Ticker

6/recent/ticker-posts

ಏಳು ಸ್ವರವು ಸೇರಿ ಸಂಗೀತವಾಯಿತೂ ಸಾಹಿತ್ಯ | ಬೇಡಿ ಬಂದವಳು

ಏಳು ಸ್ವರವು ಸೇರಿ ಸಂಗೀತವಾಯಿತೂ ಸಾಹಿತ್ಯ | ಬೇಡಿ ಬಂದವಳು [Elu Swaravu Seri Lyrics in Kannada]

ಏಳು ಸ್ವರವು ಸೇರಿ ಸಂಗೀತವಾಯಿತೂ ಸಾಹಿತ್ಯ | ಬೇಡಿ ಬಂದವಳು: ಏಳು ಸ್ವರವು ಸೇರಿ ಸಂಗೀತವಾಯಿತೂ, 1968 ರ 'ಬೇಡಿ ಬಂದವಳು' ಚಿತ್ರದ ಸೂಪರ್ ಹಿಟ್ ಕನ್ನಡ ಹಾಡು. ಈ ಚಿತ್ರವನ್ನು ಸಿ. ಶ್ರೀನಿವಾಸನ್ ನಿರ್ದೇಶಿಸಿದ್ದಾರೆ ಮತ್ತು ಶ್ರೀಮತಿ ನೀಲಾದೇವಿ ಅವರು ಚಾರ್ಲೊಟ್ ಬ್ರಾಂಟೆಂಡ್ ಅವರ 'ಜೇನ್ ಐರ್' ಕಾದಂಬರಿಯನ್ನು ಆಧರಿಸಿ ಬರೆದಿದ್ದಾರೆ. ಶ್ರೀನಿವಾಸ್ ಆರ್ಟ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಟಿ.ಎನ್.ಶ್ರೀನಿವಾಸನ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಬೇಡಿ ಬಂದವಳು [1968] ಕನ್ನಡ ಚಲನಚಿತ್ರದಲ್ಲಿ ಕಲ್ಯಾಣ್ ಕುಮಾರ್, ಚಂದ್ರಕಲಾ, ದ್ವಾರಕೀಶ್, ರಾಮೆನ್ ರಾವ್, ರಾಜಾರಾಮ್ ಗಿರಿಯಾನ್, ಶ್ಯಾಮಸುಂದರ್, ಸಹ್ಯಾದ್ರಿ, ಮಾಸ್ಟರ್ ಗೋಪಾಲ್, ಶ್ರೀರಂಗಮೂರ್ತಿ, ಲಕ್ಷ್ಮಣ್ ರಾವ್, ವೆಂಕಟರಾಮ್, ಶೈಲಶ್ರೀ, ಕಮಲಮ್ಮ, ಮಾಲತಮ್ಮ, ಇಂದ್ರಾಣಿ, ಎ. ಲಲಿತಾ, ರಾಧಾ, ರಾಮಾ , ಕವಿತಾ, ಬೇಬಿ ಸುನಂದಾ, ಬೇಬಿ ರೋಜಾ ರಮಣಿ, ಬೇಬಿ ಪದ್ಮಶ್ರೀ, ಬೇಬಿ ಪ್ರೇಮಾ, ಬೇಬಿ ಜಯಂತಿ, ಬಿ.ಜಯಮ್ಮ, ರಂಗ, ಮತ್ತು ಇತರರು ನಟಿಸಿದ್ದಾರೆ. 

ಏಳು ಸ್ವರವು ಸೇರಿ ಸಂಗೀತವಾಯಿತೂ ಹಾಡಿನ ಸಾಹಿತ್ಯವನ್ನು ಸಾಹಿತಿ ಆರ್.ಎನ್.ಜಯಗೋಪಾಲ್ ಬರೆದಿದ್ದು, ಸಂಗೀತ ನಿರ್ದೇಶಕ ಆರ್.ಸುದರ್ಶನಂ ಹಾಡನ್ನು ರಚಿಸಿದ್ದಾರೆ. ಈ ಹಾಡನ್ನು ಪ್ರಸಿದ್ಧ ಹಿನ್ನೆಲೆ ಗಾಯಕರಾದ ಪಿ. ಸುಶೀಲಾ ಹಾಡಿದ್ದಾರೆ.


