ಗಾಳಿ ತಂಗಾಳಿ ಕನ್ನಡ ಮಾತಡೇ ಸಾಹಿತ್ಯ - ರಂಗನಾಯಕ | Gaali Tangaali Kannada Mathade Lyrics in Kannada: ಗಾಳಿ ತಂಗಾಳಿ ಕನ್ನಡ ಮಾತಡೇ ಹಾಡು, 'ರಂಗನಾಯಕ' ಮುಂಬರುವ ಕನ್ನಡ ಚಲನಚಿತ್ರ ದ ಮೊದಲ ಸಿಂಗಲ್ ಆಗಿದೆ.
ಈ ಚಿತ್ರವನ್ನು ಗುರುಪ್ರಸಾದ್ ನಿರ್ದೇಶಿಸಿದ್ದಾರೆ ಮತ್ತು ವಿಖ್ಯಾತ್ ಚಿತ್ರ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಎ ಆರ್ ವಿಖ್ಯಾತ್ ನಿರ್ಮಿಸಿದ್ದಾರೆ. ರಂಗನಾಯಕ ಕನ್ನಡ ಚಿತ್ರದಲ್ಲಿ ಜಗ್ಗೇಶ್, ರಚಿತಾ ಮಹಾಲಕ್ಷ್ಮಿ ಮತ್ತು ಇತರರು ನಟಿಸಿದ್ದಾರೆ.
ಗಾಳಿ ತಂಗಾಳಿ ಕನ್ನಡ ಮಾತಡೇ ಹಾಡಿನ ಸಾಹಿತ್ಯವನ್ನು ಶಾರದಸುತ ಬರೆದಿದ್ದು, ಸಂಗೀತ ನಿರ್ದೇಶಕ ಜೆ. ಅನೂಪ್ ಸೀಲಿನ್ ಹಾಡನ್ನು ರಚಿಸಿದ್ದಾರೆ. ಈ ಹಾಡನ್ನು ಜೆ. ಅನೂಪ್ ಸೀಲಿನ್ ಮತ್ತು ಮುನಿರಾಜು ಹಾಡಿದ್ದಾರೆ.
ಹಾಡು: ಗಾಳಿ ತಂಗಾಳಿ ಕನ್ನಡ ಮಾತಡೇ ಸಾಹಿತ್ಯ
ಸಂಗೀತ: ಜೆ. ಅನೂಪ್ ಸೀಲಿನ್
ಸಾಹಿತ್ಯ: ಶಾರದಸುತ
ಗಾಯಕರು: ಜೆ. ಅನೂಪ್ ಸೀಲಿನ್, ಮುನಿರಾಜು
ಲೇಬಲ್: ವಿಖ್ಯಾತ್ ಸ್ಟುಡಿಯೋಸ್
Gaali Tangaali Kannada Mathade Lyrics in Kannada
ಕರ್ನಾಟಕ
ಕರ್ನಾಟಕ
ಕರ್ನಾಟಕ ಸ್ವಾಮಿ
ಮೈ ಜುಮ್ಮನುತ್ತೆ ನೋಡಿ
ಎನ್ ಕರ್ನಾಟಕ ಅಂದ್ರೆ
ಕರ್ಣ ಅಂದ್ರೆ ಏನು?
ಕಿವಿ
ಅಟಕ್ ಅಂದ್ರೆ ಅಪ್ಪಲಿಸೋದು ಅಟ್ಕಾಯಿಸೋದು ಅಂತಾ
ಕರ್ಣಕ್ಕೆ ಅಂದ್ರೆ ಕಿವಿಗೆ
ಅಪ್ಪಲಿಸಿದಂಗೆ, ಬೀಳ್ತಿದ್ದಂಗೆ
ಅರ್ಥ ಆಗೋ ಭಾಷೆ ಕನ್ನಡ
ಅಂತ ಕನ್ನಡವನ್ನ ಆರಾಧಿಸೋರು ಇರೋ ಅಂತ
ಜಾಗವೇ ನಮ್ಮ ಕರ್ನಾಟಕ ಸ್ವಾಮಿ
ಇನ್ಯಾವ್ ನಾಟಕ ಬೇಕು ನಮ್ಗೆ
ಕರ್ಣಾಟಕವೇ ದೊಡ್ದು
ಡೆಲ್ಲಿ ವರ್ಗು ಕೇಳ್ಸೋ ಹಂಗೆ ಕೂಗ್ತೀನಿ
ಕನ್ನಡದ ಬೀಜಾಕ್ಷರ
ಆ ದೇವ ಕೂಡ ಹಾಕುತಾನೆ
ಕನ್ನಡದಲೇ ಹಸ್ತಾಕ್ಷರ..
