Ticker

6/recent/ticker-posts

ಮೊಬೈಲ್ ಮಾರಾಟ - ಸ್ಯಾಮ್ ಸಂಗ್ ಪ್ರಥಮ ಸ್ಥಾನ

ಗಾರ್ಟನರ್ ಸಂಶೋಧನಾ ಸಂಸ್ಥೆ ೨೦೧೫ ಏಪ್ರಿಲ್‌ನಿಂದ ಜೂನ್ ಗೆ ಕೊನೆಗೊಂಡ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಜಾಗತಿಕ ಮೊಬೈಲ್ ಮಾರಾಟ ವರದಿಯನ್ನು ಬಿಡುಗಡೆ ಮಾಡಿದೆ.  ಈ  ಅವಧಿಯಲ್ಲಿ 44.6 ಕೋಟಿ ಮೊಬೈಲ್‌ಗಳು  ಮಾರಾಟವಾಗಿದೆ. ಅದರಲ್ಲಿ  33 ಕೋಟಿ ಸ್ಮಾರ್ಟ್ ಫೋನ್‌ಗಳು .

ಅತಿ ಹೆಚ್ಚು ಮೊಬೈಲ್ ಮಾರಾಟದ ಈ ಪಟ್ಟಿಯಲ್ಲಿ ಸ್ಯಾಮ್ ಸಂಗ್ ಪ್ರಥಮ ಸ್ಥಾನದಲ್ಲಿದೆ. ಆ್ಯಪಲ್ ಎರಡನೇ ಸ್ಥಾನದಲ್ಲಿದ್ದು, ಭಾರತದ ಮೈಕ್ರೋಮ್ಯಾಕ್ಸ್ 10 ನೇ ಸ‍್ಥಾನದಲ್ಲಿದೆ . ಈಗಾಗಲೇ ಮೊಬೈಲ್ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ಸ್ಯಾಮ್ಸಂಗ್ ಹಾಗೂ ಆ್ಯಪಲ್ ಕಂಪನಿಗಳು ಕ್ರಮವಾಗಿ 8.8 ಕೋಟಿ ಹಾಗೂ 4.8 ಕೋಟಿ ಮೊಬೈಲ್ ಮಾರಾಟದೊಂದಿಗೆ ಮೊದಲನೇ ಹಾಗೂ ಎರಡನೇ ಸ್ಥಾನದಲ್ಲಿ ಭದ್ರವಾಗಿವೆ.

ನೊಕಿಯಾ ಕಂಪನಿ ಖರೀದಿಸಿದ ಮೈಕ್ರೋಸಾಫ್ಟ್, ಮೊಬೈಲ್ ಮಾರಾಟದಲ್ಲಿ ಮೂರನೇ ಸ್ಥಾನ ಪಡೆದರೆ, ಭಾರತೀಯ ಕಂಪನಿ ಮೈಕ್ರೋಮ್ಯಾಕ್ಸ್ ಸಹ 10ನೇ ಸ್ಥಾನ ಪಡೆದುಕೊಂಡಿದೆ.


೨೦೧೫ ಏಪ್ರಿಲ್‌ನಿಂದ ಜೂನ್ ಗೆ ಕೊನೆಗೊಂಡ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಜಾಗತಿಕ ಮೊಬೈಲ್ ಮಾರಾಟದ ಗಾರ್ಟನರ್ ವರದಿ ಇಂತಿದೆ

ಕಂಪನಿ                                        ಮಾರಾಟ 
ಸ್ಯಾಮ್ಸಂಗ್                              8.8 ಕೋಟಿ
ಆ್ಯಪಲ್                                     4.8 ಕೋಟಿ
ಮೈಕ್ರೋಸಾಫ್ಟ್                            2.7 ಕೋಟಿ
ಹವಾಯ್                                    2.6 ಕೋಟಿ
ಎಲ್‌ಜಿ ಎಲೆಕ್ಟ್ರಾನಿಕ್ಸ್                     1.7 ಕೋಟಿ 
ಲೆನೋವೋ                               1.6 ಕೋಟಿ 
ಕ್ಸಿಯೋಮಿ                                  1.6 ಕೋಟಿ 
ಟಿಸಿಎಲ್ ಕಮ್ಯೂನಿಕೇಷನ್            1.5 ಕೋಟಿ 
ಝಡ್‌ಟಿಇ                                  1.4 ಕೋಟಿ
ಮೈಕ್ರೋಮ್ಯಾಕ್ಸ್                         90 ಲಕ್ಷ 






Want to write a unique article ?
Click here to start automatically spinning your articles by using the latest Spin Rewriter 5.0 Technology.








































Post a Comment

0 Comments