Ticker

6/recent/ticker-posts

ಬೆಳಗಾಯ್ತು ಏಳು ಹೇ ಮುದ್ದು ಬೆನಕ | ಗಣೇಶ ಭಕ್ತಿ ಗೀತೆಗಳು

ಬೆಳಗಾಯ್ತು ಏಳು ಹೇ ಮುದ್ದು ಬೆನಕ |  ಗಣೇಶ ಭಕ್ತಿ ಗೀತೆಗಳು: [Belagayithu Yelu Hey Muddu Benaka Lyrics In Kannada । Lord Ganesha Devotional Songs] : ಸರ್ವರಿಗೂ ಗೌರಿ ಗಣೇಹ ಹಬ್ಬದ ಹಾರ್ಥಿಕ ಶುಭಾಶಯಗಳು. 










ಬೆನಕ ಬೆನಕ ಏಕದಂತ..
ಪಚ್ಚೆ ಕಲ್ಲು ಪಾಣಿ ಪೀಠ
ಮುತ್ತಿನುಂಡೆ ಹೊನ್ನಗಂಟೆ ಒಪ್ಪುವ
ಗುಡ್ಡ ಬೆಟ್ಟದಲ್ಲಿ ತಂಬಿಟ್ಟು ಮುಕ್ಕುವ
ಪುಟ್ಟ ವಿಘ್ನೇಶ ದೇವರಿಗೆ
ಇಪ್ಪತ್ತೊಂದು ನಮಸ್ಕಾರಗಳು..

ಬೆಳಗಾಯ್ತು ಏಳು ಹೇ ಮುದ್ದು ಬೆನಕ 
ಭುವಿಯೆಲ್ಲ ರಂಗಾಯ್ತು ನೀ ಏಳೋ ಬೆನಕ 

ಬೆಳಗಾಯ್ತು ಏಳು ಹೇ ಮುದ್ದು ಬೆನಕ 
ಭುವಿಯೆಲ್ಲ ರಂಗಾಯ್ತು ನೀ ಏಳೋ ಬೆನಕ

ಅಂಬ ಪ್ರಿಯ ತನಯ ಆದಿ ಪೂಜಿತನೆ 
ಮೂಡನದೆ ರವಿ ಎದ್ದ ನೀ ಏಳು ಬೆನಕ

ಬೆಳಗಾಯ್ತು ಏಳು ಹೇ ಮುದ್ದು ಬೆನಕ 
ಭುವಿಯೆಲ್ಲ ರಂಗಾಯ್ತು ನೀ ಏಳೋ ಬೆನಕ

ಮಾಮರದಿ ಕೋಗಿಲೆಯು ಪಚ್ಚ ವರ್ಣದ ಗಿಳಿಯು 
ಸುಪ್ರಭಾತವ ನಿನಗೆ  ಹಾಡುತಿವೆ ಬೆನಕ

ಮಾಮರದಿ ಕೋಗಿಲೆಯು ಪಚ್ಚ ವರ್ಣದ ಗಿಳಿಯು 
ಸುಪ್ರಭಾತವ ನಿನಗೆ  ಹಾಡುತಿವೆ ಬೆನಕ

ಆ ನಿನ್ನ ಸೊಂಡೀಲು ನಿನ್ನ ಬರುವನು ಕಾದು 
ಆ ನಿನ್ನ ಸೊಂಡೀಲು ನಿನ್ನ ಬರುವನು ಕಾದು
ಕಾಲುಗಳ ತಿನ್ನುತಲಿ ಕುಳಿತಿಹುದು ಬೆನಕ

ಬೆಳಗಾಯ್ತು ಏಳು ಹೇ ಮುದ್ದು ಬೆನಕ 
ಭುವಿಯೆಲ್ಲ ರಂಗಾಯ್ತು ನೀ ಏಳೋ ಬೆನಕ

ಹುಲ್ಲು ಗರಿಕೆಯು ದೂರ್ವೆ ಆಗಿ ಕಾದಿಹುದು 
ಪೂಜೆಯಲಿ ನಿನ್ನ ಅಲಂಕರಿಸಲೆಂದು 
ನಾಗಲಿಂಗದ ಪುಷ್ಪ ಕಮಲಗಳು ಕಾದಿಹವು 
ನಾಗಲಿಂಗದ ಪುಷ್ಪ ಕಮಲಗಳು ಕಾದಿಹವು 
ಗಣಪತಿಯ ಅರ್ಚನೆಗೆ ಸಿದ್ಧವಾಗಿಹೆವೆಂದು

ಬೆಳಗಾಯ್ತು ಏಳು ಹೇ ಮುದ್ದು ಬೆನಕ 
ಭುವಿಯೆಲ್ಲ ರಂಗಾಯ್ತು ನೀ ಏಳೋ ಬೆನಕ

ನಿನಗಾಗಿ ಮಾಡಿಟ್ಟ ತಂಬಿಟ್ಟು ಚಕ್ಕುಲಿ 
ಕಾಯುತಿವೆ ನಿನ್ನ ಸ್ವೀಕಾರಕಾಗಿ 

ನಿನಗಾಗಿ ಮಾಡಿಟ್ಟ ತಂಬಿಟ್ಟು ಚಕ್ಕುಲಿ 
ಕಾಯುತಿವೆ ನಿನ್ನ ಸ್ವೀಕಾರಕಾಗಿ 

ನಿನ್ನ ಪೂಜೆಯ ಮಾಡೆ ಭಕ್ತ ಜನ ವೃಂದ 
ನಿನ್ನ ಪೂಜೆಯ ಮಾಡೆ ಭಕ್ತ ಜನ ವೃಂದ
ಕಾದಿಹುದು ನಿನ್ನ ವರ ಭಿಕ್ಷೆಗಾಗಿ 

ಬೆಳಗಾಯ್ತು ಏಳು ಹೇ ಮುದ್ದು ಬೆನಕ 
ಭುವಿಯೆಲ್ಲ ರಂಗಾಯ್ತು ನೀ ಏಳೋ ಬೆನಕ 
ಬೆಳಗಾಯ್ತು ಏಳು ಹೇ ಮುದ್ದು ಬೆನಕ 
ಭುವಿಯೆಲ್ಲ ರಂಗಾಯ್ತು ನೀ ಏಳೋ ಬೆನಕ
ಅಂಬ ಪ್ರಿಯ ತನಯ ಆದಿ ಪೂಜಿತನೆ 
ಮೂಡನದೆ ರವಿ ಎದ್ದ ನೀ ಏಳು ಬೆನಕ

ಬೆಳಗಾಯ್ತು ಏಳು ಹೇ ಮುದ್ದು ಬೆನಕ 
ಭುವಿಯೆಲ್ಲ ರಂಗಾಯ್ತು ನೀ ಏಳೋ ಬೆನಕ 

Post a Comment

0 Comments