಜನಿಸಿದರು.

1955: ಮುಂಬೈನ ಕ್ಯಾಥೆಡ್ರಲ್ ಮತ್ತು ಜಾನ್ ಕ್ಯಾನನ್ ಶಾಲೆಯಲ್ಲಿ ಶಾಲಾ ಶಿಕ್ಷಣವನ್ನು ಪ್ರಾರಂಭಿಸಿ ಅವರು, ನಂತರ ಶಿಮ್ಲಾದ ಬಿಷಪ್ ಕಾಟನ್‌ನಲ್ಲಿ ಶಾಲ ಶಿಕ್ಷಣ ಪೂರ್ಣಗೊಳಿಸಿದರು.

1962: ನ್ಯೂಯಾರ್ಕ್‌ನ ಕಾರ್ನೆಲ್ ವಿಶ್ವವಿದ್ಯಾಲಯದಿಂದ ಆರ್ಕಿಟೆಕ್ಚರ್‌ನಲ್ಲಿ ಪದವಿ ಪಡೆದರು.

1962: ಟಾಟಾ ಇಂಡಸ್ಟ್ರೀಸ್‌ನಲ್ಲಿ ಸಹಾಯಕರಾಗಿ ಟಾಟಾ ಗ್ರೂಪ್‌ಗೆ ಸೇರಿದರು. ಜಮ್ಶೆಡ್‌ಪುರದ ಟಾಟಾ ಇಂಜಿನಿಯರಿಂಗ್ ಮತ್ತು ಲೋಕೋಮೋಟಿವ್ ಕಂಪನಿ (Tata Motors) ಯಲ್ಲಿ ಆರು ತಿಂಗಳ ತರಬೇತಿ ಪಡೆದರು. 

1969: ಆಸ್ಟ್ರೇಲಿಯಾದಲ್ಲಿ ಟಾಟಾ ಸಮೂಹದ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದರು.

1970: ಟಾಟಾ ಕಂಪ್ಯೂಟರ್ ಸಿಸ್ಟಮ್ಸ್ (TCS) ಅನ್ನು 1968 ರಲ್ಲಿ ಪ್ರಾರಂಭಿಸಲಾಯಿತು. ಅವರು 1970 ರಲ್ಲಿ ಭಾರತಕ್ಕೆ ಮರಳಿದರು.

1971: ರಾಷ್ಟ್ರೀಯ ರೇಡಿಯೋ ಮತ್ತು ಎಲೆಕ್ಟ್ರಾನಿಕ್ಸ್ (ನೆಲ್ಕೊ) ನಿರ್ದೇಶಕರಾಗಿ ನೇಮಕಗೊಂಡರು.

1974: ಟಾಟಾ ಸನ್ಸ್ ಗ್ರೂಪ್‌ಗೆ ನಿರ್ದೇಶಕರಾಗಿ ಸೇರಿದರು.

1975: ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್‌ನಲ್ಲಿ [Advanced Management Program] ಸುಧಾರಿತ ನಿರ್ವಹಣಾ ಕಾರ್ಯಕ್ರಮವನ್ನು ಪೂರ್ಣಗೊಳಿಸಿದರು. 

1981: ಟಾಟಾ ಇಂಡಸ್ಟ್ರೀಸ್‌ನ ಅಧ್ಯಕ್ಷರಾಗಿ ನೇಮಕಗೊಂಡರು. ಎರಡು ವರ್ಷಗಳ ನಂತರ, ಟಾಟಾ ಒಂದು ಕಾರ್ಯತಂತ್ರದ [ಸ್ಟ್ರಾಟೆಜಿಕ್ Plan]  ಯೋಜನೆಯನ್ನು ರೂಪಿಸಿತು. ಅದರಂತೆ ಉನ್ನತ ತಂತ್ರಜ್ಞಾನವನ್ನು ಉತ್ತೇಜಿಸಲು ಸಹಕಾರಿಯಾಗುವಂತೆ ಕಂಪನಿಯನ್ನು ವಿನ್ಯಾಸಗೊಳಿಸಲಾಯಿತು. 

