Ticker

6/recent/ticker-posts

ಮುತ್ತಿನಂತ ಮಾತೊಂದು ಗೊತ್ತೇನಮ್ಮ - ಬಹದ್ದೂರ್ ಗಂಡು

ಮುತ್ತಿನಂತ ಮಾತೊಂದು ಗೊತ್ತೇನಮ್ಮ - ೧೯೭೬ ರಲ್ಲಿ ಬಿಡುಗಡೆಯಾದ  ಡಾ. ರಾಜಕುಮಾರ್ ಅವರ ಬಹದ್ದೂರ್ ಗಂಡು ಚಿತ್ರದ ಈ ಹಾಡನ್ನು ಎಂ.ರಂಗಾರಾವ್  ಅವರ ಸಂಗೀತದಲ್ಲಿ ಡಾ. ರಾಜಕುಮಾರ್ ಅವರು ಹಾಡಿದ್ದಾರೆ. ಚಿ.ಉದಯಶಂಕರ್  ಅವರ ಉತ್ತಮ ಸಾಹಿತ್ಯವನ್ನು ಒಳಗೊಂಡ ಮರೆಯಲಾಗದ ಹಾಡು. 

ಹಾಡುವಾ ದನಿಯಲ್ಲಿ ಶ್ರುತಿ ಸೇರಬೇಕು,
ನೋಡುವಾ ನೋಟದಲಿ ಹಿತ ಕಾಣಬೇಕು,
ಆಡುವಾ ಮಾತಿನಲಿ..      ಪ್ರೀತಿ ಇರಬೇಕು
ಆ ಆಹಾ ಹಾ ಹಾ .........ಆಹಾ ಹಾ ಹಾ .........ಆಹಾ ಹಾ ಹಾ ಹಾ .........
ಮುತ್ತಿನಂತ ಮಾತೊಂದು ಗೊತ್ತೇನಮ್ಮ, ನಿನಗೆ  ಗೊತ್ತೇನಮ್ಮ
ನಾವು ಕಾಲಕ್ಕೆ ತಕ್ಕಂತೆ ನಡೆಯಬೇಕು, ಎಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು.
ಮುತ್ತಿನಂತ ಮಾತೊಂದು ಗೊತ್ತೇನಮ್ಮ, ನಿನಗೆ  ಗೊತ್ತೇನಮ್ಮ
ನಾವು ಕಾಲಕ್ಕೆ ತಕ್ಕಂತೆ ನಡೆಯಬೇಕು, ಎಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು.
  
ಸಿರಿತನವೆಂದು ಶಾಶ್ವತವಲ್ಲ, ಬಡ ಜನರೆಂದು ಪ್ರಾಣಿಗಳಲ್ಲ,
ದೇವರ ಆಟ ಬಲ್ಲವರಿಲ್ಲ, ಬಾಳಿನ ಮರ್ಮ ಅರಿತವರಿಲ್ಲಾ
ನಿನ್ನೆ ತನಕ ಹಾಯಾಗಿ ಸುಪ್ಪೋತಿಗೆ. ...  ಪಾಪ,
ಇಂದು ಮಣ್ಣೇ ಗತಿಯಾಯ್ತು ಈ ಮೈಯಿಗೆ,
ನಿನ್ನೆ ತನಕ ಹಾಯಾಗಿ ಸುಪ್ಪೋತಿಗೆ,
ಇಂದು ಮಣ್ಣೇ ಗತಿಯಾಯ್ತು ಈ ಮೈಯಿಗೆ
ಎಂದು ಆಳಾಗ ಬಲ್ಲವನೇ ಅರಸಾಗುವ 
ಒಳ್ಳೆ  ಅರಸಾಗುವ ಹೇ ............

ಮುತ್ತಿನಂತ ಮಾತೊಂದು ಗೊತ್ತೇನಮ್ಮ, ನಿನಗೆ  ಗೊತ್ತೇನಮ್ಮ
ನಾವು ಕಾಲಕ್ಕೆ ತಕ್ಕಂತೆ ನಡೆಯಬೇಕು, ಎಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು

ಕಪ್ಪನೆ ಮೋಡ ಕರಗಲೇ ಬೇಕು, ಆಗಸದಿಂದ ಇಳಿಯಲೇ ಬೇಕು
ಕಪ್ಪನೆ ಮೋಡ ಕರಗಲೇ ಬೇಕು,  ಆಗಸದಿಂದ ಇಳಿಯಲೇ ಬೇಕು
ಕೋಟೆ ಕಟ್ಟಿ ಮೆರೆದೊರೆಲ್ಲ ಏನಾದರು ...... ಏನು,
ಮೀಸೆ ತಿರುವಿ ಕುಣಿದೊರೆಲ್ಲ ಮಣ್ಣಾದರು
ಕೋಟೆ ಕಟ್ಟಿ ಮೆರೆದೊರೆಲ್ಲ  ಏನಾದರು,
ಮೀಸೆ ತಿರುವಿ ಕುಣಿದೊರೆಲ್ಲ ಮಣ್ಣಾದರು
ಇನ್ನು ನೀನ್ಯಾವ ಲೆಕ್ಕ ಹೇಳೇ ಸುಕುಮಾರಿಯೇ, ಅಯ್ಯೋ ಹೆಮ್ಮಾರಿಯೇ ಹೇ ....

ಮುತ್ತಿನಂತ ಮಾತೊಂದು ಗೊತ್ತೇನಮ್ಮ,ನಿನಗೆ  ಗೊತ್ತೇನಮ್ಮ
ನಾವು ಕಾಲಕ್ಕೆ ತಕ್ಕಂತೆ ನಡೆಯಬೇಕು,ಎಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು

ಶ್ರೀಮಂತಿಕೆಯು ಮೆರೆಯಲು ಅಲ್ಲಾ,ರಾಜಕುಮಾರಿ ದೇವತೆಯಲ್ಲ
ಶ್ರೀಮಂತಿಕೆಯು ಮೆರೆಯಲು ಅಲ್ಲಾ,ರಾಜಕುಮಾರಿ ದೇವತೆಯಲ್ಲ 
ಹಸಿವು ನಿದ್ದೆ , ಕೋಪ ತಾಪ, ನಿನಗೂ ಇದೆ ...  ಹಾನ್,
ನಿನ್ನಂತೆ ರೋಷ ,ದ್ವೇಷ ನಮಗೂ ಇದೆ
ಹಸಿವು ನಿದ್ದೆ , ಕೋಪ ತಾಪ, ನಿನಗೂ ಇದೆ,
ನಿನ್ನಂತೆ ರೋಷ ,ದ್ವೇಷ ನಮಗೂ ಇದೆ
ಈ ನಿಜವನ್ನು ಅರಿತಾಗ ಹೆಣ್ಣಾ ಗುವೇ , ಇಲ್ಲ ಮಣ್ಣ್  ತಿನ್ನುವೆ. ಹೇ ...

ಮುತ್ತಿನಂತ ಮಾತೊಂದು ಗೊತ್ತೇನಮ್ಮ,ನಿನಗೆ  ಗೊತ್ತೇನಮ್ಮ
ನಾವು ಕಾಲಕ್ಕೆ ತಕ್ಕಂತೆ ನಡೆಯಬೇಕು,ಎಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು

Want to write a unique article ?
Click here to start automatically spinning your articles by using the latest Spin Rewriter 5.0 Technology.

Post a Comment

1 Comments

Comment is awaiting for approval