Ticker

6/recent/ticker-posts

ಜಾನಪದ ರತ್ನ - ಸಿಂಪಿ ಲಿಂಗಣ್ಣ - Simpi Linganna

ಸಿಂಪಿ ಲಿಂಗಣ್ಣನವರು [Simpi Linganna]  ‘ಜಾನಪದ ರತ್ನ’ರೆಂದು ಖ್ಯಾತರಾದವರು.

ಜಾನಪದ ಸಂಶೋಧಕರು, ಕವಿಗಳು, ಪ್ರಬಂಧಕಾರರು, ನಾಟಕಕಾರರೂ ಆದ ಲಿಂಗಣ್ಣನವರು ಹುಟ್ಟಿದ್ದು ವಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಚಡಚಣ ಗ್ರಾಮದಲ್ಲಿ  ಫೆಬ್ರವರಿ 10, 1905ರಂದು. ತಂದೆ ಶಿವಯೋಗಪ್ಪ, ತಾಯಿ ಸಾವಿತ್ರಿ.
ಅವರ  ತಂದೆ ಶಿವಯೋಗಿಗಳು ಬಯಲಾಟದ ಪಾತ್ರದಲ್ಲಿ ಪ್ರಸಿದ್ಧರು. ಅಣ್ಣ ಈರಪ್ಪ ಕರಡಿ ಮಜಲು ಬಾರಿಸುವುದರಲ್ಲಿ ನಿಸ್ಸೀಮರು . ಹೀಗೆ ಕುಟುಂಬದಲ್ಲಿ ಜಾನಪದದ ಆಸಕ್ತಿ ಮೂಡಿಸುವ ಎಳೆಗಳು ಜೊತೆಗೂಡಿದ್ದವು. 

ಐದು ವರ್ಷದವರಿರುವಾಗಲೇ ತಂದೆ ತಾಯಿಯನ್ನು ಕಳೆದುಕೊಂಡು ಬೆಳದದ್ದು ಅಣ್ಣ ಅತ್ತಿಗೆಯರ ಆರೈಕೆಯಲ್ಲಿ.  ಅಣ್ಣ ಸೀರೆ ನೇಯ್ದು ಮಾರುವ ಕೆಲಸ ಕೈಗೊಂಡರೆ, ಲಿಂಗಣ್ಣ ಬಿಡುವಿನ ವೇಳೆಯಲ್ಲಿ ಉಪ್ಪು ಮಾರಿ ಸ್ವತಃ ಅಡುಗೆ ಮಾಡಿಕೊಂಡು ಜೀವನ ಸಾಗಿಸುವ ಬದುಕು ಮೂಡಿತ್ತು. ನಂತರ ಅಣ್ಣ ಈರಣ್ಣ, ‘ಗುರಮ್ಮ’ ಎಂಬಾಕೆಯನ್ನು ಮದುವೆಯಾದಾಗ ಲಿಂಗಣ್ಣನವರಿಗೆ ಅಡುಗೆ ತಾಪತ್ರಯದಿಂದ ವಿಮುಕ್ತಿ ದೊರೆಯಿತು. ಈ ಅತ್ತಿಗೆ ‘ಗುರಮ್ಮ’ ಹೇಳುತ್ತಿದ್ದ ಗರತಿ ಹಾಡುಗಳು ಲಿಂಗಣ್ಣನವರಿಗೆ ಜನಪದ ಸಾಹಿತ್ಯದ ಹುಚ್ಚು ಹಿಡಿಸಿತು.

ಚಿಕ್ಕಂದಿನಲ್ಲೇ ಲಿಂಗಣ್ಣನವರ ಮನೆಯಲ್ಲಿ ಬಾಡಿಗೆಗಿದ್ದ ಶ್ರೀಮಧುರಚೆನ್ನರು ಲಿಂಗಣ್ಣನವರಿಗೆ ಪರಮಾಪ್ತರಾದರು. 1922ರಲ್ಲಿ ಲಿಂಗಣ್ಣ ಮುಲ್ಕೀ ಪರೀಕ್ಷೆಯಲ್ಲಿ ಜಿಲ್ಲೆಗೇ ಪ್ರಥಮ ಸ್ಥಾನ ಪಡೆದು ಪಾಸಾದರೂ ಮುಂದೆ ಓದಲು ಹಣವಿಲ್ಲದೆ, ಅಣ್ಣನ ಜೊತೆಯಲ್ಲಿ ಸೀರೆ ನೇಯುವ ಕಾಯಕಕ್ಕೆ ತೊಡಗಿದರು. 

ಶಿಕ್ಷಕರ ಟ್ರೈನಿಂಗ್‌ ಪರೀಕ್ಷೆಯಲ್ಲಿ ಮುಂಬೈ ಕರ್ನಾಟಕದ ನಾಲ್ಕು ಜಿಲ್ಲೆಗಳಿಗೆ ಪ್ರಥಮ ಸ್ಥಾನ ಪಡೆದು ಹಲವರು ಬಹುಮಾನಗಳನ್ನು ಗಳಿಸಿದರು. ೧೯೨೫ರಲ್ಲಿ ಉಪಾಧ್ಯಾಯರಾಗಿ ಸೇರಿ ಭತಗುಣಕಿ, ಇಂಗಳೇಶ್ವರ, ಹಲಸಂಗಿ, ಇಂಡಿ, ಚಡಚಣ ಮುಂತಾದೆಡೆಯಲ್ಲೆಲ್ಲಾ ಸೇವೆ ಸಲ್ಲಿಸಿ ೧೯೬೦ರಲ್ಲಿ ನಿವೃತ್ತರಾದರು.

