ಕುದುರೇನ ತಂದೀವ್ನಿ | ಕನ್ನಡ ಜಾನಪದ ಗೀತೆಗಳು [Kudurena Thandivni Lyrics in Kannada]: ಜಾನಪದ ಗೀತೆಗಳು ಸಾಮಾನ್ಯ ಜನರು ರಚಿಸಿದ ಹಾಡುಗಳು ಆದರೆ ಅವುಗಳಲ್ಲಿ ಅಸಾಧಾರಣ ಭಾವನೆ ಮತ್ತು ಭಕ್ತಿ ಇದೆ. ಅವರು ಎಲ್ಲಾ ರೀತಿಯ ಭಾವನೆಗಳು, ಸನ್ನಿವೇಶಗಳು ಮತ್ತು ಆಚರಣೆಗಳಿಗೆ ಹಾಡುಗಳನ್ನು ರಚಿಸಿದ್ದಾರೆ. ಈ ಜಾನಪದ ಹಾಡುಗಳನ್ನು ಪೀಳಿಗೆಯಿಂದ ಪೀಳಿಗೆಗೆ ರವಾನಿಸಲಾಗಿದೆ.
ಪ್ರಕಾರ: ಜಾನಪದ
ಭಾಷೆ: ಕನ್ನಡ
ಸಂಗೀತ: ಜನಪದ
ಸಾಹಿತ್ಯ: ಜನಪದ
ಗಾಯನ: ವಿವಿಧ ಗಾಯಕರು
ಭಾಷೆ: ಕನ್ನಡ
ಸಂಗೀತ: ಜನಪದ
ಸಾಹಿತ್ಯ: ಜನಪದ
ಗಾಯನ: ವಿವಿಧ ಗಾಯಕರು
ಕುದುರೇನ ತಂದೀವ್ನಿ | ಕನ್ನಡ ಜಾನಪದ ಗೀತೆಗಳು | Kudurena Thandivni Lyrics in Kannada
ಕುದುರೇನ ತಂದೀವ್ನಿ
ಜೀನಾವ ಬಿಗಿಸಿವ್ನಿ
ಬರಬೇಕು ತಂಗಿ ಮದುವೇಗೆ
ಬರಬೇಕು ತಂಗಿ ಮದುವೇಗೆ ||
ಜೀನಾವ ಬಿಗಿಸಿವ್ನಿ
ಬರಬೇಕು ತಂಗಿ ಮದುವೇಗೆ
ಬರಬೇಕು ತಂಗಿ ಮದುವೇಗೆ ||
ಅಂಗ್ಲ ಗುಡಿಸೋರಿಲ್ಲ
ಗಂಗ್ಲಾ ತೊಳೆಯೋರಿಲ್ಲ
ಹೆಂಗೆ ಬರಲಣ್ಣ ಮದುವೆಗೆ
ಅಂಗ್ಲಕ್ಕೆ ಆಳಿಡುವೆ
ಗಂಗ್ಲಾಕ್ಕೆ ತೊಟ್ಟಿಡುವೆ
ಬರಬೇಕು ತಂಗಿ ಮದುವೆಗೆ
ಬರಬೇಕು ತಂಗಿ ಮದುವೆಗೆ ||1||
ಮಳೆಯಾರ ಬಂದಿತ್ತು
ಹೊಳೆಯಾರ ತುಂಬಿತ್ತು
ಹೆಂಗೆ ಬರಲಣ್ಣ ಮದುವೆಗೆ
ಚಿನ್ನದ ಹರಿಗೋಲ್ಗೆ
ರನ್ನದ ಹುಟ್ಟುಹಾಕಿ
ಜೋಪಾನವಾಗಿ ಕರೆದೊಯ್ಯುವೆ
ಜೋಪಾನವಾಗಿ ಕರೆದೊಯ್ಯುವೆ ||2||
ರನ್ನದ ಮಗುವಣ್ಣ
ರಗಳೆಯ ಮಾಡಿತ್ತು
ಹೆಂಗೆ ಬರಲಣ್ಣ ಮದುವೆಗೆ
ರನ್ನದ ಮಗುವಿಗೆ
ಚಿನ್ನದ ಬಳೆ ಇಡುವೆ
ಬರಬೇಕು ತಂಗಿ ಮದುವೇಗೆ
ಬರಬೇಕು ತಂಗಿ ಮದುವೇಗೆ ||3||
ಅಮ್ಮನಿಲ್ಲದ ಮನೆಗೆ ನಾ
ಹ್ಯಾಂಗ ಬರಲಣ್ಣ
ಅಮ್ಮನಿಲ್ಲದ ತವರಿಗೆ
ಅಮ್ಮನ ಸ್ಥಾನದಲ್ಲಿ
ನಾನಿಲ್ಲವೇನು
ಬರಬೇಕು ತಂಗಿ ಮದುವೇಗೆ
ಬರಬೇಕು ತಂಗಿ ಮದುವೇಗೆ ||4||
0 Comments
Comment is awaiting for approval