ಭಾಷೆ: ಕನ್ನಡ
ಸಂಗೀತ:
ಸಾಹಿತ್ಯ: ಚೆನ್ನವೀರ ಕಣವಿ
ಗಾಯನ: ವಿವಿಧ ಗಾಯಕರು
ಸರ್ವ ಹೃದಯ ಸoಸ್ಕಾರಿ ಜಯ ಭಾರತಿ ।।
ಕರುನಾಡ ಸರಸ್ವತಿ
ಗುಡಿ ಗೋಪುರ ಸುರ ಶಿಲ್ಪ ಕಲಾಕೃತಿ
ಕೃಷ್ಣೆ ತುoಗೆ ಕಾವೇರಿ
ಪವಿತ್ರಿತ ಕ್ಷೇತ್ರ ಮನೋಹಾರಿ ||
ವಿಶ್ವ ವಿನೂತನ ವಿದ್ಯಾ ಚೇತನ
ಸರ್ವ ಹೃದಯ ಸoಸ್ಕಾರಿ ಜಯ ಭಾರತಿ ।।
ಗoಗ ಕದoಬ ರಾಷ್ಟ್ರಕೂಟ ಬಲ
ಚಾಲುಕ್ಯ ಹೊಯ್ಸಳ ಬಲ್ಲಾಳ
ಹಕ್ಕ ಬುಕ್ಕ ಪುಲಿಕೇಶಿ ವಿಕ್ರಮರ
ಚೆನ್ನಮ್ಮಾಜಿಯ ವೀರಶ್ರೀ ||
ವಿಶ್ವ ವಿನೂತನ ವಿದ್ಯಾ ಚೇತನ
ಸರ್ವ ಹೃದಯ ಸoಸ್ಕಾರಿ ಜಯ ಭಾರತಿ ।।
ತ್ಯಾಗ ಭೋಗ ಸಮಯೋಗದ ದೃಷ್ಟಿ
ಬೆಳುವೊಲ ಮಲೆ ಕರೆ ಸುoದರ ಸೃಷ್ಟಿ
ಜ್ಞಾನದ ವಿಜ್ಞಾನದ ಕಲೆಯೈಸಿರಿ
ಸಾರೋದಯ ಧಾರಾ ನಗರಿ ||
ವಿಶ್ವ ವಿನೂತನ ವಿದ್ಯಾ ಚೇತನ
ಸರ್ವ ಹೃದಯ ಸoಸ್ಕಾರಿ ಜಯ ಭಾರತಿ ।।
ಅರಿವೆ ಗುರುನುಡಿ ಜ್ಯೋತಿರ್ಲಿoಗ
ದಯವೇ ಧರ್ಮದ ಮೂಲ ತರoಗ
ವಿಶ್ವ ಭಾರತಿಗೆ ಕನ್ನಡದಾರತಿ
ಮೊಳಗಲಿ ಮಂಗಲ ಜಯಭೇರಿ ||
ವಿಶ್ವ ವಿನೂತನ ವಿದ್ಯಾ ಚೇತನ
ಸರ್ವ ಹೃದಯ ಸoಸ್ಕಾರಿ ||
ಜಯ ಭಾರತಿ ।।
ಜಯ ಭಾರತಿ ।।
ಜಯ ಭಾರತಿ ।।
0 Comments
Comment is awaiting for approval