ಓದುವ ಹವ್ಯಾಸ ಬತ್ತಲಿಲ್ಲ. ಗೆಳೆಯರ ಜೊತೆ ಸೇರಿ ‘ವಾಗ್ವಿಲಾಸ’ ಎಂಬ ವಾಚನಾಲಯ ತೆರೆದರು. ಊರಿನ ಜನರಿಂದ 800 ಗ್ರಂಥಗಳನ್ನು ಸಂಗ್ರಹಿಸಿ ಜನರಿಗೆ ಓದುವ ಹವ್ಯಾಸ ಹಚ್ಚಿದರು. ಹಲಸಂಗಿ ಮಲ್ಲಪ್ಪ ಮತ್ತು ಸಿಂಪಿ ಲಿಂಗಣ್ಣ ಜೊತೆಗೂಡಿ ‘ಹಲಸಂಗಿ’ ಗೆಳೆಯರ ಬಳಗ ನಿರ್ಮಿಸಿದರು. ಮುಂದೆ ಸಿಂಪಿ ಲಿಂಗಣ್ಣನವರು ಪ್ರಾಥಮಿಕ ಶಿಕ್ಷಕರ ತರಬೇತಿ ಪಡೆಯಲು ಧಾರವಾಡಕ್ಕೆ ಹೋದಾಗ ಶಂಭಾ, ಬೇಂದ್ರೆ, ಆಲೂರರ ಪರಿಚಯ ಮಾಡಿಕೊಂಡರು. 

ಸಿಂಪಿ ಲಿಂಗಣ್ಣನವರು ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಸುಮಾರು 35 ವರ್ಷ ಸೇವೆ ಸಲ್ಲಿಸಿದರು. ಸದಾ ಚಿಂತನಶೀಲರು, ಕ್ರಿಯಾಶೀಲ ವ್ಯಕ್ತಿತ್ವ. ವೈಚಾರಿಕ ಮನೋಧರ್ಮದವರು. ಆಧುನಿಕ ಸೌಲಭ್ಯಗಳಿಲ್ಲದ ಹಳ್ಳಿಗಳಲ್ಲಿ ಹಳ್ಳಿಗರಾಗಿ ಜನರೊಂದಿಗೆ ಹೊಂದಿಕೊಂಡು ಮಕ್ಕಳಿಗೆ ಜ್ಞಾನ ನೀಡಿದರು. ಶಾಲೆಗಲ್ಲಿ ನಾಡಹಬ್ಬ, ಗಣೇಶೋತ್ಸವಗಳನ್ನು ಆಚರಿಸಿ ಪ್ರಸಿದ್ಧ ಸಾಹಿತಿಗಳಿಂದ ಭಾಷಣ ಮಾಡಿಸಿ ಜನರಲ್ಲಿ ರಾಷ್ಟ್ರೀಯ ಪ್ರಜ್ಞೆಯನ್ನು ಮೂಡಿಸಿದರು. 

‘ಕಮತಿಗ’ ವಾರಪತ್ರಿಕೆ ಹೊರಡಿಸಿ ಹೊಸ ಬರಹಗಾರರಿಗೆ ಪ್ರೋತ್ಸಾಹ ನೀಡಿದರು. ರಾಷ್ತ್ರೀಯ ಲಾವಣಿ ರಚಿಸಿ, ಹಾಡಿಸಿ, ಸ್ವಾತಂತ್ರ ಚಳುವಳಿಗೆ ಕುಮ್ಮಕ್ಕು ನೀಡಿದರೆಂದು ಬೇರೆ ಊರಿಗೆ ವರ್ಗವಾದರು. ಅಸ್ಪೃಶ್ಯತೆಯನ್ನು ಎತ್ತಿ ತೋರಿಸುವ ‘ಮರೆ ಮುಚ್ಚಕ’ ನಾಟಕ ರಚಿಸಿ, ಆಡಿಸಿ, ಸಮಾಜದ ಬಹಿಷ್ಕಾರಕ್ಕೆ ಒಳಗಾದರು. 
ಯಾವ ಊರಿಗೆ ವರ್ಗವಾಗಿ ಹೋದರೂ ಸಿಂಪಿ ಲಿಂಗಣ್ಣನವರು ತಮ್ಮ ಕೆಲಸವನ್ನು ನಿಲ್ಲಿಸಿದವರಲ್ಲ. ಓದುವುದು ಓದಿಸುವುದು, ಬರೆಯುವುದು, ಆಡಿಸುವುದು, ಅವರ ನಿತ್ಯಕರ್ಮದಲ್ಲಿ ಒಂದಾಗಿತ್ತು. ಶುಭ್ರ ಖಾದಿಧೋತರ, ಖಾದಿಶರ್ಟು, ಮೇಲೊಂದು ಕೋಟು, ತಲೆಯಮೇಲೆ ಗಾಂಧೀ ಟೋಪಿ ಇವು ಅವರ ಪರಿಶುದ್ಧಜೀವನವನ್ನೇ ಪ್ರತಿಬಿಂಬಿಸುತ್ತಿದ್ದವು.

