Ticker

6/recent/ticker-posts

ನಟಿ ಅಂಜಲಿ - ಉದ್ಯಮಿಯೊಂದಿಗೆ ರಹಸ್ಯ ಮದುವೆ?

ನಟಿ ಅಂಜಲಿ - ಉದ್ಯಮಿಯೊಂದಿಗೆ ರಹಸ್ಯ ಮದುವೆ? | Actress Anjali Denies Marriage Rumors

ನಟಿ ಅಂಜಲಿ ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಭಾಷೆಯ ಚಿತ್ರಗಳಲ್ಲಿ ನಟಿಸಿದ್ದಾರೆ. ಅಂಜಲಿ ಅವರ ಚೊಚ್ಚಲ ಚಿತ್ರ ೨೦೦೬ ರಲ್ಲಿ ಬಿಡುಗಡೆಯಾದ, ತೆಲುಗು ಥ್ರಿಲ್ಲರ್ ಚಿತ್ರ 'ಫೋಟೋ'. ನಂತರ ಅವರು ಜೀವಾ ಅವರೊಂದಿಗೆ ಕಟ್ರದು ತಮಿಳ್ (2007) ಚಿತ್ರದಲ್ಲಿ ಅಭಿನಯಿಸಿ ಎಲ್ಲರ ಗಮನ ಸೆಳೆದರು. 

2010 ಮತ್ತು 2011 ರಲ್ಲಿ, ಅವರು ಕ್ರಮವಾಗಿ ಅಂಗಡಿ ತೆರು ಮತ್ತು ಎಂಗೇಯುಮ್ ಎಪ್ಪೊತ್ತುಮ್‌ನಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ನಟಿ - ತಮಿಳು ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗೆದ್ದರು. ಅಂಗಡಿ ತೆರು ಚಿತ್ರಕ್ಕೆ  "ಅತ್ಯುತ್ತಮ ಯುವ ನಟಿ" - ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದರು. 

ತಮಿಳಿನಲ್ಲಿ ನಿವಿನ್ ಪೌಲಿ, ಸೂರಿ, ತಾರಾಗಣದಲ್ಲಿ ಅಂಜಲಿ ನಟಿಸಿರುವ 'ಏಳು  ಕಡಲ್ ಏಳು ಮಲೈ' ಚಿತ್ರ ಶೀಘ್ರದಲ್ಲೇ  ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ತಮ್ಮ ಮದುವೆಯ ಬಗೆಗಿನ ವದಂತಿಗಳ ಬಗ್ಗೆ ಮಾತನಾಡಿದ್ದಾರೆ.

ಆ ಸಂದರ್ಶನದಲ್ಲಿ  “ನನಗೆ ಚಿತ್ರರಂಗದಲ್ಲಿ ಅನೇಕ ಸ್ನೇಹಿತರಿದ್ದಾರೆ. ನನ್ನನ್ನು  ಯಾರೊಂದಿಗೆ ಸೇರಿಸಿ ಬರೆಯಬೇಕೆಂದು ಅವರೇ ನಿರ್ಧರಿಸುತ್ತಾರೆ. ಮೊದಲಿಗೆ, ನಟ ಜಯ್ ಅವರನ್ನು ಪ್ರೀತಿಸುತ್ತಿದ್ದೇನೆ ಎಂಬ ಸುದ್ದಿ ಹರಡಿಸಿದರು. 

ನಂತರ ನಾನು ಒಬ್ಬ ಉದ್ಯಮಿಯನ್ನು ಮದುವೆಯಾಗಿ ಅಮೆರಿಕದಲ್ಲಿ ನೆಲೆಸಿದ್ದೇನೆ  ಎಂದ ಬರೆದರು. ಆ ಸುದ್ದಿಯನ್ನು ನೋಡಿ, ನನಗೆ ಗೊತ್ತಿಲ್ಲದೇ ನಾನೇ ಮದುವೆಯಾಗಿಬಿಟ್ಟೆನೇ?  ಎಂದುಕೊಂಡು ನಕ್ಕು ಸುಮ್ಮನಾದೆ. ನಟಿ ಎಂಬ ಕಾರಣಕ್ಕೆ ಇಷ್ಟ ಬಂದಂತೆ ಬರೆಯುತ್ತಿದ್ದಾರೆ’’ ಎಂದು ಬೇಸರದಿಂದ ಮಾತನಾಡಿದ್ದಾರೆ.

Post a Comment

0 Comments