ಹಾಡು: ಏಳು ಸ್ವರವು ಸೇರಿ ಸಂಗೀತವಾಯಿತೂ
ಚಿತ್ರ: ಬೇಡಿ ಬಂದವಳು [1968]
ಸಾಹಿತ್ಯ: ಆರ್. ಏನ್. ಜಯಗೋಪಾಲ್.
ಸಂಗೀತ : ಆರ್.  ಸುದರ್ಶನಂ
ಗಾಯಕರು: ಪಿ. ಸುಶೀಲಾ
ತಾರಾಗಣ: ಕಲ್ಯಾಣ್ ಕುಮಾರ್, ಚಂದ್ರಲೇಖಾ

Elu Swaravu Seri Lyrics in Kannada

.ಸ..ರಿ..ಗ..ಮ..ಪ..ದ..ನೀ
ಸ..ನಿ..ದ..ಪ..ಮ..ಗ..ರೀ

ಸ..ರಿ..ಗ..ಮ..ಪ..ದ..ನೀ
ಸ..ನಿ..ದ..ಪ..ಮ..ಗ..ರೀ

ಏಳು ಸ್ವರವು ಸೇರಿ ಸಂಗೀತವಾಯಿತೂ
ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತೂ

ಏಳು ಸ್ವರವು ಸೇರಿ ಸಂಗೀತವಾಯಿತೂ
ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತೂ

ಏಳು ದಿನವು ಸೇರಿ ಒಂದು ವಾರವಾಯಿತೂ
ಏಳು ದಿನವು ಸೇರಿ ಒಂದು ವಾರವಾಯಿತೂ
ಏಳು ತಾರೆ ಸಪ್ತ ಋಷಿಯ ಚಿನ್ಹೆಯಾಯಿತೂ

ಏಳು ಸ್ವರವು ಸೇರಿ ಸಂಗೀತವಾಯಿತೂ
ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತೂ

ಕಡಲಿನಿಂದ ನೀರ ಆವಿ ಮೋಡವಾಯಿತೂ
ಮೋಡ ಗಿರಿಗೆ ಮುತ್ತನಿಡೆ ಮಳೆಯೂ ಆಯಿತೂ
ಕಡಲಿನಿಂದ ನೀರ ಆವಿ ಮೋಡವಾಯಿತೂ
ಮೋಡ ಗಿರಿಗೆ ಮುತ್ತನಿಡೆ ಮಳೆಯೂ ಆಯಿತೂ

ಮಳೆಯೂ ನೆಲಕೆ ಬೀಳಲೂ ಬೆಳೆಯು ಆಯಿತೂ
ಮಳೆಯೂ ನೆಲಕೆ ಬೀಳಲೂ ಬೆಳೆಯು ಆಯಿತೂ
ಬೆಳೆದ ಕಾಳು ನಮಗೆ ತಾನು ಅನ್ನವಾಯಿತೂ
ಬೆಳೆದ ಕಾಳು ನಮಗೆ ತಾನು ಅನ್ನವಾಯಿತೂ

ಏಳು ಸ್ವರವು ಸೇರಿ ಸಂಗೀತವಾಯಿತೂ
ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತೂ

ಬೀಜ ಮೊಳೆತು ಸಸಿಯಾಗೀ ಹೂವು ಬಿಟ್ಟಿತೂ
ಹೂವಿನಿಂದ ಹೂವಿಗೆ ದುಂಬಿ ಹಾರಿತೂ
ಬೀಜ ಮೊಳೆತು ಸಸಿಯಾಗೀ ಹೂವು ಬಿಟ್ಟಿತೂ
ಹೂವಿನಿಂದ ಹೂವಿಗೆ ದುಂಬಿ ಹಾರಿತೂ

ದುಂಬಿಯಾಟ ಹೂವನೂ ಕಾಯಿ ಮಾಡಿತೂ
ದುಂಬಿಯಾಟ ಹೂವನೂ ಕಾಯಿ ಮಾಡಿತೂ
ಕಾಯಿ ಮಾಗಿ ಹಣ್ಣು ಆಗಿ ಬೀಜ ತಂದಿತೂ
ಕಾಯಿ ಮಾಗಿ ಹಣ್ಣು ಆಗಿ ಬೀಜ ತಂದಿತೂ

ಏಳು ಸ್ವರವು ಸೇರಿ ಸಂಗೀತವಾಯಿತೂ
ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತೂ
ಏಳು ಸ್ವರವು ಸೇರಿ ಸಂಗೀತವಾಯಿತೂ
ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತೂ

Post a Comment

0 Comments