ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಕಡಲ ತೀರದ ಭಾರ್ಗವ ಡಾ. ಶಿವರಾಮ ಕಾರಂತ [Shiavaram Karanth] ಅವರ ಪುತ್ತೂರಿನ ಬಾಲವನದಲ್ಲಿ ತೀರಾ ದುಸ್ತಿತಿಯಲ್ಲಿರುವ ಡಾ. ಶಿವರಾಮ ಕಾರಂತ ಮನೆಯನ್ನು ಪುನರ್‍ನಿರ್ಮಿಸುವ ಕಾಮಗಾರಿ ಈ ತಿಂಗಳ 10ರ ಬಳಿಕ ಆರಂಭಗೊಳ್ಳಲಿದೆ ಎಂದು ಬಾಲವನ ಸಮಿತಿಯ
ಅಧ್ಯಕ್ಷರಾದ ಪುತ್ತೂರು ಉಪವಿಭಾಗಾಧಿಕಾರಿ ಸತೀಶ್ ಕುಮಾರ್ ಅವರು ತಿಳಿಸಿದ್ದಾರೆ.
ಡಾ. ಶಿವರಾಮ ಕಾರಂತರ ಮನೆ ಪುನರ್
ನಿರ್ಮಾಣಕ್ಕೆ ರೂ. 21.50ಲಕ್ಷ , ನಾಟ್ಯಶಾಲೆ ಮತ್ತು ಗ್ರಂಥಾಲಯ ದುರಸ್ತಿಗೆ ರೂ. 8ಲಕ್ಷ
ಸೇರಿದಂತೆ ಒಟ್ಟು ರೂ. 29,.50 ಲಕ್ಷ ಮಂಜೂರಾಗಿದೆ.
ಈಗಾಲೇ ಬೆಂಗಳೂರಿನ ಇಂಟೆಕ್
ಸಂಸ್ಥೆಯೊಂದಿಗೆ ಕಾಮಗಾರಿಯ ನಿರ್ವಹಣೆಯ ಕುರಿತ ಒಪ್ಪಂದ ನಡೆದಿದೆ. ಕ್ರಿಯಾಯೋಜನೆ
ಪೂರ್ಣಗೊಂಡು ಹಣ ಬಿಡುಗಡೆಯಾಗಿದ್ದು , ಇಂಟೆಕ್ ಸಂಸ್ಥೆಯವರು 10 ತಿಂಗಳ
ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲಿದ್ದಾರೆ.
0 Comments
Comment is awaiting for approval