ಶಿವನೇ ಪರಮಾತ್ಮ
ಶಿವನೇ ಪುಣೀತ
ಶಿವನೇ ಪರಮಾತ್ಮ
ಶಿವನೇ ಪುಣೀತ
ಶಿವನೇ ಪರಮಾತ್ಮ
ಕನ್ನಡದ ದೈವ ಮೈ
ಕನ್ನಡದ ದೈವ ಮೈ
ಕನ್ನಡದ ದೈವ ಮೈ
ಕನ್ನಡದ ದೈವಮಯಮ್
ಕನ್ನಡ ಮಾತಡೇ
ನೀರೇ ಝರಿ ನೀರೇ
ಸಿರಿಗನ್ನಡದಲಿ ಹಾಡೇ
ಕನ್ನಡ ಜರಿಯೋ ನಾಲಿಗೆಗೆ ಶಾಪ ಹಾಕ
ಕನ್ನಡ ಹಾಡೊ ಬಾಯಿಗೆ ಸಕ್ಕರೆ ಪಾಕ
ಕ ಖ ಗ ಘ ಙ
ಶ್ರುತಿ ಶ್ರುತಿ
ಕನ್ನಡ ಮಾತಡೇ
ನೀರೇ ಝರಿ ನೀರೇ
ಸಿರಿಗನ್ನಡದಲಿ ಹಾಡೇ..
ಕನ್ನಡದ ಮೇಳ
ಕನ್ನಡಿಗನ ಕೆಣಕಿದರೆ
ನೀನು ಮುಠ್ಠಾಳ
ಅಂತಾನೆ ವಾಟಾಳ
ನಮ್ಮವ್ವ ಕನ್ನಡತಿ
ಕರುಣಾಡ ಮನೆಯೊಡತಿ
ಮನೆ ದೇವ್ರು ಭುವನೇಶ್ವರಿ
ಮಹಾ ತಾಯಿಗೆ ಜೈ..
ತ ಥ ದ ಧ ನ
ಕನ್ನಡ ಮಾತಡೇ
ನೀರೇ ಝರಿ ನೀರೇ
ಸಿರಿಗನ್ನಡದಲಿ ಹಾಡೇ..
ಕನ್ನಡಿಗರ ಕೆಣಕಿದರೆ ಕಲಿತೀರ್ ಪಾಟ
ಬಿತ್ತು ಬಗನಿ ಗೂಟ
ಯುದ್ಧಕ್ಕೂ ಸೈ ಸೈ ಸೈ
ಸ್ನೇಹಕ್ಕೂ ಸೈ ಸೈ ಸೈ
ಬೇಲೂರು ಹಳೆಬೀಡು
ಕಲೆ ನಾಡಿಗೆ ಜೈ..
ಟ ಠ ಡ ಢ
ಟ ಠ ಡ ಢ ಣ
ಕಸ್ತೂರಿಯು ಅಣ್ಣೋ ..
ಎ ಏ ಐ ಒ ಓ ಔ ಅಂ ಅಃ
ಕ ಖ ಗ ಘ ಙ
ಚ ಛ ಜ ಝ ಞ
ಟ ಠ ಡ ಢ ಣ
ತ ಥ ದ ಧ ನ
ಪ ಫ ಬ ಭ ಮ..
ಯ ರ ಲ ವ ಶ ಸ ಹ ಳ..
ಕನ್ನಡ ದ್ವೇಷಿಗೆ ಮನೆ ಹಾಳ..
0 Comments
Comment is awaiting for approval