ಬಾಲ್ಯದ ಗೆಳೆಯರಾದ ಶ್ರೀಮಧುರಚೆನ್ನರ ಒಡನಾಟದಿಂದ ಸಿಂಪಿ ಲಿಂಗಣ್ಣನವರಲ್ಲಿಯೂ ಅಧ್ಯಾತ್ಮದ ಒಲವು ಮೂಡಿತು. ಆಧ್ಯಾತ್ಮದಲ್ಲಿ ಸಿಂಪಿಯವರು ತಮ್ಮ ಒಡನಾಡಿ ಗೆಳೆಯರಾದ ಶ್ರೀ ಮಧುರ ಚೆನ್ನರಿಂದ ಪ್ರೇರಿತರಾಗಿ ಶ್ರೀ ಅರವಿಂದರ ಆಶ್ರಮಕ್ಕೆ ಸಂದರ್ಶನವಿತ್ತು ‘ಪೂರ್ಣಯೋಗ’ ಪಥದಲ್ಲಿ ಸಾಮರಸ್ಯ ಪಡೆದರು. ಶ್ರೀ ಮಾತ ಅರವಿಂದರ ಪರಮಭಕ್ತರಾಗಿ ದಿವ್ಯಜೀವನ ಸಾಗಿಸಿದರು. 

ಚಿಕ್ಕಂದಿನಿಂದಲೇ ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಂಡ ಲಿಂಗಣ್ಣನವರು 1922ರಲ್ಲಿ ‘ಸಾವಿನ ಸಮಸ್ಯೆ’ ಎಂಬ ಏಕಾಂಕ ನಾಟಕ ಬರೆದು ಸಾಹಿತ್ಯಕ್ಷೇತ್ರವನ್ನು ಪ್ರವೇಶಿಸಿದರು. ಜನಪದ ಸಾಹಿತ್ಯ, ಕಾವ್ಯ, ಪ್ರಬಂಧಗಳು, ಜೀವನ ಚರಿತ್ರೆ, ಸಣ್ಣಕಥೆ, ಕಾದಂಬರಿ, ಏಕಾಂಕ ನಾಟಕ, ಮಕ್ಕಳ ಹಾಗೂ ನವ್ಯ ಸಾಕ್ಷರ ಸಾಹಿತ್ಯ, ಅನುವಾದಿತ ಸಾಹಿತ್ಯ, ಅರವಿಂದರ ಸಾಹಿತ್ಯ ಹೀಗೆ ವಿಭಿನ್ನ ನೆಲೆಗಳ ಸಾಹಿತ್ಯದಲ್ಲಿ ಒಂದು ನೂರಕ್ಕೂ ಹೆಚ್ಚಿನ ಕೃತಿಗಳನ್ನು ಲಿಂಗಣ್ಣನವರು ನೀಡಿದ್ದಾರೆ. 

ಇವರ ತಾಯಿ ಮತ್ತು ಅತ್ತಿಗೆಯವರು ಹೇಳುತ್ತಿದ್ದ ತ್ರಿಪದಿಗಳನ್ನು ಬಾಲ್ಯದಿಂದಲೇ ಕೇಳುತ್ತಾ ಲಿಂಗಣ್ಣನವರಲ್ಲಿ ಜನಪದ ಸಾಹಿತ್ಯದತ್ತ ಒಲವು ಬೆಳೆಯ ತೊಡಗಿತು. ನಂತರ ಇವರು ಸಂಗ್ರಹಿಸಿದ ಜನಪದ ಹಾಡುಗಳನ್ನು ‘ಗರತಿಯ ಹಾಡು’ ಮತ್ತು ‘ಜೀವನ ಸಂಗೀತ’ ಎಂಬ ಸಂಕಲನಗಳಲ್ಲಿ ಪ್ರಕಟಿಸಿದರು. ನಂತರ ಹೊರತಂದ ಪುಸ್ತಕ ‘ಉತ್ತರ ಕರ್ನಾಟಕದ ಜನಪದ ಕಥೆಗಳು’. ಶಾಸ್ತ್ರೀಯವಾಗಿ ಒಂಬತ್ತು ಭಾಗಗಳಾಗಿ ವಿಭಜಿಸಿ ಪ್ರಕಟಿಸಿದ ಈ ಕೃತಿಯು ಎಂ.ಎ. ತರಗತಿಗಳಿಗೆ ಪಠ್ಯಪುಸ್ತಕವಾಗಿ ಆಯ್ಕೆಯಾಗಿತ್ತು.   

ಜಾನಪದ ವಿಮರ್ಶೆಯ ಕೃತಿ ‘ಜನಾಂಗದ ಜೀವಾಳ’ ಪುಸ್ತಕವನ್ನೂ ಮಿಂಚಿನ ಬಳ್ಳಿ ಪ್ರಕಾಶನವು ೧೯೫೭ರಲ್ಲಿ ಪ್ರಕಟಿಸಿತು. ಇದರಲ್ಲಿ ಜನಪದ ಕಥೆಗಳು, ಗಾದೆಗಳು, ಒಗಟುಗಳು, ಬಯಲಾಟದ ಹಾಡುಗಳು, ವಾಕ್ ಸಂಪ್ರದಾಯಗಳು, ಪಡೆನುಡಿಗಳು- ಇವೆಲ್ಲದರ ರಸಭರಿತ ವಿಶ್ಲೇಷಣೆಯ ವಿಶಿಷ್ಟ ಕೃತಿ.

