ಮುಂಜಾನೆ ಎದ್ದು ಎತ್ತುಗಳೊಂದಿಗೆ
ಹೊಲಕ್ಕೆ ಹೋಗುತ್ತಿದ್ದ ಅಜ್ಜ
ಸಂಜೆಯ ತನಕ ನೇಗಿಲು ಹಿಡಿದು
ದುಡಿಯುತ್ತಿದ್ದ ಅಜ್ಜ
ತೋಳ ಮೇಲೆ ನನ್ನ ಹೊತ್ತು
ಸಂತೆಗೆ ಕರೆದೊಯ್ಯುತ್ತಿದ್ದ ಅಜ್ಜ
ಸಂಜೆ ವೇಳೆಯಲಿ ನನ್ನೊಡನೆ
ಆಟವಾಡುತತ್ತಿದ್ದ ಅಜ್ಜ
ರಾಮಾಯಣ, ಮಹಾಭಾರತ
ಓದಿ ಹೇಳುತತ್ತಿದ್ದ ಅಜ್ಜ
ನಾಟಕವನ್ನು ಹುಡುಗರಿಗೆ
ಕಲಿಸಿಕೊಡುತತ್ತಿದ್ದ ಅಜ್ಜ
ಬಿಳಿಯ ಅಂಗಿ, ಪಂಚೆ ಉಟ್ಟು
ಹೆಗಲ ಮೇಲೆ ಅಂಗ ವಸ್ತ್ರ ತೊಟ್ಟು
ಹಣೆಗೆ ವಿಭೂತಿ ಇಟ್ಟು, ನಡೆದರೆ
ಜನ ಕೈ ಮುಗಿಯುತ್ತಿದ್ದರು, ಕೆಲಸವ ಬಿಟ್ಟು
ಒಂದು ಕ್ಷಣವೂ, ಸುಮ್ಮನೆ ಕೂರದ ಅಜ್ಜ
ಸದಾ ಏನಾದರೊಂದು, ಕೆಲಸ ಮಾಡುತ್ತಿದ್ದ ಅಜ್ಜ
ಕಾಯಕವೇ ಕೈಲಾಸವೆಂದು ತೋರಿಸಿಕೊಟ್ಟ ಅಜ್ಜ
ಇಂದು ಕಾಳನೊಂದಿಗೆ ಹೋರಾಡಿ, ಸೋತ ಅಜ್ಜ
ಯಾವುದಕ್ಕೂ ಅಳುಕದ ನಮ್ಮ ತಂದೆಯನ್ನು
ಈಗ ಅಳುವಂತೆ ಮಾಡಿದ ಅಜ್ಜ
ನನ್ನ ಮನದಲ್ಲಿ, ನಮ್ಮ ತಂದೆಯ
ಅಳುವ ಮುಖವನ್ನು ಅಚ್ಚಿಳಿಸಿದ ಅಜ್ಜ
ನಾವೆಲ್ಲಾ ಅಳುತ್ತಿದ್ದರೆ, ನಮ್ಮನ್ನು ನೋಡಿ
ಬಿತ್ತಿ ಚಿತ್ರದಲಿ, ನಗುತ್ತಿರುವ ಅಜ್ಜ
ಇಂದು ನನ್ನಿಂದ, ಕಣ್ಣೀರಂಜಲಿ
ಕವಿತೆ ಬರೆಸುತ್ತಿರುವ ಅಜ್ಜ
ಮಣ್ಣಿನ ಮಗ ನೀ ಅಜ್ಜ
ಇಂದು ಮಣ್ಣಿನಲಿ ಮಣ್ಣಾದೆ
ನೀ ಮಣ್ಣಿನಲಿ ಸೇರಿದರು
ನೀ ಬಿತ್ತಿ ಬೆಳೆಸಿದ ನೆನಪಿನ
ಬೆಳೆ, ಹಚ್ಚ ಹಸುರಾಗಿದೆ, ನನ್ನ
ಮನವೆಂಬ ಹೊಲದಲ್ಲಿ
ಮಾಗುವುದಿಲ್ಲ, ನಿನ್ನ ನೆನಪು
ನನ್ನ
ಅಜ್ಜನ ನೆನಪು
- ಸೆಂದಿಲ್
ಹೊಲಕ್ಕೆ ಹೋಗುತ್ತಿದ್ದ ಅಜ್ಜ
ಸಂಜೆಯ ತನಕ ನೇಗಿಲು ಹಿಡಿದು
ದುಡಿಯುತ್ತಿದ್ದ ಅಜ್ಜ
ತೋಳ ಮೇಲೆ ನನ್ನ ಹೊತ್ತು
