ಖ್ಯಾತ ನಟ ಕಮಲ್ ಹಾಸನ್ ಅವರು ತಮ್ಮ ಮುಂದಿನ ಚಿತ್ರದ ಬಗೆಗಿನ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ.ತಮ್ಮ
ಯು ಟ್ಯೂಬ್ ಚಾನೆಲ್ ಮೂಲಕ ಮಾತನಾಡಿದ ಕಮಲ್ 'ತಮ್ಮ ಮುಂದಿನ ಚಿತ್ರದ ಹೆಸರು - ತೂಂಗ
ವನಂ [ನಿದ್ರಿಸದ ವನ] ಎಂದು ಖಚಿತ ಪಡಿಸಿದ್ದಾರೆ. ಇದು ಒಂದು ಥ್ರಿಲ್ಲರ್ ಚಿತ್ರವೆಂದು,
ತಮಿಳು ಹಾಗು ತೆಲುಗು ಭಾಷೆಗಳಲ್ಲಿ ಚಿತ್ರಿಕರಿಸಲಾಗುವುದು ಎಂದು ತಿಳಿಸಿದ ಅವರು, ಈ
ತಿಂಗಳ ಮೇ ೨೪ ರಿಂದ ಹೈದರ ಬಾದ್ ನಲ್ಲಿ ಚಿತ್ರೀಕರಣ ೪೦ ದಿನಗಳ ಕಾಲ, ನಂತರ ಚೆನ್ನೈ
ನಲ್ಲಿ ೩೦ ದಿನ ನಡೆಯುತ್ತದೆ ಎಂದು ತಿಳಿಸಿದ್ದಾರೆ.
ಚಿತ್ರದ ತಾಂತ್ರಿಕ ತಂಡದ
ಬಗ್ಗೆ ತಿಳಿಸುತ್ತಾ - ಈ ಚಿತ್ರವನ್ನು ತಮ್ಮ ಅಸಿಸ್ಟೆಂಟ್ ಆಗಿದ್ದ ರಾಜೇಶ್
ನಿರ್ದೇಶಿಸುತ್ತಾರೆ. ಛಾಯಾಗ್ರಹಣ - ವಿಶ್ವರೂಪಂ ಖ್ಯಾತಿಯ ಸಾನು ವರ್ಗೀಸ್, ಸಂಕಲನ -
ವಿಜಯ್ ಶಂಕರ್ ಹಾಗು ಸಂಗೀತ - ಜಿಬ್ರನ್
ಈ ಚಿತ್ರವನ್ನು ಸ್ವತಃ ಕಮಲ್ ಅವರೇ ತಮ್ಮ 'ರಾಜ್ ಕಮಲ್ ಫಿಲಂಸ್ ಇಂಟರ್ನ್ಯಾಷನಲ್ ಮೂಲಕ ತಯಾರಿಸುತ್ತಿದ್ದಾರೆ. ಚಿತ್ರದ ಕಥೆ ಸಹ ಕಮಲ್ ಅವರೇ ಬರೆದಿದ್ದರೆ.
ಈಗ ತಾನೆ 'ಉತ್ತಮ ವಿಲನ್' ಮೂಲಕ ಪ್ರೇಕ್ಷಕರನ್ನು ರಂಜಿಸಿದ ಕಮಲ್, ಪಾಪನಾಸಂ, ವಿಶ್ವರೂಪಂ ೨ ಹಾಗು ತೂಂಗ ವನಂ ಸೇರಿ ಮೂರು 3 ಚಿತ್ರಗಳನ್ನು ಒಂದರ ಹಿಂದೆ ಒಂದಂತೆ ಬಿಡುಗಡೆ ಮಾಡಿ, ತಮ್ಮ ಪ್ರೇಕ್ಷಕರಿಗೆ ಹಬ್ಬದ ವಾತಹವರಣವನ್ನು ಸೃಷ್ಟಿಸಲಿದ್ದಾರೆ.
ಕಮಲ್ ಹಾಸನ್ ಅವರಿಗೆ ಯಶಸ್ಸು ಸಿಗಲಿ ಎಂಬ ಹಾರೈಕೆಯೊಂದಿಗೆ

0 Comments
Comment is awaiting for approval