ಜಾನಪದ ಕ್ಷೇತ್ರದಷ್ಟೇ ಇವರಿಗೆ ಪ್ರಿಯವಾಗಿದ್ದ ಮತ್ತೊಂದು ಕ್ಷೇತ್ರವೆಂದರೆ ಕಾವ್ಯಪ್ರಕಾರ. ೧೯೩೬ರಲ್ಲಿಯೇ ರಾಮನರೇಶ್‌ ತ್ರಿಪಾಠಿಯವರು ಹಿಂದಿಯಲ್ಲಿ ಬರೆದ ‘ಮಿಲನ’ ಖಂಡ ಕಾವ್ಯವನ್ನು ಕನ್ನಡಕ್ಕೆ ಅನುವಾದಿಸಿದರು. ನಂತರ ಇವರು ಹೊರತಂದ ಕವನ ಸಂಕಲನಗಳೆಂದರೆ ಮುಗಿಲಜೇನು, ಪೂಜಾ, ಮಾತೃವಾಣಿ, ನಮಸ್ಕಾರ, ಶ್ರುತಾಶ್ರುತ, ಸಾಯ್‌ಕೊಲ್‌ ಮುಂತಾದವುಗಳು.

ಜಾನಪದ, ಕಾವ್ಯದಷ್ಟೇ ಉತ್ಕೃಷ್ಟ ಕೃತಿಗಳನ್ನು ನೀಡಿದ ಮತ್ತೊಂದು ಕ್ಷೇತ್ರವೆಂದರೆ ಪ್ರಬಂಧಪ್ರಕಾರ. ಭಾರತದ ಇತಿಹಾಸ, ಸಂಸ್ಕೃತಿಯ ಚಿತ್ರಣ, ವೈಚಾರಿಕತೆ ಜೀವನದೃಷ್ಟಿ, ಇವುಗಳನ್ನೊಳಗೊಂಡಂತೆ ಪ್ರಕಟಿಸಿದ ಪ್ರಬಂಧ ಸಂಕಲನಗಳೆಂದರೆ ‘ಸ್ವರ್ಗದೋಲೆಗಳು’. ‘ಭಾರತಕ್ಕೆ ಸ್ವರಾಜ್ಯ ದೊರೆತುದೇಕೆ?’, ‘ಬಾಳಬಟ್ಟೆ’, ‘ತಲೆಮಾರಿನ ಹಿಂದೆ’, ‘ಬದುಕಿನ ನೆಲೆ’, ‘ನೂರುಗಡಿಗೆ ಒಂದು ಬಡಿಗೆ’ ಮುಂತಾದ ೧೫ ಪ್ರಬಂಧ ಕೃತಿಗಳು.

ಸಿಂಪಿ ಲಿಂಗಣ್ಣ

ಸಿಂಪಿ ಲಿಂಗಣ್ಣನವರು ‘ಜಾನಪದ ರತ್ನ’ರೆಂದು ಖ್ಯಾತರಾದವರು. ಅವರು ಜನಿಸಿದ್ದು ಫೆಬ್ರವರಿ 10, 1905ರಂದು ಬಿಜಾಪುರ ಜಿಲ್ಲೆಯ ಚಡಚಣ ಎಂಬ ಗ್ರಾಮದಲ್ಲಿ. ತಂದೆ ಶಿವಯೋಗಿಗಳು ಬಯಲಾಟದ ಪಾತ್ರದಲ್ಲಿ ಪ್ರಸಿದ್ಧರು. ಅಣ್ಣ ಈರಪ್ಪ ಕರಡಿ ಮಜಲು ಬಾರಿಸುವುದರಲ್ಲಿ ನಿಸ್ಸೀಮ. ಹೀಗೆ ಕುಟುಂಬದಲ್ಲಿ ಜಾನಪದದ ಆಸಕ್ತಿ ಮೂಡಿಸುವ ಎಳೆಗಳು ಜೊತೆಗೂಡಿದ್ದವು. ಅಪ್ಪ ಅಮ್ಮ ಇಬ್ಬರೂ ಲಿಂಗಣ್ಣ ಐದು ವರ್ಷದವರಿರುವಾಗಲೇ ನಿಧನರಾಗಿ ಅಣ್ಣ ಸೀರೆ ನೇಯ್ದು ಮಾರುವ ಕೆಲಸ ಕೈಗೊಂಡರೆ, ಲಿಂಗಣ್ಣ ಬಿಡುವಿನ ವೇಳೆಯಲ್ಲಿ ಉಪ್ಪು ಮಾರಿ ಸ್ವತಃ ಅಡುಗೆ ಮಾಡಿಕೊಂಡು ಜೀವನ ಸಾಗಿಸುವ ಬದುಕು ಮೂಡಿತ್ತು. ನಂತರ ಅಣ್ಣ ಈರಣ್ಣ, ‘ಗುರಮ್ಮ’ ಎಂಬಾಕೆಯನ್ನು ಮದುವೆಯಾದಾಗ ಲಿಂಗಣ್ಣನವರಿಗೆ ಅಡುಗೆ ತಾಪತ್ರಯದಿಂದ ವಿಮುಕ್ತಿ ದೊರೆಯಿತು. ಈ ಅತ್ತಿಗೆ ‘ಗುರಮ್ಮ’ ಹೇಳುತ್ತಿದ್ದ ಗರತಿ ಹಾಡುಗಳು ಲಿಂಗಣ್ಣನವರಿಗೆ ಜನಪದ ಸಾಹಿತ್ಯದ ಹುಚ್ಚು ಹಿಡಿಸಿತು. ಸಿಂಪಿ ಲಿಂಗಣ್ಣನವರ ಮಕ್ಕಳಲ್ಲಿ ವೀರೇಂದ್ರ, ಸಿಂಪಿ, ಈಶ್ವರ ಸಿಂಪಿ ಹಾಗೂ ಭುವನೇಶ್ವರಿ ಅವರು ಕೂಡಾ ಸಾಹಿತ್ಯಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ.

