ಆಡೋಣ ಬನ್ನಿ ಕಣ್ಣ ಮುಚ್ಚಾಲೆ | ಕನ್ನಡ ಜಾನಪದ ಗೀತೆಗಳು #15 [Aadona Banni Kanna Mucchaale Lyrics]: ಜಾನಪದ ಗೀತೆಗಳು ಸಾಮಾನ್ಯ ಜನರು ರಚಿಸಿದ ಹಾಡುಗಳು ಆದರೆ ಅವುಗಳಲ್ಲಿ ಅಸಾಧಾರಣ ಭಾವನೆ ಮತ್ತು ಭಕ್ತಿ ಇದೆ. ಅವರು ಎಲ್ಲಾ ರೀತಿಯ ಭಾವನೆಗಳು, ಸನ್ನಿವೇಶಗಳು ಮತ್ತು ಆಚರಣೆಗಳಿಗೆ ಹಾಡುಗಳನ್ನು ರಚಿಸಿದ್ದಾರೆ. ಈ ಜಾನಪದ ಹಾಡುಗಳನ್ನು ಪೀಳಿಗೆಯಿಂದ ಪೀಳಿಗೆಗೆ ರವಾನಿಸಲಾಗಿದೆ.
ಪ್ರಕಾರ: ಜಾನಪದ / ಭಕ್ತಿಗೀತೆ
ಭಾಷೆ: ಕನ್ನಡ
ಸಂಗೀತ: ಜನಪದ
ಸಾಹಿತ್ಯ: ಜನಪದ
ಗಾಯನ: ವಿವಿಧ ಗಾಯಕರು
ಆಡೋಣ ಬನ್ನಿ ಕಣ್ಣ ಮುಚ್ಚಾಲೆ | Aadona Banni Kanna Mucchaale Lyrics
ಆಡೋಣ ಬನ್ನಿ ಕಣ್ಣ ಮುಚ್ಚಾಲೆ
ತೂಗೋಣ ಬನ್ನಿ ಉಯ್ಯಾಲೆ
ಜೀವನ್ವೊಂದು ನಾಟಕ ಶಾಲೆ
ನಾವೆಲ್ಲ ಕುಣಿಯುವ ನರ್ತನ ಶಾಲೆ ||
ಸುತ್ತಾಲು ಚೆಲ್ಲಿದ ರಂಗುರಂಗೋಲೆ
ಬಳುಕುತ ಬರುವಳು ವನಮಾಲೆ
ಭರದಿಂದ ಬಂದು ಪಚ್ಚೆಯ ಸಾಲೆ
ತೂಗಾಡಿ ಕರೆದಾವು ತೆಂಗಿನ ಸಾಲೆ
ಉಯ್ಯಾಲೆ ಚಂಪಾಲೆ ||
ಹಕ್ಕಿಗಳಿಂಚರ ಕರೆಯೋಲೆ
ಕುಣಿಯುತ ಬರುವಳು ನವ್ವಾಲೆ
ಇಂಪು ಇಂಪಿನ ಗುಂಪು ಕೋಗಿಲೆ
ಕಂಪನು ಸೂಸುವ ಹೂಗಳ ಮಾಲೆ
ಉಯ್ಯಾಲೆ ಚಂಪಾಲೆ ||
0 Comments
Comment is awaiting for approval