Ticker

6/recent/ticker-posts

ವೆಟ್ಟೈಯನ್: ಸೂಪರ್ ಸ್ಟಾರ್ ರಜನಿಕಾಂತ್ ಹೊಸ ಚಿತ್ರದ ಟೈಟಲ್ ವಿಡಿಯೋ ಬಿಡುಗಡೆ!

ವೆಟ್ಟೈಯನ್: ಸೂಪರ್ ಸ್ಟಾರ್ ರಜನಿಕಾಂತ್ ಹೊಸ ಚಿತ್ರದ ಟೈಟಲ್ ವಿಡಿಯೋ ಬಿಡುಗಡೆ! | Super Star Rajinikanth Thalaivar 170 title is Vettaiyan 

ಇಂದು ರಜನಿಕಾಂತ್ ಅವರ ಜನ್ಮದಿನದ ಪ್ರಯುಕ್ತ ಅವರು ಅಭಿನಯಿಸುತ್ತಿರುವ, ಜೈ ಭೀಮ್ ಖ್ಯಾತಿಯ ನಿರ್ದೇಶಕ  ಟಿ.ಜೆ.ಜ್ಞಾನವೇಲ್ ನಿರ್ದೇಶನದ ಚಿತ್ರದ ಟೈಟಲ್ ವಿಡಿಯೋ ಬಿಡುಗಡೆಯಾಗಿದೆ. ತಲೈವಾರ್ ೧೭೦ ಎಂಬ ವರ್ಕಿಂಗ್ ಟೈಟಲ್ ನೊಂದಿಗೆ ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಈಗ ಚಿತ್ರದ ಅಫೀಷಿಯಲ್ ಟೈಟಲ್ 'ವೆಟ್ಟೈಯನ್' ಎಂದು ಘೋಷಿಸಲಾಗಿದೆ. 

ಟಿ.ಎಸ್.ಜ್ಞಾನವೇಲ್ ನಿರ್ದೇಶನದ ಈ ಚಿತ್ರದಲ್ಲಿ ರಜನಿಕಾಂತ್, ಅಮಿತಾಬ್ ಬಚ್ಚನ್, ಫಹಾದ್ ಫಾಸಿಲ್, ರಾಣಾ ದಗ್ಗುಬಟ್ಟಿ, ಮಂಜು ವಾರಿಯರ್, ರಿತಿಕಾ ಸಿಂಗ್ ಮತ್ತು ತುಷಾರಾ ವಿಜಯನ್ ನಟಿಸಿದ್ದಾರೆ. 

ತಿರುವನಂತಪುರಂನಿಂದ ಆರಂಭವಾಗಿ ಮುಂಬೈ, ಚೆನ್ನೈ, ತಿರುನಲ್ವೇಲಿ, ನಾಗರ್‌ಕೋಯಿಲ್ ಮುಂತಾದೆಡೆ ಚಿತ್ರೀಕರಣ ನಡೆದಿದೆ. ಮುಂಬೈನಲ್ಲಿ ಅಮಿತಾಬ್ ಬಚ್ಚನ್ ಕಾಂಬಿನೇಷನ್ ನಲ್ಲಿ ಶೂಟಿಂಗ್ ನಡೆದಿದೆ. ಆ ಬಳಿಕ ಚೆನ್ನೈನ ಸ್ಟುಡಿಯೋದಲ್ಲಿ ಶೂಟಿಂಗ್ ಕೆಲಸಗಳು ಭರದಿಂದ ಸಾಗುತ್ತಿವೆ. 

Post a Comment

0 Comments