ಚಿಕ್ಕಂದಿನಲ್ಲೇ ಲಿಂಗಣ್ಣನವರ ಮನೆಯಲ್ಲಿ ಬಾಡಿಗೆಗಿದ್ದ ಶ್ರೀಮಧುರಚೆನ್ನರು ಲಿಂಗಣ್ಣನವರಿಗೆ ಪರಮಾಪ್ತರಾದರು. 1922ರಲ್ಲಿ ಲಿಂಗಣ್ಣ ಮುಲ್ಕೀ ಪರೀಕ್ಷೆಯಲ್ಲಿ ಜಿಲ್ಲೆಗೇ ಪ್ರಥಮ ಸ್ಥಾನ ಪಡೆದು ಪಾಸಾದರೂ ಮುಂದೆ ಓದಲು ಹಣವಿಲ್ಲದೆ, ಅಣ್ಣನ ಜೊತೆಯಲ್ಲಿ ಸೀರೆ ನೇಯುವ ಕಾಯಕಕ್ಕೆ ತೊಡಗಿದರು. ಓದುವ ಹವ್ಯಾಸ ಬತ್ತಲಿಲ್ಲ. ಗೆಳೆಯರ ಜೊತೆ ಸೇರಿ ‘ವಾಗ್ವಿಲಾಸ’ ಎಂಬ ವಾಚನಾಲಯ ತೆರೆದರು. ಊರಿನ ಜನರಿಂದ 800 ಗ್ರಂಥಗಳನ್ನು ಸಂಗ್ರಹಿಸಿ ಜನರಿಗೆ ಓದುವ ಹವ್ಯಾಸ ಹಚ್ಚಿದರು. ಹಲಸಂಗಿ ಮಲ್ಲಪ್ಪ ಮತ್ತು ಸಿಂಪಿ ಲಿಂಗಣ್ಣ ಜೊತೆಗೂಡಿ ‘ಹಲಸಂಗಿ’ ಗೆಳೆಯರ ಬಳಗ ನಿರ್ಮಿಸಿದರು. ಮುಂದೆ ಸಿಂಪಿ ಲಿಂಗಣ್ಣನವರು ಪ್ರಾಥಮಿಕ ಶಿಕ್ಷಕರ ತರಬೇತಿ ಪಡೆಯಲು ಧಾರವಾಡಕ್ಕೆ ಹೋದಾಗ ಶಂಭಾ, ಬೇಂದ್ರೆ, ಆಲೂರರ ಪರಿಚಯ ಮಾಡಿಕೊಂಡರು. 

ಸಿಂಪಿ ಲಿಂಗಣ್ಣನವರು ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಸುಮಾರು 35 ವರ್ಷ ಸೇವೆ ಸಲ್ಲಿಸಿದರು. ಸದಾ ಚಿಂತನಶೀಲರು, ಕ್ರಿಯಾಶೀಲ ವ್ಯಕ್ತಿತ್ವ. ವೈಚಾರಿಕ ಮನೋಧರ್ಮದವರು. ಆಧುನಿಕ ಸೌಲಭ್ಯಗಳಿಲ್ಲದ ಹಳ್ಳಿಗಳಲ್ಲಿ ಹಳ್ಳಿಗರಾಗಿ ಜನರೊಂದಿಗೆ ಹೊಂದಿಕೊಂಡು ಮಕ್ಕಳಿಗೆ ಜ್ಞಾನ ನೀಡಿದರು. ಶಾಲೆಗಲ್ಲಿ ನಾಡಹಬ್ಬ, ಗಣೇಶೋತ್ಸವಗಳನ್ನು ಆಚರಿಸಿ ಪ್ರಸಿದ್ಧ ಸಾಹಿತಿಗಳಿಂದ ಭಾಷಣ ಮಾಡಿಸಿ ಜನರಲ್ಲಿ ರಾಷ್ಟ್ರೀಯ ಪ್ರಜ್ಞೆಯನ್ನು ಮೂಡಿಸಿದರು. ‘ಕಮತಿಗ’ ವಾರಪತ್ರಿಕೆ ಹೊರಡಿಸಿ ಹೊಸ ಬರಹಗಾರರಿಗೆ ಪ್ರೋತ್ಸಾಹ ನೀಡಿದರು. ರಾಷ್ತ್ರೀಯ ಲಾವಣಿ ರಚಿಸಿ, ಹಾಡಿಸಿ, ಸ್ವಾತಂತ್ರ ಚಳುವಳಿಗೆ ಕುಮ್ಮಕ್ಕು ನೀಡಿದರೆಂದು ಬೇರೆ ಊರಿಗೆ ವರ್ಗವಾದರು. ಅಸ್ಪೃಶ್ಯತೆಯನ್ನು ಎತ್ತಿ ತೋರಿಸುವ ‘ಮರೆ ಮುಚ್ಚಕ’ ನಾಟಕ ರಚಿಸಿ, ಆಡಿಸಿ, ಸಮಾಜದ ಬಹಿಷ್ಕಾರಕ್ಕೆ ಒಳಗಾದರು. ಯಾವ ಊರಿಗೆ ವರ್ಗವಾಗಿ ಹೋದರೂ ಸಿಂಪಿ ಲಿಂಗಣ್ಣನವರು ತಮ್ಮ ಕೆಲಸವನ್ನು ನಿಲ್ಲಿಸಿದವರಲ್ಲ. ಓದುವುದು ಓದಿಸುವುದು, ಬರೆಯುವುದು, ಆಡಿಸುವುದು, ಅವರ ನಿತ್ಯಕರ್ಮದಲ್ಲಿ ಒಂದಾಗಿತ್ತು. ಶುಭ್ರ ಖಾದಿಧೋತರ, ಖಾದಿಶರ್ಟು, ಮೇಲೊಂದು ಕೋಟು, ತಲೆಯಮೇಲೆ ಗಾಂಧೀ ಟೋಪಿ ಇವು ಅವರ ಪರಿಶುದ್ಧಜೀವನವನ್ನೇ ಪ್ರತಿಬಿಂಬಿಸುತ್ತಿದ್ದವು. 