1986-1989: ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು

ಮಾರ್ಚ್ 25, 1991: ಟಾಟಾ ಸನ್ಸ್ ಮತ್ತು ಟಾಟಾ ಟ್ರಸ್ಟ್‌ಗಳ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.

2000: ಬ್ರಿಟಿಷ್ ಬ್ರ್ಯಾಂಡ್ ಟೆಟ್ಲಿ (ಟೀ) ಅನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಹೊಸ ಉದ್ಯಮವನ್ನು ಟಾಟಾ ಪ್ರವೇಶಿಸಿತು.

2000: ಭಾರತದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣವನ್ನು ಪಡೆದರು.

2005: ಟಾಟಾ ಕೆಮಿಕಲ್ಸ್ ಬ್ರಿಟಿಷ್ ಕಂಪನಿ ಬ್ರನ್ನರ್ ಮಾಂಡ್ [Brunner Mond] ಅನ್ನು ಸ್ವಾಧೀನಪಡಿಸಿಕೊಂಡಿತು.

2007: ಯುರೋಪಿಯನ್ ಬೃಹತ್  ಉಕ್ಕಿನ ಕಂಪೆನಿಯಾದ ;ಕೋರಸ್' ಅನ್ನು ಸ್ವಾಧೀನಪಡಿಸಿಕೊಂಡಿತು ಟಾಟಾ.

2008: ಜಾಗ್ವಾರ್ ಲ್ಯಾಂಡ್ ರೋವರ್ ಅನ್ನು ಸ್ವಾಧೀನಪಡಿಸಿಕೊಂಡಿತು ಟಾಟಾ.

2008: ಟಾಟಾ ನ್ಯಾನೋ, ಭಾರತದ ಅತ್ಯಂತ ಕೈಗೆಟುಕುವ ಕಾರು ಬಿಡುಗಡೆಯಾಯಿತು.

2008: ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣ ಪ್ರಶಸ್ತಿಯನ್ನು ರತನ್ ಟಾಟಾ ಅವರಿಗೆ ನೀಡಿ ಗೌರವಿಸಲಾಯಿತು. 

ಡಿಸೆಂಬರ್ 2012: ಟಾಟಾ ಸಮೂಹದಲ್ಲಿ ಸುಮಾರು 50 ವರ್ಷಗಳ ನಂತರ ಟಾಟಾ ಸನ್ಸ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದರು ರತನ್ ಟಾಟಾ. ತರುವಾಯ, ಅವರು ಟಾಟಾ ಸನ್ಸ್‌ನ ಎಮೆರಿಟಸ್ ಅಧ್ಯಕ್ಷರಾಗಿ [Chairman Emeritus of Tata Sons] ನೇಮಕಗೊಂಡರು.

2013: ನೀರಾ ರಾಡಿಯಾ ದೂರವಾಣಿ ಕದ್ದಾಲಿಕೆ ಪ್ರಕರಣವನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿತು. ಆ ಸಮಯದಲ್ಲಿ, ಅವರು ಜನರ ಗೌಪ್ಯತೆಯ ಹಕ್ಕನ್ನು ರಕ್ಷಿಸಬೇಕು ಎಂದು ವಾದಿಸಿದರು

2017: ಟಾಟಾ ಸಮೂಹದ ಹಂಗಾಮಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.

2017 ರಿಂದ: ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ ಮಾಡುವ ನೀತಿಯೊಂದಿಗೆ ಕೆಲಸ ಮಾಡಿದರು. 

2021: ನೀರಾ ರಾಡಿಯಾ ದೂರವಾಣಿ ಕದ್ದಾಲಿಕೆ ಪ್ರಕರಣದಲ್ಲಿ ರತನ್ ಟಾಟಾ ಮತ್ತು ಟಾಟಾ ಸನ್ಸ್ ಪರವಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತು.

2024: ಅವರು 9 ಅಕ್ಟೋಬರ್ 2024 ರಂದು ತಮ್ಮ 86ನೇ ವಯಸ್ಸಿನಲ್ಲಿ ನಿಧನರಾದರು.


Post a Comment

0 Comments