ಭಾರತದಲ್ಲಿ ಮ್ಯಾಗ್ಲೇವ್ ರೈಲು: ಗಂಟೆಗೆ 500 ಕಿ.ಮೀ ಗೂ ಮೀರಿದ ವೇಗದಲ್ಲಿ
ಸಂಚರಿಸುವ ಅತ್ಯಾಧುನಿಕ ಮ್ಯಾಗ್ಲೇವ್ ರೈಲು (ಅಯಸ್ಕಾಂತೀಯ ಶಕ್ತಿಯಲ್ಲಿ ಓಡುವ ರೈಲು) [Mag Lev Train]
ಸೇವೆಯನ್ನು ಒದಗಿಸುವ ಸಂಬಂಧ ರೈಲ್ವೆ ಇಲಾಖೆ ವಿದೇಶಿ ಖಾಸಗಿ ಕಂಪನಿಗಳನ್ನು
ಆಹ್ವಾನಿಸಿದೆ. ಬಿಡ್ಡಿಂಗ್ ಗೆದ್ದ ಕಂಪನಿಗಳು ಮಾರ್ಗ ನಿರ್ಮಾಣ, ವಿನ್ಯಾಸ, ಯೋಜನೆಯ
ಜಾರಿ ಹೊಣೆಯನ್ನು ಹೊತ್ತುಕೊಳ್ಳಬೇಕಾಗುತ್ತದೆ. ಆರಂಭದಲ್ಲಿ 10-15 ಕಿ.ಮೀ
ಮ್ಯಾಗ್ಲೆàವ್ ವ್ಯವಸ್ಥೆ ರೂಪಿಸಿ ಅದನ್ನು ಪರೀಕ್ಷಿಸುವ ಇರಾದೆ ಸರ್ಕಾರಕ್ಕಿದೆ.
ಬೆಂಗಳೂರು-ಚೆನ್ನೈ, ಹೈದ್ರಾಬಾದ್-ಚೆನ್ನೈ, ನವದೆಹಲಿ-ಚಂಡೀಗಢ, ನಾಗ್ಪುರ-ಮುಂಬೈಗಳ ಮಧ್ಯೆ ಮ್ಯಾಗ್ಲೇವ್ ರೈಲುಗಳನ್ನು ಓಡಿಸುವ ಇರಾದೆ ರೈಲ್ವೆಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದಕ್ಕಾಗಿ 500-200 ಕಿ.ಮೀ ದೂರದ ಪ್ರತ್ಯೇಕ ಎಲಿವೇಟೆಡ್ ಮಾರ್ಗ ನಿರ್ಮಾಣ ಮಾಡಬೇಕಾಗುತ್ತದೆ.
ಮ್ಯಾಗ್ಲೇವ್ ಅಂದರೆ ಮ್ಯಾಗ್ನೆಟಿಕ್
ಲೀವಿಯೇಷನ್ (ಅಯಸ್ಕಾಂತೀಯ ತೇಲುವಿಕೆ) ಎಂದರ್ಥ. ಅರ್ಥಾತ್ ಈ ತಂತ್ರಜ್ಞಾನದಲ್ಲಿ
ನೆಲವನ್ನು ಸ್ಪರ್ಶಿಸದೇ, ತೇಲುತ್ತ ಸಾಗುತ್ತದೆ. ವಿದ್ಯುತ್ ನಿಯಂತ್ರಕ ಅಯಸ್ಕಾಂತಗಳ
ಮೂಲಕ ಇದನ್ನು ತೇಲುವಂತೆ ಮತ್ತು ಮುಂದಕ್ಕೆ ಸಂಚರಿಸುವಂತೆ ಮಾಡಲಾಗುತ್ತದೆ. ಎಲ್ಲಾ
ಮ್ಯಾಗ್ಲೆàವ್ ರೈಲುಗಳ ಮೂಲ ತಂತ್ರಜ್ಞಾನ ಒಂದೇ. ಇದೂ ಕೂಡ ಮೋನೋ ರೈಲು (ಏಕ ಹಳಿ)ಯ
ರೀತಿಯಲ್ಲಿ ಚಲಿಸುತ್ತದೆ. ಆದರೆ ದೊಡ್ಡ ಚಕ್ರಗಳಿರುವುದಿಲ್ಲ. 150 ಕಿ.ಮೀ. ವೇಗ
ಪಡೆವಲ್ಲಿವರೆಗೆ ಪುಟ್ಟ ಚಕ್ರ ಬಳಸುವ ರೈಲು ಬಳಿಕ ಅಯಸ್ಕಾಂತೀಯ ಶಕ್ತಿಯಿಂದ ತೇಲುತ್ತ
ಸಾಗುತ್ತದೆ ಎಂಬುದು ವಿಶೇಷ.
ಮ್ಯಾಗ್ಲೇವ್ ರೈಲು ಅತಿ ದುಬಾರಿ ತಂತ್ರಜ್ಞಾನ.
ಚೀನಾದಲ್ಲಿ 30 ಕಿ.ಮೀ ಮಾರ್ಗ ನಿರ್ಮಾಣ ಮತ್ತು ರೈಲುಗಳ ನಿರ್ಮಾಣಕ್ಕೆ 6700 ಕೋಟಿ ರೂ.
ವೆಚ್ಚವಾಗಿತ್ತು. ಅಂದರೆ ಪ್ರತಿ ಕಿ.ಮೀಗೆ 220 ಕೋಟಿ ರೂ. ಜೊತೆಗೆ ಅವುಗಳನ್ನು
ಓಡಿಸುವುದೂ ದುಬಾರಿಯೇ. ಇದೇ ಕಾರಣಕ್ಕೆ ಅಮೆರಿಕ, ದಕ್ಷಿಣ ಕೊರಿಯಾಗಳು ತಮ್ಮಲ್ಲಿ
ತಂತ್ರಜ್ಞಾನ ಹೊಂದಿದ್ದರೂ ರೈಲುಗಳನ್ನು ಓಡಿಸುತ್ತಿಲ್ಲ.
0 Comments
Comment is awaiting for approval