ಬಾಲ್ಯದ ಗೆಳೆಯರಾದ ಶ್ರೀಮಧುರಚೆನ್ನರ ಒಡನಾಟದಿಂದ ಸಿಂಪಿ ಲಿಂಗಣ್ಣನವರಲ್ಲಿಯೂ ಅಧ್ಯಾತ್ಮದ ಒಲವು ಮೂಡಿತು. ಆಧ್ಯಾತ್ಮದಲ್ಲಿ ಸಿಂಪಿಯವರು ತಮ್ಮ ಒಡನಾಡಿ ಗೆಳೆಯರಾದ ಶ್ರೀ ಮಧುರ ಚೆನ್ನರಿಂದ ಪ್ರೇರಿತರಾಗಿ ಶ್ರೀ ಅರವಿಂದರ ಆಶ್ರಮಕ್ಕೆ ಸಂದರ್ಶನವಿತ್ತು ‘ಪೂರ್ಣಯೋಗ’ ಪಥದಲ್ಲಿ ಸಾಮರಸ್ಯ ಪಡೆದರು. ಶ್ರೀ ಮಾತ ಅರವಿಂದರ ಪರಮಭಕ್ತರಾಗಿ ದಿವ್ಯಜೀವನ ಸಾಗಿಸಿದರು. 

ಚಿಕ್ಕಂದಿನಿಂದಲೇ ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಂಡ ಲಿಂಗಣ್ಣನವರು 1922ರಲ್ಲಿ ‘ಸಾವಿನ ಸಮಸ್ಯೆ’ ಎಂಬ ಏಕಾಂಕ ನಾಟಕ ಬರೆದು ಸಾಹಿತ್ಯಕ್ಷೇತ್ರವನ್ನು ಪ್ರವೇಶಿಸಿದರು. ಜನಪದ ಸಾಹಿತ್ಯ, ಕಾವ್ಯ, ಪ್ರಬಂಧಗಳು, ಜೀವನ ಚರಿತ್ರೆ, ಸಣ್ಣಕಥೆ, ಕಾದಂಬರಿ, ಏಕಾಂಕ ನಾಟಕ, ಮಕ್ಕಳ ಹಾಗೂ ನವ್ಯ ಸಾಕ್ಷರ ಸಾಹಿತ್ಯ, ಅನುವಾದಿತ ಸಾಹಿತ್ಯ, ಅರವಿಂದರ ಸಾಹಿತ್ಯ ಹೀಗೆ ವಿಭಿನ್ನ ನೆಲೆಗಳ ಸಾಹಿತ್ಯದಲ್ಲಿ ಒಂದು ನೂರಕ್ಕೂ ಹೆಚ್ಚಿನ ಕೃತಿಗಳನ್ನು ಲಿಂಗಣ್ಣನವರು ನೀಡಿದ್ದಾರೆ. ಸಿಂಪಿಯವರು ಹಳ್ಳಿಯ ಬಾಳಿನ ಮುತ್ತುರತ್ನಗಳಿಂದ ಜನಪದ ಸಾಹಿತ್ಯದ ಹಾಡು, ಕಥೆ, ಗಾದೆ, ಒಗಟು, ನುಡಿಗಟ್ಟುಗಳನ್ನೂ ಅಪಾರವಾಗಿ ಸಂಗ್ರಹಿಸಿ, ಸಂಪಾದಿಸಿ ಕೊಟ್ಟುದಲ್ಲದೆ, ಆಯಾ ಸಂಗ್ರಹಗಳಿಗೆ ವಿಚಾರಾತ್ಮಕ, ವಿಶ್ಲೇಷಣಾತ್ಮಕ ಪ್ರಸ್ತಾವನೆಗಳನ್ನು ಬರೆದಿರುವರಲ್ಲದೆ ಅನೇಕ ಲೇಖನಗಳನ್ನೂ ಪ್ರಕಟಿಸಿದ್ದಾರೆ. ಅವರು ಬರೆದ ಗದ್ಯ ಕೃತಿಗಳು ಆಧುನಿಕ ಗದ್ಯ ಸಾಹಿತ್ಯದಲ್ಲಿ ಮಹತ್ವದ್ದಾಗಿವೆ.

