ತಮಿಳು ಚಿತ್ರರಂಗದ ಹಿರಿಯ ನಟಿ ಮನೋರಮಾ ಚೆನ್ನೈನಲ್ಲಿ ಶನಿವಾರ ತಡರಾತ್ರಿಯಲ್ಲಿ
ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರಿಗೆ 78 ವರ್ಷ ವಯಸ್ಸಾಗಿತ್ತು. ಆಚಿ ಎಂದು
ಪ್ರೀತಿಯಿಂದ ಕರೆಯಲಾಗುತ್ತಿದ್ದ ಮನೋರಮಾ ಅವರು 1200ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ
1000ಕ್ಕೂ ಹೆಚ್ಚು ನಾಟಕಗಳಲ್ಲಿ ಪಾತ್ರವಹಿಸಿದ್ದಾರೆ.
ಅಣ್ಣಾ ದೊರೈ, ಎಂ.ಜಿ. ರಾಮಚಂದ್ರನ್, ಕರುಣಾನಿಧಿ, ಎನ್.ಟಿ.ರಾಮರಾವ್ ಮತ್ತು ಜೆ.
ಜಯಲಲಿತಾ ಹೀಗೆ ಒಟ್ಟು ಐವರು ಮುಖ್ಯಮಂತ್ರಿಗಳ ಜತೆ ಮನೋರಮಾ ನಟನೆ ಮಾಡಿದ ಹೆಗ್ಗಳಿಕೆಗೆ
ಪಾತ್ರರಾಗಿದ್ದಾರೆ.
ಶಿವಾಜಿಗಣೇಶನ್, ರಜನಿಕಾಂತ್ ಮತ್ತು ಕಮಲಾಹಾಸನ್ ಮುಂತಾದ ಅನೇಕ ಖ್ಯಾತ ನಟರ ಜತೆ ಕೂಡ
ಅವರು ಚಿತ್ರಗಳಲ್ಲಿ ನಟಿಸಿದ್ದಾರೆ. ಪದ್ಮಶ್ರಿ ಪ್ರಶಸ್ತಿ ಪುರಸ್ಕೃತರಾದ ಮನೋರಮಾ
ಪುದಿಯಾ ಪಾದೈ ಚಿತ್ರದಲ್ಲಿ ಅತ್ಯುತ್ತಮ ಪೋಷಕ ನಟಿ ರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ
ಅನೇಕ ಪ್ರಶಸ್ತಿಗಳನ್ನು ಮನೋರಮಾ ಗಳಿಸಿದ್ದಾರೆ.
0 Comments
Comment is awaiting for approval