Ticker

6/recent/ticker-posts

ಸನಿ-ಹಿತರೆ (ಸ್ನೇಹಿತರೆ)

ಕ್ಷಣ ಕ್ಷಣವು ನೀವು ನನ್ನ ಜೊತೆಯಲ್ಲಿ                                                    

ಮನಸ್ಸಿನ ನೋವು ನಲಿವಿನಲಿ
ಧೈರ್ಯ ಸಾಹಸ ಹೆಚ್ಚಿತು ಮನದಲಿ
ನೀವಿರಲು ಕಷ್ಟಗಳ ಹಿಮಪರ್ವತ ಕರಗಿತಿಲ್ಲಿ
ಸ್ನೇಹಿತರೆ ನನ್ನ ಆತ್ಮಿಯರೇ
ಋಣವನು ನಾ ಎಂದಿಗೂ ಮರೆಯಲಾರೆ

ಸ್ನೇಹದ ಈ ಒಗಟನಿನ್ನು
ಬಿಡಿಸಲು ನಾ ಬಲ್ಲೆನು
ಜಗಳದ ಆ ಕ್ಷಣಗಳನ್ನು
ನೆನೆದು ಮುಗುಳ್ ನಗುವೆನು
ನಿಮ್ಮ ಪ್ರೀತಿ ಇದೆ ನನ್ನ ಉಸಿರಾಗಿ
ನಿಮ್ಮ ನೆನಪಿಹುದು ಎಂದು ಹಸಿರಾಗಿ

ಕ್ಲಾಸಿನ ಆ ತರಲೆಯನ್ನು
ಮರೆಯಲಿನ್ನು ಸಾಧ್ಯವೇ?
ಕೇಳಿ ಕಲಿತ ಪಾಠ ಮಾತ್ರ
ನೆನಪಿನಲ್ಲಿ ಬಾರದೆ
ನಿಮ್ಮ ಸನಿಹವದು ನನ್ನ ಶಕ್ತಿಯಾಗಿ
ಪರಿಣಮಿಸುತಲಿದೆ ಈ ಹಾಡಾಗಿ
ಅರ್ಜುನ್ ಆತ್ರೇಯ
                                                          -  ಅರ್ಜುನ್ ಆತ್ರೇಯ         

ಆತ್ಮೀಯ  ಸ್ನೇಹಿತರಾದ ಅರ್ಜುನ್ ಆತ್ರೇಯ ಅವರಿಗೆ, ನನ್ನ ಈ ಬ್ಲಾಗ್ನಲ್ಲಿ ತಮ್ಮ ಬರಹವನ್ನು ಪೋಸ್ಟ್ ಮಾಡಲು ಅನುಮತಿ ನೀಡಿದಕ್ಕೆ ಧನ್ಯವಾದಗಳು. ಅರ್ಜುನ್ ಪ್ರಸ್ತುತ ಮುಂಬೈನಲ್ಲಿ ಕಂಪ್ಯೂಟರ್ ನೆಟ್ ವರ್ಕ್ ಕ್ಷೇತ್ರದಲ್ಲಿ ಪಿ ಹೆಚ್ ಡಿ ಮಾಡುತ್ತಿದ್ದರೆ. 

ಕನ್ನಡ ನೆಲ, ಸಂಸ್ಕೃತಿ, ಸಾಹಿತ್ಯ , ಸಂಗೀತ, ಜನಜೀವನದ ಬಗ್ಗೆ ಅಪಾರ ಆಸಕ್ತಿ ಹಾಗು ಕಾಳಜಿ ಹೊಂದಿರುವ ವ್ಯಕ್ತಿ, ಗೆಳೆಯ ಅರ್ಜುನ್. 

ಕೆಲವು ತಿಂಗಳ ಹಿಂದೆ ಅಷ್ಟೇ, ವಿವಾಹ ಜೀವನಕ್ಕೆ ಕಾಲಿಟ್ಟ ಅರ್ಜುನ್ ಹಾಗು ಅವರ ಶ್ರೀಮತಿ ಅವರಿಗೆ ನನ್ನ ಅಭಿನಂದನೆಗಳು.



 





Post a Comment

1 Comments

  1. ಅಭಿನಂದನೆಗಳು.
    ವಿವಾಹ ಜೀವನ ಸದಾ ಹಸಿರಾಗಿರಲಿ. ಪ್ರೀತಿ, ಶಾಂತಿ, ಸಂತೋಷ,ನೆಮ್ಮದಿ ತುಂಬಿರಲಿ.
    ಇನ್ನೂ ಹೆಚ್ಚು ಹೆಚ್ಚು ಬರೆಯುವಂತೆ ವಿನಂತಿ.

    ReplyDelete

Comment is awaiting for approval