Ticker

6/recent/ticker-posts

ಬಡವನಾದರೆ ಏನು ಪ್ರಿಯೆ | ಕನ್ನಡ ಭಾವಗೀತೆ

ಬಡವನಾದರೆ ಏನು ಪ್ರಿಯೆ | ಕನ್ನಡ ಭಾವಗೀತೆ [Badavanadare Enu Priye Lyrics in Kannada]: ಬಡವನಾದರೆ ಏನು ಪ್ರಿಯೆ ಕನ್ನಡದ ಪ್ರಸಿದ್ಧ ಭಾವಗೀತೆ. ಈ ಭಾವಗೀತೆ ಯ ವಿಭಿನ್ನ ಆವೃತ್ತಿಯನ್ನು ವಿವಿಧ ಕಲಾವಿದರು ರಚಿಸಿದ್ದಾರೆ. 

ಹೆಸರಾಂತ ಸಂಯೋಜಕ ಮತ್ತು ಗಾಯಕ ಸಿ. ಅಶ್ವಥ್ ಅವರು ಈ ಹಾಡಿನ ತಮ್ಮದೇ ಆದ ಆವೃತ್ತಿಯನ್ನು ರಚಿಸಿದ್ದಾರೆ. ಈ ಹಾಡನ್ನು ಬರೆದವರು ಸತ್ಯಾನಂದ ಪಾತ್ರೋಟ ಹಾಗು ಹಾಡಿರುವವರು ರಾಜು ಅನಂತಸ್ವಾಮಿ. 

ಹಾಡು: ಬಡವನಾದರೆ ಏನು ಪ್ರಿಯೆ

ಪ್ರಕಾರ: ಭಾವಗೀತೆ 
ಭಾಷೆ: ಕನ್ನಡ
ಸಂಗೀತ:  ಸಿ. ಅಶ್ವಥ್
ಸಾಹಿತ್ಯ: ಸತ್ಯಾನಂದ ಪಾತ್ರೋಟ
ಗಾಯನ:  ರಾಜು ಅನಂತಸ್ವಾಮಿ 


ಬಡವನಾದರೆ ಏನು ಪ್ರಿಯೆ | ಕನ್ನಡ ಭಾವಗೀತೆ

ಬಡವನಾದರೆ ಏನು ಪ್ರಿಯೆ 
ಕೈ ತುತ್ತು ತಿನಿಸುವೆ
ಬಡವನಾದರೆ ಏನು ಪ್ರಿಯೆ 
ಕೈ ತುತ್ತು ತಿನಿಸುವೆ
ಎದೆಯ ತುಂಬ ಒತ್ತಿಕೊಂಡು 
ಮುತ್ತು ಮಳೆಯ ಸುರಿಸುವೆ
ಎದೆಯ ತುಂಬ ಒತ್ತಿಕೊಂಡು 
ಮುತ್ತು ಮಳೆಯ ಸುರಿಸುವೆ

ಬಡವನಾದರೆ ಏನು ಪ್ರಿಯೆ 
ಕೈ ತುತ್ತು ತಿನಿಸುವೆ

ನನ್ನ ಎದೆಯ ರಾಜ್ಯದಲ್ಲಿ 
ನೀನು ರಾಣಿಯಾಗುವೆ
ನನ್ನ ಎದೆಯ ರಾಜ್ಯದಲ್ಲಿ 
ನೀನು ರಾಣಿಯಾಗುವೆ
ಪುಟ್ಟ ಗುಡಿಸಲಲ್ಲಿ 
ನಿನ್ನ ಪಟ್ಟದರಸಿ ಮಾಡುವೆ
ಪುಟ್ಟ ಗುಡಿಸಲಲ್ಲಿ 
ನಿನ್ನ ಪಟ್ಟದರಸಿ ಮಾಡುವೆ

ಬಡವನಾದರೆ ಏನು ಪ್ರಿಯೆ 
ಕೈ ತುತ್ತು ತಿನಿಸುವೆ
ಬಡವನಾದರೆ ಏನು ಪ್ರಿಯೆ 
ಕೈ ತುತ್ತು ತಿನಿಸುವೆ

ಉಳ್ಳವರ ಎದೆಗೆ ಒದ್ದು 
ಮೈ ಮಾನ ಮುಚ್ಚುವೆ
ಉಳ್ಳವರ ಎದೆಗೆ ಒದ್ದು 
ಮೈ ಮಾನ ಮುಚ್ಚುವೆ
ರೆಟ್ಟೆ ಮೇಲೆ ಹೊತ್ತು ನಿನ್ನ 
ಜಗವ ಸುತ್ತಿ ತಣಿಸುವೆ
ರೆಟ್ಟೆ ಮೇಲೆ ಹೊತ್ತು ನಿನ್ನ 
ಜಗವ ಸುತ್ತಿ ತಣಿಸುವೆ

ಬಡವನಾದರೆ ಏನು ಪ್ರಿಯೆ 
ಕೈ ತುತ್ತು ತಿನಿಸುವೆ
ಬಡವನಾದರೆ ಏನು ಪ್ರಿಯೆ 
ಕೈ ತುತ್ತು ತಿನಿಸುವೆ

ಬೆವರು ಹರಿಸಿ ಹೂವ ಬೆಳೆಸಿ 
ಮುಡಿಯಲಿಟ್ಟು ನಗಿಸುವೆ
ಬೆವರು ಹರಿಸಿ ಹೂವ ಬೆಳೆಸಿ 
ಮುಡಿಯಲಿಟ್ಟು ನಗಿಸುವೆ
ಭುಜಕೆ ಭುಜವ ಹಚ್ಚಿ ನಿಂತು
ತೋಳುಬಂಧಿ ತೊಡಿಸುವೆ
ಭುಜಕೆ ಭುಜವ ಹಚ್ಚಿ ನಿಂತು
ತೋಳುಬಂಧಿ ತೊಡಿಸುವೆ

ಬಡವನಾದರೆ ಏನು ಪ್ರಿಯೆ 
ಕೈ ತುತ್ತು ತಿನಿಸುವೆ
ಬಡವನಾದರೆ ಏನು ಪ್ರಿಯೆ 
ಕೈ ತುತ್ತು ತಿನಿಸುವೆ

ಹರಿವ ನದಿಗೆ ಅಡ್ಡ ನಿಂತು 
ನಿನಗೆ ದಾರಿ ಮಾಡುವೆ
ಹರಿವ ನದಿಗೆ ಅಡ್ಡ ನಿಂತು 
ನಿನಗೆ ದಾರಿ ಮಾಡುವೆ
ಬಿಸಿಲು ಮಳೆಯ ಚಳಿಯ ನುಂಗಿ
ನೆರಳು ಬೆಳಕು ಆಗುವೆ
ಬಿಸಿಲು ಮಳೆಯ ಚಳಿಯ ನುಂಗಿ
ನೆರಳು ಬೆಳಕು ಆಗುವೆ

ಬಡವನಾದರೆ ಏನು ಪ್ರಿಯೆ 
ಕೈ ತುತ್ತು ತಿನಿಸುವೆ
ಎದೆಯ ತುಂಬ ಒತ್ತಿಕೊಂಡು 
ಮುತ್ತು ಮಳೆಯ ಸುರಿಸುವೆ

ಬಡವನಾದರೆ ಏನು ಪ್ರಿಯೆ 
ಕೈ ತುತ್ತು ತಿನಿಸುವೆ

Post a Comment

0 Comments