ಲಿಂಗಣ್ಣನವರ ಅತ್ತಿಗೆ ಗುರುಬಾಯಿ ಜನಪದ ತವನಿಧಿ ಆಗಿದ್ದರು. ಅವರು ಹೇಳುವ 
“ಕರಿಯಂಗಿ ಕಸೂತಿ 
ತಲೆ ತುಂಬಾ ಜಾವುಳ 
ಅಂಗಳದಾಗ ನವಿಲಾಟ 
ಲಿಂಗಯ್ಯನಾಟ ವಿಪರೀತ” 

ಎನ್ನುವ ಹಾಡು ಅವರಲ್ಲಿ ಚಿಕ್ಕಂದಿನಿಂದಲೇ ಜನಪದ ಸಾಹಿತ್ಯದ ಬೀಜ ನೆಟ್ಟಿತು. ಮನೆಯ ತಂದೆ, ತಾಯಿ, ಅಣ್ಣ, ಅತ್ತಿಗೆ ಅವರ ಜನಪದ ಪ್ರತಿಭೆಯ ಜೊತೆಗೆ ಊರಿನಲ್ಲಿ ನಡೆಯುತ್ತಿದ್ದ ಜನಪದ, ಕೋಲಾಟದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಲಿಂಗಣ್ಣನವರ ಮೇಲೆ ಸಾಕಷ್ಟು ಪ್ರಭಾವ ಬೀರಿತ್ತು. ಹಲಸಂಗಿ ಗೆಳೆಯರಾದ ಶ್ರೀ ಮಧುರಚೆನ್ನ, ಕಾಪಸೆ ಸೀನಪ್ಪ, ಪಿ. ಧೂಲಾ ಅವರೊಂದಿಗೆ ಸೇರಿ ರಚಿಸಿದ ಜನಪದ ಸಾಹಿತ್ಯದ ಪ್ರಮುಖ ಮಾರ್ಗದರ್ಶಿ ಸಂಗ್ರಹಗಳಾದ ‘ಗರತಿ ಹಾಡು’, ‘ಜೀವನ ಸಂಗೀತ’, “ಮಲ್ಲಿಗೆ ದಂಡೆ’, ಮುಂತಾದ ಗ್ರಂಥಗಳು ಅವರಿಗೆ ಜನಪ್ರಿಯತೆಯನ್ನು ತಂದುದಲ್ಲದೆ ನಾಡಿನ ವಿದ್ವಾಂಸರಿಂದ ಪ್ರಶಂಸೆಗೆ ಪಾತ್ರವಾಯಿತು. ‘ಗರತಿಯ ಹಾಡು’, ‘ಜೀವನ ಸಂಗೀತ’ ಸಂಗ್ರಹಗಳು ಇಂದಿಗೂ ಕಾವ್ಯದ ದೃಷ್ಟಿಯಿಂದ ಅದ್ವಿತೀಯ ಸಂಗ್ರಹಗಳೆಂದು ಆಧುನಿಕ ಸಾಹಿತ್ಯದ ಪ್ರಸಿದ್ಧ ವಿಮರ್ಶಕರಾದ ಗಿರಡ್ಡಿ ಗೋವಿಂದರಾಜರು ಅಭಿಪ್ರಾಯ ಪಟ್ಟಿದ್ದಾರೆ.ಲಿಂಗಣ್ಣನವರ ಅತ್ತಿಗೆ ಗುರುಬಾಯಿ ಜನಪದ ತವನಿಧಿ ಆಗಿದ್ದರು. ಅವರು ಹೇಳುವ
“ಕರಿಯಂಗಿ ಕಸೂತಿ
ತಲೆ ತುಂಬಾ ಜಾವುಳ
ಅಂಗಳದಾಗ ನವಿಲಾಟ
ಲಿಂಗಯ್ಯನಾಟ ವಿಪರೀತ”

ಎನ್ನುವ ಹಾಡು ಅವರಲ್ಲಿ ಚಿಕ್ಕಂದಿನಿಂದಲೇ ಜನಪದ ಸಾಹಿತ್ಯದ ಬೀಜ ನೆಟ್ಟಿತು. ಮನೆಯ ತಂದೆ, ತಾಯಿ, ಅಣ್ಣ, ಅತ್ತಿಗೆ ಅವರ ಜನಪದ ಪ್ರತಿಭೆಯ ಜೊತೆಗೆ ಊರಿನಲ್ಲಿ ನಡೆಯುತ್ತಿದ್ದ ಜನಪದ, ಕೋಲಾಟದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಲಿಂಗಣ್ಣನವರ ಮೇಲೆ ಸಾಕಷ್ಟು ಪ್ರಭಾವ ಬೀರಿತ್ತು. ಹಲಸಂಗಿ ಗೆಳೆಯರಾದ ಶ್ರೀ ಮಧುರಚೆನ್ನ, ಕಾಪಸೆ ಸೀನಪ್ಪ, ಪಿ. ಧೂಲಾ ಅವರೊಂದಿಗೆ ಸೇರಿ ರಚಿಸಿದ ಜನಪದ ಸಾಹಿತ್ಯದ ಪ್ರಮುಖ ಮಾರ್ಗದರ್ಶಿ ಸಂಗ್ರಹಗಳಾದ ‘ಗರತಿ ಹಾಡು’, ‘ಜೀವನ ಸಂಗೀತ’, “ಮಲ್ಲಿಗೆ ದಂಡೆ’, ಮುಂತಾದ ಗ್ರಂಥಗಳು ಅವರಿಗೆ ಜನಪ್ರಿಯತೆಯನ್ನು ತಂದುದಲ್ಲದೆ ನಾಡಿನ ವಿದ್ವಾಂಸರಿಂದ ಪ್ರಶಂಸೆಗೆ ಪಾತ್ರವಾಯಿತು. ‘ಗರತಿಯ ಹಾಡು’, ‘ಜೀವನ ಸಂಗೀತ’ ಸಂಗ್ರಹಗಳು ಇಂದಿಗೂ ಕಾವ್ಯದ ದೃಷ್ಟಿಯಿಂದ ಅದ್ವಿತೀಯ ಸಂಗ್ರಹಗಳೆಂದು ಆಧುನಿಕ ಸಾಹಿತ್ಯದ ಪ್ರಸಿದ್ಧ ವಿಮರ್ಶಕರಾದ ಗಿರಡ್ಡಿ ಗೋವಿಂದರಾಜರು ಅಭಿಪ್ರಾಯ ಪಟ್ಟಿದ್ದಾರೆ.