ಸಂತೆಗೆ ಕರೆದೊಯ್ಯುತ್ತಿದ್ದ ಅಜ್ಜ
ಸಂಜೆ ವೇಳೆಯಲಿ ನನ್ನೊಡನೆ
ಆಟವಾಡುತತ್ತಿದ್ದ ಅಜ್ಜ
ರಾಮಾಯಣ, ಮಹಾಭಾರತ
ಓದಿ ಹೇಳುತತ್ತಿದ್ದ ಅಜ್ಜ
ನಾಟಕವನ್ನು ಹುಡುಗರಿಗೆ
ಕಲಿಸಿಕೊಡುತತ್ತಿದ್ದ ಅಜ್ಜ
ಬಿಳಿಯ ಅಂಗಿ, ಪಂಚೆ ಉಟ್ಟು
ಹೆಗಲ ಮೇಲೆ ಅಂಗ ವಸ್ತ್ರ ತೊಟ್ಟು
ಹಣೆಗೆ ವಿಭೂತಿ ಇಟ್ಟು, ನಡೆದರೆ
ಜನ ಕೈ ಮುಗಿಯುತ್ತಿದ್ದರು, ಕೆಲಸವ ಬಿಟ್ಟು
ಒಂದು ಕ್ಷಣವೂ, ಸುಮ್ಮನೆ ಕೂರದ ಅಜ್ಜ
ಸದಾ ಏನಾದರೊಂದು, ಕೆಲಸ ಮಾಡುತ್ತಿದ್ದ ಅಜ್ಜ
ಕಾಯಕವೇ ಕೈಲಾಸವೆಂದು ತೋರಿಸಿಕೊಟ್ಟ ಅಜ್ಜ
ಇಂದು ಕಾಳನೊಂದಿಗೆ ಹೋರಾಡಿ, ಸೋತ ಅಜ್ಜ
ಯಾವುದಕ್ಕೂ ಅಳುಕದ ನಮ್ಮ ತಂದೆಯನ್ನು
ಈಗ ಅಳುವಂತೆ ಮಾಡಿದ ಅಜ್ಜ
ನನ್ನ ಮನದಲ್ಲಿ, ನಮ್ಮ ತಂದೆಯ
ಅಳುವ ಮುಖವನ್ನು ಅಚ್ಚಿಳಿಸಿದ ಅಜ್ಜ
ನಾವೆಲ್ಲಾ ಅಳುತ್ತಿದ್ದರೆ, ನಮ್ಮನ್ನು ನೋಡಿ
ಬಿತ್ತಿ ಚಿತ್ರದಲಿ, ನಗುತ್ತಿರುವ ಅಜ್ಜ
ಇಂದು ನನ್ನಿಂದ, ಕಣ್ಣೀರಂಜಲಿ
ಕವಿತೆ ಬರೆಸುತ್ತಿರುವ ಅಜ್ಜ
ಮಣ್ಣಿನ ಮಗ ನೀ ಅಜ್ಜ
ಇಂದು ಮಣ್ಣಿನಲಿ ಮಣ್ಣಾದೆ
ನೀ ಮಣ್ಣಿನಲಿ ಸೇರಿದರು
ನೀ ಬಿತ್ತಿ ಬೆಳೆಸಿದ ನೆನಪಿನ
ಬೆಳೆ, ಹಚ್ಚ ಹಸುರಾಗಿದೆ, ನನ್ನ
ಮನವೆಂಬ ಹೊಲದಲ್ಲಿ
ಮಾಗುವುದಿಲ್ಲ, ನಿನ್ನ ನೆನಪು
ನನ್ನ
ಅಜ್ಜನ ನೆನಪು
- ಸೆಂದಿಲ್
1 Comments
Dedicated to my grandfathers Chinnakuppan and Govindan. the two people who influenced my childhood so much and continue to inspire me
ReplyDeleteComment is awaiting for approval