Ticker

6/recent/ticker-posts

ಆಧುನಿಕ ಸಿಂಗಾಪುರದ ಶಿಲ್ಪಿ ಲೀ ಕೌನ್‌ ಯೂ ನಿಧನ

ಆಧುನಿಕ ಸಿಂಗಾಪುರದ ಶಿಲ್ಪಿ ಎಂದು ಖ್ಯಾತರಾದ ಸಿಂಗಾಪುರದ ಪ್ರಥಮ ಪ್ರಧಾನಿ ಲೀ ಕೌನ್‌ ಯೂ [Lee Kuan Yew] ಅವರು ಇಂದು ಮರಣ  ಹೊಂದಿದ್ದಾರೆ. ಅವರಿಗೆ ೯೧ ವರ್ಷ ವಯಸ್ಸಾಗಿತ್ತು . 

ಕಳೆದ ಒಂದುವರೆ ತಿಂಗಳಿಂದ ನ್ಯೂಮೋನಿಯಾದಿಂದ ಬಳಲುತ್ತಿದ್ದ ಲೀ ಅವರನ್ನು ಸಿಂಗಾಪುರದ ಸರಕಾರಿ ಅಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಇಂದು ಬೆಳಗಿನ ಜಾವ ಸುಮಾರು 3.18 ಗಂಟೆಗೆ ನಿಧನ ಹೊಂದಿದ್ದಾರೆ.   ಮುಂಜಾನೆ ಕೊನೆಯುಸಿರೆಳೆದಿದ್ದಾರೆ.

ಲೀ ಕೌನ್‌ ಯೂ, ೧೯೫೯ ರಲ್ಲಿ People's Action Party (PAP) ಪೀಪಲ್ಸ್  ಆಕ್ಷನ್ ಪಾರ್ಟಿ ಯನ್ನು ಸ್ತಾಪಿಸಿದರು. ಮಲೇಶಿಯಾ ದಿಂದ ಬೇರ್ಪಟ್ಟು, ಕಂಗಾಲಾಗಿದ್ದ ಹೊಸ ದೇಶವಾದ ಸಿಂಗಪೂರದ ಜನರನ್ನು ಅಭಿವ್ರದ್ದಿಯ ಪತದಲ್ಲಿ ನಡೆಸಿದವರು ಲೀ ಕೌನ್‌ ಯೂ. 

೧೯೫೯ ರಲ್ಲಿ ಸಿಂಗಾಪುರದ  ಪ್ರಧಾನಿಯಾದ ಲೀ ಕೌನ್‌ ಯೂ, 30 ವರ್ಷಗಳ ತಮ್ಮ ಅಧಿಕಾರಾವಧಿಯಲ್ಲಿ ಮಲೇರಿಯ ಪೀಡಿತ ಸಣ್ಣ ದ್ವೀಪವನ್ನು ಜಗತ್ತಿನ ಸಮೃದ್ದ ದೇಶವನ್ನಾಗಿ ಅಭಿವೃದ್ಧಿ ಪಡಿಸಿದ ಕೀರ್ತಿಗೆ ಪಾತ್ರರಾದವರು. 

೧೯೯೦ ರಲ್ಲಿ ತಮ್ಮ ಪ್ರಧಾನಿ ಹುದ್ದೆಯಿಂದ ಕೆಳಗಿಳಿದ ಲೀ ಕೌನ್‌ ಯೂ, ಸಿಂಗಪೂರದ ರಾಜಕೀಯ ದಲ್ಲಿ ಸದಾ ತಮ್ಮನ್ನು ತೊಡಗಿಸಿಕೊಂಡವರು. ಲೀ ಅವರ ನಿಧನದ ನಿಮಿತ್ತ  ಮಾರ್ಚ್‌ 23ರಿಂದ 29ರ ವರೆಗೆ ಸಿಂಗಾಪುರದಲ್ಲಿ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಲಾಗಿದೆ. 

ಲೀ ಕೌನ್‌ ಯೂ, ದೈಹಿಕವಾಗಿ  ಮರೆಯಾದರು,  ಸಿಂಗಪೂರದ ಜನರ ಮನದಲ್ಲಿ ಸದಾ ಜೀವಂತರಾಗಿರುತ್ತಾರೆ.


Want to write a unique article ?
Click here to start automatically spinning your articles by using the latest Spin Rewriter 5.0 Technology.



Post a Comment

0 Comments