ಸಿಂಪಿ ಲಿಂಗಣ್ಣನವರನ್ನು ಕುರಿತು ಡಾ.ಎಂ.ಎನ್‌. ವಾಲಿಯವರು “ಸಿಂಪಿ ಲಿಂಗಣ್ಣನವರ ಜೀವನ ಸಾಧನೆ” ಕುರಿತ ಮಹಾ ಪ್ರಬಂಧ ಮಂಡಿಸಿ ಕರ್ನಾಟಕ ವಿಶ್ವವಿದ್ಯಾಲಯದಿಂದ  ಪಿಎಚ್.ಡಿ. ಪದವಿ ಪಡೆದರು.

೧೯೪೪ರಲ್ಲಿ ರಬ ಕವಿಯಲ್ಲಿ ನಡೆದ ೨೮ ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಜಾನಪದ ಗೋಷ್ಠಿಯ ಅಧ್ಯಕ್ಷತೆ, (ಸಮ್ಮೇಳನದ ಅಧ್ಯಕ್ಷರು – ಎಸ್‌.ಎಸ್‌. ಬಸವನಾಳರು). ೧೯೬೯ರಲ್ಲಿ ನಡೆದ ಅಖಿಲ ಕರ್ನಾಟಕ ೨ ನೆಯ ಜಾನಪದ ಸಮ್ಮೇಳನದ ಅಧ್ಯಕ್ಷತೆ, ೧೯೯೨ರಲ್ಲಿ ಕೊಪ್ಪಳದಲ್ಲಿ ನಡೆದ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಹೀಗೆ ಇನ್ನೂ ಹಲವಾರು ಸಮ್ಮೇಳನಗಳ ಅಧ್ಯಕ್ಷತೆ ವಹಿಸಿದ್ದರು. 

ಅಲ್ಲದೆ ಅವರಿಗೆ ಹಲವಾರು ಬಹುಮಾನಗಳು ಸಂದಿವೆ. ೧೯೫೬ರಲ್ಲಿ ‘ಸ್ವರ್ಗದೋಲೆಗಳು’ ಕೃತಿಗೆ ಮುಂಬೈ ಸರಕಾರದ ಬಹುಮಾನ, ೧೯೫೯ರಲ್ಲಿ ‘ಗರತಿಯ ಬಾಳು’ ಕೃತಿಗೆ ಮೈಸೂರು ಸರಕಾರದ ಬಹುಮಾನ, ೧೯೬೦ರಲ್ಲಿ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದರಿಂದ ‘ಆದರ್ಶ ಶಿಕ್ಷಕ’ ಪ್ರಶಸ್ತಿ, ೧೯೬೦ರಲ್ಲಿ ‘ಜನಾಂಗದ ಜೀವಾಳ’ ಕೃತಿಗೆ ಕರ್ನಾಟಕ ರಾಜ್ಯ ಸರಕಾರದ ಬಹುಮಾನ, ೧೯೬೮ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿ ವಿಶೇಷ ಪ್ರಶಸ್ತಿ ಮತ್ತು ಬಹುಮಾನ,೧೯೯೦ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಗೌರವ ಸದಸ್ಯತ್ವ ಮತ್ತು ರಾಜ್ಯ ಸರಕಾರದ ಜಾನಪದ ಸೇವೆಗಾಗಿ ರಾಜ್ಯ ಪ್ರಶಸ್ತಿಗಳ ಜೊತೆಗೆ ೧೯೮೯ರಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‌ ದೊರೆತವು.

ಹೀಗೆ ಸಾಹಿತ್ಯದ ಹಲವಾರು ಕ್ಷೇತ್ರಗಳಲ್ಲಿ ದುಡಿದ ಸಿಂಪಿ ಲಿಂಗಣ್ಣನವರು ನಿಧನರಾದದ್ದು ೧೯೯೩ ರ ಮೇ ೫ ರಂದು.
ಸಿಂಪಿ ಲಿಂಗಣ್ಣನವರ ಹೆಸರನ್ನು ಚಿರಸ್ಥಾಯಿಗೊಳಿಸಲು ಕುಟುಂಬದ ಸದಸ್ಯರು ಪ್ರಾರಂಭಿಸಿರುವ ‘ಜಾನಪದ ಅಧ್ಯಯನ ವೇದಿಕೆ’ಯಿಂದ ಪ್ರತಿವರ್ಷ ನೀಡುತ್ತಿರುವ ‘ಸಿಂಪಿ ಲಿಂಗಣ್ಣ ಪ್ರಶಸ್ತಿ’.

ಸಿಂಪಿ ಲಿಂಗಣ್ಣನವರ ಮಕ್ಕಳಲ್ಲಿ ವೀರೇಂದ್ರ, ಸಿಂಪಿ, ಈಶ್ವರ ಸಿಂಪಿ ಹಾಗೂ ಭುವನೇಶ್ವರಿ ಅವರು ಕೂಡಾ ಸಾಹಿತ್ಯಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ.



                                        ಆಧಾರ : ನೆನಪಿನಂಗಳ ಹಾಗು ಕಣಜ

Post a Comment

0 Comments