Ticker

6/recent/ticker-posts

ಹಿಂದಿ ನಟ ಜಿಮ್ ಸರ್ಬ್ ಜೊತೆ ಪಾನ್ ಇಂಡಿಯಾ ಚಿತ್ರದಲ್ಲಿ ಧನುಷ್

ಹಿಂದಿ ನಟ ಜಿಮ್ ಸರ್ಬ್ ಜೊತೆ ಪಾನ್ ಇಂಡಿಯಾ ಚಿತ್ರದಲ್ಲಿ ಧನುಷ್ | Dhanush to join hands with Jim Sarbh for a Pan-India Film

ನಟ ಧನುಷ್  ನಟಿಸಿರುವ ಕ್ಯಾಪ್ಟನ್ ಮಿಲ್ಲರ್ ಈ ತಿಂಗಳ ೧೨ ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ನಂತರ ಅವರು ಅವರೇ ನಿರ್ದೇಶಿಸಿ, ನಟಿಸಿರುವ ಅವರ 50 ನೇ ಚಿತ್ರ ಬಿಡುಗಡೆಯಾಗಲಿದೆ. ಈ ನಡುವೆ  ‘ನೀಲವಕ್ಕೂ ಏನ್ ಮೇಲ್ ಎನ್ನಡಿ ಕೋವಮ್’  ಎಂಬ ತಮಿಳು ಚಿತ್ರವನ್ನು ಸಹ ನಿರ್ದೇಶಿಸುತ್ತಿದ್ದಾರೆ. ಮುಂದೆ ತೆಲುಗು ನಿರ್ದೇಶಕ ಶೇಖರ್ ಕಮ್ಮುಲಾ, ಹಿಂದಿ ನಿರ್ದೇಶಕ ಆನಂದ್ ಎಲ್.ರಾಯ್ ನಿರ್ದೇಶನದ ಚಿತ್ರಗಳಲ್ಲಿ ನಟಿಸಲಿದ್ದಾರೆ.

ಈ ನಡುವೆ ಅವರು  ಖ್ಯಾತ ಹಿಂದಿ ನಟ ಜಿಮ್ ಜಿಮ್ ಸರ್ಬ್ ಜೊತೆ ಪಾನ್ ಇಂಡಿಯಾ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹೊರಬಂದಿದೆ. ಈ ಕುರಿತು ಅಧಿಕೃತ ಪ್ರಕಟಣೆ ಶೀಘ್ರದಲ್ಲೇ ಪ್ರಕಟವಾಗುತ್ತದೆ ಎಂದು ತಿಳಿದುಬಂದಿದೆ. ನಟ ಜಿಮ್ ಸರ್ಬ್, 'ಪದ್ಮಾವತ್', 'ಸಂಜು', 'ಹೌಸ್ ಅರಸ್ಟ್', 'ಗಂಗೂ ಬಾಯ್ ಕತಿಯವಾಡಿ', ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

ಇಬ್ಬರು ಉತ್ತಮ ನಟರು ಒಂದಾಗಲಿದ್ದಾರೆ  ಎಂಬ ಸುದ್ದಿ ಸಿನಿಮಾ ಪ್ರಿಯರ ನಡುವೆ ಕುತೂಹಲವನು ಕೆರಳಿಸಿದೆ. ಅಧಿಕೃತ ಪ್ರಕಟಣೆಗಾಗಿ ಕಾಯಬೇಕಾಗಿದೆ. 



Post a Comment

0 Comments